Districts

ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು

ವಿಜಯಪುರ; ಫೇಲ್ಯೂರ್‌ ಆದ ಕೊಳವೆ ಬಾವಿಗಳನ್ನು ಮುಚ್ಚಬೇಕು ಅಂತ ಸರ್ಕಾರ ಕಾನೂನನ್ನೇ ಮಾಡಿದೆ.. ಆದ್ರೆ ಜನ ಅದನ್ನೂ ಮಾಡುತ್ತಿಲ್ಲ.. ಅದರೊಳಗೆ ಮಕ್ಕಳು ಬಿದ್ದರೆ ದೊಡ್ಡ ಅನಾಹುತವೇ ಆಗುತ್ತದೆ.. ಇಂತಹ ಘಟನೆಗಳು ಕರ್ನಾಟಕದಲ್ಲೇ ಸಾಕಷ್ಟು ಬಾರಿ ಆಗಿವೆ.. ಇದು ತಿಳಿದಿದ್ದರೂ ನಿರ್ಲಕ್ಷ್ಯ ವಹಿಸುತ್ತಾರೆ.. ಇಂತಹ ನಿರ್ಲಕ್ಷ್ಯಕ್ಕೆ ಮತ್ತೊಂದು ಅನಾಹುತ ಸಂಭವಿಸಿದೆ..

ಇದನ್ನೂ ಓದಿ; 40 ಲಕ್ಷ ರೂ. ಸಂಬಳವಿರುವ 37ರ ಮಹಿಳೆಗೆ ವರ ಬೇಕಂತೆ; ಷರತ್ತು ಏನು ಗೊತ್ತಾ..?

ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದ ಮಗು;

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಅನಾಹುತವೊಂದು ನಡೆದಿದೆ.. 2 ವರ್ಷ ಮಗು ಆಟವಾಡುತ್ತಾ ಕೊಳೆವೆ ಬಾವಿಗೆ ಬಿದ್ದಿದೆ.. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ… ಮಗುವನ್ನು ಹೊರತೆಗೆಯಲು ಜೆಸಿಬಿಗಳನ್ನು ಕರೆಸಲಾಗಿದೆ.. ಅಧಿಕಾರಿಗಳು ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ..

ಜಮೀನಿಲ್ಲಿ ಆಟವಾಡುತ್ತಿದ್ದ ಮಗು;

ಪೋಷಕರು ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದರು.. ಈ ವೇಳೆ ಮಗುವನ್ನು ಆಟವಾಡಲು ಬಿಟ್ಟಿದ್ದರು.. ಈ ವೇಳೆ ಮಗು ಆಟವಾಡುತ್ತಾ ಇತ್ತು.. ಹಾಗೆ ಆಟವಾಡುತ್ತಾ ಬೋರ್‌ವೆಲ್‌ ಬಳಿ ಹೋಗಿದೆ.. ಬೋರ್‌ವೆಲ್‌ ಕೊರೆಸಲಾಗಿದ್ದು, ನೀರು ಸಿಗದ ಕಾರಣ ಅದನ್ನು ಹಾಗೆಯೇ ಬಿಡಲಾಗಿತ್ತು. ಅದರ ಬಗ್ಗೆ ತಿಳಿಯದ ಮಗು ಅದರೊಳಗೆ ಬಿದ್ದಿದೆ.. ಸಾತ್ವಿಕ ಮುಜಗೊಂಡ ಎಂಬ ಮಗು ಕೊಳವೆ ಬಾವಿಯಲ್ಲಿ ಬಿದ್ದಿದೆ.. ಎಷ್ಟು ಅಡಿ ಆಳದಲ್ಲಿ ಮಗು ಇದೆ ಅನ್ನೋದು ಇನ್ನೂ ಗೊತ್ತಿಲ್ಲ… ಒಳಗೆ ಆಕ್ಸಿಜನ್‌ ಬಿಡಲಾಗಿದೆ..

ಇದನ್ನೂ ಓದಿ; ರಾಹುಲ್‌ ಗಾಂಧಿಗೆ ವಯನಾಡು ಗೆಲ್ಲೋದು ಅಷ್ಟು ಸುಲಭವಲ್ಲ..!; ಏನೇಳ್ತಾರೆ ಜನ..?

ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ;

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರು ದೌಡಾಯಿಸಿ ಜೆಸಿಬಿ ಯಂತ್ರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಬಾಲಕನ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.

ಇದನ್ನೂ ಓದಿ; ಬೆಂಗಳೂರಲ್ಲಿ ಇವತ್ತು ಮಳೆ ಬರುತ್ತೆ; ಮುಂದಿನ 5 ತಂಪೆರೆಯುವ ವರುಣ!

 

Share Post