NationalTechTechnology

ತಾನು ಓದಿದ ಕಾಲೇಜಿಗೆ 228 ಕೋಟಿ ದೇಣಿಗೆ ನೀಡಿದ ಹಳೆಯ ವಿದ್ಯಾರ್ಥಿ!

ಚೆನ್ನೈ; ಓದಿದ ಶಾಲೆ, ಕಾಲೇಜನ್ನು ಮರೆಯುವವರೇ ಹೆಚ್ಚು.. ಅದರ ಎದುರೇ ಓಡಾಡುತ್ತಿದ್ದರೂ ಒಳಗೆ ಹೋಗಿ ಮಾತನಾಡಿಸುವುದಕ್ಕೂ ಜನಕ್ಕೆ ಪುರುಸೊತ್ತು ಇರೋದಿಲ್ಲ.. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾನು ಓದಿದ ಕಾಲೇಜಿಗೆ ಬರೋಬ್ಬರಿ 228 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.. ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಾಜಿ ಮದ್ರಾಸ್​ (IIT ಮದ್ರಾಸ್​) ಸಂಸ್ಥೆಗೆ ಡಾ.ಕೃಷ್ಣ ಚಿವುಕುಲ ಎಂಬುವವರು ಭಾರೀ ದೇಣಿಗೆ ನೀಡಿದ್ದಾರೆ.. 1970ರಲ್ಲಿ ಈ ಕಾಲೇಜಿನಲ್ಲಿ ಅವರು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದರು..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

ಆಂಧ್ರಪ್ರದೇಶ ಮೂಲದವರಾದ ಡಾ. ಕೃಷ್ಣ ಚಿವುಕುಲ ಶಿವ ಟೆಕ್ನಾಲಜೀಸ್ ಇಂಕ್ ಹಾಗೂ ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಥಾಪಕರಾಗಿದ್ದಾರೆ.. ಮದ್ರಾಸ್‌ ಐಐಟಿಯಲ್ಲಿ ಎಂಟೆಕ್‌ ಪಡೆದ ಅವರು 1980ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.. ಅನಂತರ ಸ್ವಂತ ಬ್ಯುಸಿನೆಸ್‌ ಶುರು ಮಾಡಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.. ಕಾಲೇಜಿನ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳುವುದಕ್ಕಾಗಿ ಕೃಷ್ಣ ಚಿವುಕುಲ ಅವರು 228 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.. ಈ ಹಿನ್ನೆಲೆಯಲ್ಲಿ ಐಐಟಿ ಮದ್ರಾಸ್‌ ತನ್ನೊಂದು ಬ್ಲಾಕ್‌ಗೆ ಡಾ.ಕೃಷ್ಣ ಚಿವುಕುಲ ಬ್ಲಾಕ್‌ ಎಂದು ಹೆಸರಿಟ್ಟು ನಾಮಕರಣ ಮಾಡಿದೆ..

ಇದನ್ನೂ ಓದಿ; ಪೋಸ್ಟಾಫೀಸ್‌ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!

Share Post