ಇದ್ದಕ್ಕಿದ್ದಂತೆ ಕುಸಿದುಬಿದ್ದ ಕಾಳಿ ನದಿ ಸೇತುವೆ!; ನದಿಗೆ ಉರುಳಿಬಿತ್ತು ಖಾಲಿ ಟ್ರಕ್!
ಬೆಳಗಾವಿ; ಕಾಳಿ ನದಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣ ಮಾಡಿದ್ದ ಸೇತುವೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ.. ಇದೇ ವೇಳೆ ಸೇತುವೆ ಮೇಲೆ ಹೋಗುತ್ತಿದ್ದ ಖಾಲಿ ಟ್ರಕ್ ಒಂದು ನದಿಗೆ ಉರುಳಿಬಿದ್ದಿದೆ.. ಅದೃಷ್ಟವಶಾಂತ್ ಟ್ರಕ್ ಚಾಲಕನನ್ನು ಬೀಟ್ ಪೊಲೀಸರು ರಕ್ಷಣೆ ಮಾಡಿದ್ದಾರೆ.. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಈ ಘಟನೆ ನಡೆದಿದೆ.. ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ಕೊನೆಗೂ ಗೃಹಲಕ್ಷ್ಮಿಯರಿಗೆ ಶುಭಸುದ್ದಿ; ಇಂದಿನಿಂದ ಹಣ ಜಮೆ!
ರಾಷ್ಟ್ರೀಯ ಹೆದ್ದಾರಿ 66 ಅನ್ನು ನಿರ್ಮಿಸುವ ವೇಳೆ ಒಂದು ಹೊಸ ಸೇತುವೆಯನ್ನು ಗುತ್ತಿಗೆದಾರರು ನಿರ್ಮಿಸಿದ್ದರು.. ಆದ್ರೆ ಇನ್ನೊಂದು ಮಾರ್ಗದಲ್ಲಿ ಇದ್ದ 41 ವರ್ಷದ ಹಳೆಯ ಸೇತುವೆಯನ್ನು ಹಾಗೆಯೇ ಬಡಿಲಾಗಿತ್ತು.. ಆ ಸೇತುವೆಯನ್ನು ಹಾಗೆಯೇ ಬಳಸಲಾಗುತ್ತಿತ್ತು.. ಕೊಂಚ ಹಳೆಯದಾಗಿದ್ದರಿಂದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅದು ಕುಸಿದುಬಿದ್ದಿದೆ.. ಮಧ್ಯ ರಾತ್ರಿ ವೇಳೆಯಲ್ಲಿ ದುರ್ಘಟನೆ ಸಂಭವಿಸಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ.. ಹಗಲು ವೇಳೆಯಲ್ಲಿ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಓಡಾಡುತ್ತವೆ.. ಹಗಲಿನಲ್ಲಿದ್ದ ಕುಸಿದಿದ್ದರೆ ಅಪಾರ ಸಾವು ನೋವು ಸಂಭವಿಸುವ ಅಪಾಯವಿತ್ತು..
ಇದನ್ನೂ ಓದಿ; ಪೋಸ್ಟಾಫೀಸ್ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!
ಇನ್ನು ಸೇತುವೆ ಕುಸಿದಾಗ ಟ್ರಕ್ ಒಂದು ಕೂಡಾ ನದಿಗೆ ಬಿದ್ದಿದೆ.. ಟ್ರಕ್‌ನಲ್ಲಿದ್ದ ಚಾಲಕ ತಮಿಳುನಾಡು ಮೂಲದ ಬಾಲ ಮುರುಗನ್ ಅವರು ಲಾರಿ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ರಕ್ಷಣೆಗಾಗಿ ಕೂಗುತ್ತಿದ್ದರು.. ಈ ವೇಳೆ ಬೀಟ್ ಮೇಲೆ ಬಂದ ಪೊಲೀಸರು ಹಾಗೂ ಮೀನುಗಾರರು ಆತನನ್ನು ರಕ್ಷಣೆ ಮಾಡಿದ್ದಾರೆ..