ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್‌ಗೆ ತವರಲ್ಲಿ ಅದ್ದೂರಿ ಸ್ವಾಗತ!
ಕಲಬುರಗಿ; ಮಹಿಳಾ ಐಪಿಎಲ್ ನಲ್ಲಿ ಆರ್‌ಸಿಬಿಗೆ ಕಪ್ ತಂದುಕೊಡುವಲ್ಲಿ ಉತ್ತರ ಕರ್ನಾಟದ ಶ್ರೇಯಾಂಕಾ ಪಾಟೀಲ್ ಶ್ರಮ ಕೂಡಾ ದೊಡ್ಡದಿದೆ.. ಮಹಿಳಾ ಆರ್‌ಸಿಬಿ ತಂಡ ಕಪ್ ಗೆದ್ದ ನಂತರ ಶ್ರೇಯಾಂಕ ಪಾಟೀಲ್ ಕರ್ನಾಟಕದ ಕ್ರಶ್ ಆಗಿಬಿಟ್ಟಿದ್ದಾರೆ.. ಆಕೆಯನ್ನು ಟಗರು ಪುಟ್ಟಿ ಅಂತಾನೂ ಪ್ರೀತಿಯಿಂದ ಕರೆಯುತ್ತಾರೆ.. ಇದೀಗ ಶ್ರೇಯಾಂಕಾ ಪಾಟೀಲ್ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಆಕೆಗೆ ಅದ್ದೂರಿ ಸ್ವಾಗತ ನೀಡಲಾಗಿದೆ..
ಇದನ್ನೂ ಓದಿ; ಹೊಸ ಚುನಾವಣಾ ಸಮೀಕ್ಷೆ; ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲೋದೆಷ್ಟು..?
ಶ್ರೇಯಾಂಕಾಗೆ ಹೂಮಳೆ ಸುರಿಸಿದ ಗ್ರಾಮಸ್ಥರು;
ಶ್ರೇಯಾಂಕಾ ಪಾಟೀಲ್ ಅವರ ಹುಟ್ಟೂರು ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಕೋಳಕೂರು ಗ್ರಾಮ.. ಸ್ವಗ್ರಾಮಕ್ಕೆ ನಿನ್ನೆ ಶ್ರೇಯಾಂಕಾ ಪಾಟೀಲ್ ಭೇಟಿ ನೀಡಿದ್ದರು.. ಶ್ರೇಯಾಂಕಾ ಬರುವುದನ್ನು ತಿಳಿದ ಗ್ರಾಮಸ್ಥರು, ಆಕೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.. ಶ್ರೇಯಾಂಕಾ ಮೇಲೆ ಹೂಮಳೆ ಸುರಿಸಿ ಅಭಿಮಾನ ಮೆರೆದಿದ್ದಾರೆ..
ಇದನ್ನೂ ಓದಿ; ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು
ಶ್ರೇಯಾಂಕಾ ಅದ್ದೂರಿ ಮೆರವಣಿಗೆ;
ಶ್ರೇಯಾಂಕಾ ಅವರನ್ನು ಸ್ವಗ್ರಾಮದಲ್ಲಿ ತೆರದ ಕಾರಿನಲ್ಲಿ ಮೆರವಣಿಗೆ ಮಾಡಲಾಯಿತು.. ಗ್ರಾಮದ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನದವರೆಗೂ ಮೆರವಣಿಗೆ ಮಾಡಿ, ಗ್ರಾಮದ ಹೆಣ್ಣು ಮಗಳಿಗೆ ಗೌರವ ಸೂಚಿಸಿದರು.. ಸನ್ಮಾನ ಮಾಡಿ ಸತ್ಕರಿಸಿದರು.. ಬಳಿಕ ಶ್ರೇಯಾಂಕಾ ಪಾಟೀಲ್ ಅವರು ಸಿದ್ದಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.. ಶ್ರೇಯಾಂಕಾ ಪಾಟೀಲ್ ಹಾಗೂ ಅವರ ಕುಟುಂಬಸ್ಥರಿಗೆ ಗ್ರಾಮಸ್ಥರೆಲ್ಲಾ ಸೇರಿ ಸನ್ಮಾನ ಮಾಡಿದರು.
ಇದನ್ನೂ ಓದಿ; 40 ಲಕ್ಷ ರೂ. ಸಂಬಳವಿರುವ 37ರ ಮಹಿಳೆಗೆ ವರ ಬೇಕಂತೆ; ಷರತ್ತು ಏನು ಗೊತ್ತಾ..?