DistrictsPolitics

ಚನ್ನಪಟ್ಟಣ ಉಪಚುನಾವಣೆ; ಬಂಡಾಯದ ಬಾವುಟ ಹಾರಿಸ್ತಾರಾ ಸಿ.ಪಿ.ಯೋಗೇಶ್ವರ್‌?

ರಾಮನಗರ; ಲೋಕಸಭಾ ಚುನಾವಣೆಯಲ್ಲಿ ದೋಸ್ತಿಯಾಗಿದ್ದ ಬಿಜೆಪಿ-ಜೆಡಿಎಸ್‌ ನಡುವೆ ಈಗ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಶುರುವಾಗಿದೆ.. ಬಿಜೆಪಿಯವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಶುರು ಮಾಡಿದಾಗ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.. ಅನಂತರ ಹೇಗೋ ಸಮಾಧಾನ ಮಾಡಿಕೊಂಡು ಬೆಂಬಲ ಕೊಡುತ್ತಿದ್ದಾರೆ.. ಇತ್ತ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಕೂಡಾ ಎರಡೂ ಪಕ್ಷಗಳಲ್ಲಿ ಒಮ್ಮತವಿಲ್ಲ.. ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು.. ಜೆಡಿಎಸ್‌ನವರೂ ನಮಗೇ ಆ ಕ್ಷೇತ್ರ ಬೇಕು ಎಂಬ ಪಟ್ಟು ಹಿಡಿದಂತೆ ಕಾಣುತ್ತಿದೆ.. ಈ ನಡುವೆ ಸಿ.ಪಿ.ಯೋಗೇಶ್ವರ್‌ ಬಂಡಾಯದ ಬಾವುಟ ಹಾರಿಸಲು ರೆಡಿಯಾಗಿ ನಿಂತಂತೆ ಕಾಣುತ್ತಿದೆ..

ಇದನ್ನೂ ಓದಿ; ಕೊನೆಗೂ ಗೃಹಲಕ್ಷ್ಮಿಯರಿಗೆ ಶುಭಸುದ್ದಿ; ಇಂದಿನಿಂದ ಹಣ ಜಮೆ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು.. ಆದ್ರೆ ದೇವೇಗೌಡರ ಅಳಿಯ ಮಂಜುನಾಥ್‌ ಅವರಿಗಾಗಿ ಸುಮ್ಮನಾಗಿದ್ದರು.. ಇದೀಗ ಅವರು ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ಕೇಳುತ್ತಿದ್ದಾರೆ.. ಆದ್ರೆ ಮೈತ್ರಿ ಪಕ್ಷ ಜೆಡಿಎಸ್‌ನಿಂದ ಇದಕ್ಕೆ ಇನ್ನೂ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ.. ಈ ನಡುವೆ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿಯವರನ್ನು ಸ್ಪರ್ಧೆಗಿಳಿಸಲು ಜೆಡಿಎಸ್‌ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಇದರ ನಡುವೆ ಸಿ.ಪಿ.ಯೋಗೇಶವರ್‌ ಬಂಡಾಯದ ಸುಳಿವು ಕೊಟ್ಟಿದ್ದಾರೆ..

ಇದನ್ನೂ ಓದಿ; ಪೋಸ್ಟಾಫೀಸ್‌ ಆರ್‌ಡಿ; ತಿಂಗಳಿಗೆ 5 ಸಾವಿರ ಹೂಡಿಕೆ, ಕೈಗೆ ಬರೋದು 8 ಲಕ್ಷ ರೂಪಾಯಿ!

ಬಿಜೆಪಿ ಹೈಕಮಾಂಡ್‌ನಿಂದಾಗಲೀ, ಜೆಡಿಎಸ್‌ನಿಂದಾಗಲೀ ಸಿ.ಪಿ.ಯೋಗೇಶ್ವರ್‌ ಅವರಿಗೆ ಸೂಕ್ತ ಭರವಸೆ ಸಿಕ್ಕಿಲ್ಲ.. ಹೀಗಾಗಿ ಅವರು ಸಮಾನ ಮನಸ್ಕ ವೇದಿಕೆ ರಚಿಸಿಕೊಂಡು ಜನರ ಅಭಿಪ್ರಾಯ ಸಂಗ್ರಹಿಸಲು ಹೊರಟಿದ್ದಾರೆ.. ಇದರ ಜೊತೆಗೆ ಇದೇ ಆಗಸ್ಟ್‌ 11ರಂದು ಚನ್ನಪಟ್ಟಣದಲ್ಲಿ ಬೃಹತ್‌ ಸಮಾವೇಶ ಕೂಡಾ ಆಯೋಜನೆ ಮಾಡಲಾಗಿದೆ.. ಚನ್ನಪಟ್ಟಣ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಈ ಸಮಾವೇಶ ಏರ್ಪಡಿಸಲಾಗಿದ್ದು, ಮೈತ್ರಿ ಪಕ್ಷಗಳಿಗೆ ಸೆಡ್ಡು ಹೊಡೆದು ಬಂಡಾಯ ಸಾರುವ ಸಲುವಾಗಿಯೇ ಈ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ..

Share Post