PoliticsSports

ವಿನೇಶ್‌ ಫೋಗಟ್‌ ಬಗ್ಗೆ ಸಂಸದೆ ಕಂಗನಾ ಕೊಂಕು ಮಾತು!; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ

ನವದೆಹಲಿ; ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರತದ ವಿನೇಶ್‌ ಫೋಗಟ್‌ ಫೈನಲ್‌ ಪ್ರವೇಶ ಮಾಡಿದ್ದಾರೆ.. ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ವಿನೇಶ್‌ ಫೋಗಟ್‌ ಚಿನ್ನದ ಪದಕ ಗೆಲ್ಲುವ ಭರವಸೆ ಹುಟ್ಟಿಸಿದ್ದಾರೆ.. ಈ ಸಂದರ್ಭದಲ್ಲೇ ಸಂಸದೆ ಕಂಗನಾ ರಣೌತ್‌ ಕೊಂಕು ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.. ಇದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ..

ಇದನ್ನೂ ಓದಿ; ಇದ್ದಕ್ಕಿದ್ದಂತೆ ಕುಸಿದುಬಿದ್ದ ಕಾಳಿ ನದಿ ಸೇತುವೆ!; ನದಿಗೆ ಉರುಳಿಬಿತ್ತು ಖಾಲಿ ಟ್ರಕ್‌!

ಕಂಗನಾ ಅವರು ವಿನೇಶ್‌ ಫೋಗಟ್‌ ಗೆಲುವಿನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ.. ಭಾರತಕ್ಕೆ ಮೊದಲ ಚಿನ್ನ ಸಿಗಲಿ ಅನ್ನೋದು ಆಶಯ. ಇದರ ಜೊತೆಗೆ ವಿನೇಶ್‌ ಫೋಗಟ್‌ ಹೋರಾಟದಲ್ಲಿ ಭಾಗವಹಿಸಿದ್ದಾಗ ಮೋದಿ ನಿಮ್ಮ ಸಮಾಧಿಯನ್ನೂ ಅಗೆಯುತ್ತಾರೆ ಎಂದು ಹೇಳಿದ್ದರು.. ಆದರೂ ಕೂಡಾ ಅವರಿಗೆ ದೇಶವನ್ನು ಪ್ರತಿನಿಧಿಸುವ ಅವಕಾಶ ನೀಡಲಾಯಿತು. ಅತ್ಯುತ್ತಮ ತರಬೇತಿ ಹಾಗೂ ಸೌಲಬ್ಯಗಳನ್ನು ನೀಡಲಾಯಿತು. ಇದು ಪ್ರಜಾಪ್ರಭುತ್ವದ ಸೌಂದರ್ಯ ಹಾಗೂ ಉತ್ತರ ನಾಯಕತ್ವವನ್ನು ತಿಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ..
ಗೆಲುವಿನಲ್ಲೂ ಕಂಗನಾ ಈ ರೀತಿ ಕೊಂಕು ಮಾತನಾಡಿದ್ದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಇದನ್ನೂ ಓದಿ; ಕೊನೆಗೂ ಗೃಹಲಕ್ಷ್ಮಿಯರಿಗೆ ಶುಭಸುದ್ದಿ; ಇಂದಿನಿಂದ ಹಣ ಜಮೆ!

Share Post