ಕೊನೆಗೂ ವಿಮಾನ ಹತ್ತಿದ ಪ್ರಜ್ವಲ್; ತಿಂಗಳಿಂದ ಏರ್‌ಪೋರ್ಟ್ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ನಿರಾಳ!
ಬೆಂಗಳೂರು; ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಭಾರರದತ್ತ ಹೊರಟಿದ್ದಾರೆ.. LH764 ವಿಮಾನ ಮ್ಯೂನಿಕ್ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದ್ದು, ರಾತ್ರಿ 12.30ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.. ಪ್ರಜ್ವಲ್ ರೇವಣ್ಣ ವಿಮಾನ ಹತ್ತಿರುವ ವಿಚಾರ ತಿಳಿದು ಒಂದು ತಿಂಗಳಿಂದ ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದ ಮಾಧ್ಯಮ ಪ್ರತಿನಿಧಿಗಳು ನಿರಾಳರಾಗಿದ್ದಾರೆ.. ಸದ್ಯ ಬಂದರಲ್ಲಪ್ಪ, ದಿನಾ ಬೆಳಗ್ಗೆಯಿಂದ ಸಂಜೆವರೆಗೂ ಏರ್‌ಪೋರ್ಟ್ ಕಾಯೋ ಕಾಟ ತಪ್ಪಿತು ಎಂಬ ಭಾವನೆ ಅವರಲ್ಲಿ ಮೂಡಿದೆ..
ಪ್ರಜ್ವಲ್ ರೇವಣ್ಣ ಏಪ್ರಿಲ್ 27ರಂದು ವಿದೇಶಕ್ಕೆ ಪ್ರಯಾಣ ಮಾಡಿದ್ದರು.. ಆ ದಿನದಿಂದ ಯಾವಾಗ ಬೇಕಾದರೂ ಪ್ರಜ್ವಲ್ ಬರಬಹುದು ಅಂತ ಮಾಧ್ಯಮಗಳ ಪ್ರತಿನಿಧಿಗಳೆಲ್ಲಾ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದಾರೆ.. ಕಾದು ಕಾದು ಸಾಕಾಗಿದ್ದರು.. ಕೊನೆಗೂ ಪ್ರಜ್ವಲ್ ವಿಮಾನ ಹತ್ತಿದ್ದಾರೆ.. ರಾತ್ರಿ 12.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ.. ಅನಂತರ ವಿಮಾನ ನಿಲ್ದಾಣಕ್ಕೆ ದಿನವೂ ಬರೋದು ತಪ್ಪುತ್ತೆ ಅಂತ ಕೆಲ ಮಾಧ್ಯಮ ಪ್ರತಿನಿಧಿಗಳು ನಿರಾಳರಾಗಿ ಮಾತನಾಡಿದ್ದಾರೆ..
ಅಂದಹಾಗೆ, ಪ್ರಜ್ವಲ್ ಅವರು ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡುತ್ತಿದ್ದು, ಅವರ ಜೊತೆ ನಾಲ್ಕು ಬ್ಯಾಗ್‌ಗಳನ್ನು ತರಲಾಗುತ್ತಿದೆ.. ಪ್ರಜ್ವಲ್ ಅವರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆ ಇದೆ.. ಇದಕ್ಕಾಗಿ ವಿಮಾನ ನಿಲ್ದಾಣದ ಬಳಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ..