BengaluruPolitics

ಕೊನೆಗೂ ಗೃಹಲಕ್ಷ್ಮಿಯರಿಗೆ ಶುಭಸುದ್ದಿ; ಇಂದಿನಿಂದ ಹಣ ಜಮೆ!

ಮಂಡ್ಯ; ಕೊನೆಗೂ ಗೃಹಲಕ್ಷ್ಮೀಯವರಿಗೆ ಶುಭ ಸುದ್ದಿ ಸಿಕ್ಕಿದೆ.. ಇಂದಿನಿಂದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳು ವರ್ಗಾವಣೆ ಮಾಡಲಾಗುತ್ತಿದೆ.. ಹೀಗಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹೇಳಿದ್ದಾರೆ.. ಮಂಡ್ಯದಲ್ಲಿ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಜೂನ್‌ ಹಾಗೂ ಜುಲೈ ತಿಂಗಳ ಹಣ ಇನ್ನೂ ಜಮೆಯಾಗಿರಲಿಲ್ಲ. ಇದೀಗ ಎರಡೂ ತಿಂಗಳ ಹಣವನ್ನು ಜಮೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಪೋಸ್ಟಾಫೀಸ್‌ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!

ಶ್ರಾವಣ ಮಾಸದ ಮೊದಲ ಮಂಗಳವಾರದಂದೇ ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ ನೀಡಿದ್ದಾರೆ… ಹಣವನ್ನೇ ನೇರವಾಗಿ ಗೃಹಲಕ್ಷ್ಮಿಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳ ಹಣವನ್ನು ತಡೆಹಿಡಿಯಲಾಗಿತ್ತು.. ನಂತರ ಒಂದೇ ಬಾರಿ ಈ ಹಣವನ್ನು ವರ್ಗಾವಣೆ ಮಾಡಲಾಗಿತ್ತು.. ಅನಂತರ ಜೂನ್‌ ಮತ್ತು ಜುಲೈ ತಿಂಗಳ ಹಣವನ್ನು ನೀಡಿರಲಿಲ್ಲ.. ಇದೀಗ ಈ ಹಣವನ್ನು ಜಮೆ ಮಾಡಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ..

ಇದನ್ನೂ ಓದಿ; ದಸರಾ ಬಳಿಕ ಸಂಪುಟ ಸರ್ಜರಿಯಾಗುತ್ತಾ..?; ವೇಣುಗೋಪಾಲ್‌, ಸುರ್ಜೇವಾಲಾ ಗರಂ ಆಗಿದ್ದೇಕೆ..?

Share Post