Lifestyle

40 ಲಕ್ಷ ರೂ. ಸಂಬಳವಿರುವ 37ರ ಮಹಿಳೆಗೆ ವರ ಬೇಕಂತೆ; ಷರತ್ತು ಏನು ಗೊತ್ತಾ..?

ಮುಂಬೈ; ಮುಂಬೈನಲ್ಲಿರುವ ಮರಾಠಿ ಮಹಿಳೆಯೊಬ್ಬರು ವರನನ್ನು ಹುಡುಕುತ್ತಿದ್ದಾಳೆ… ಆಕೆ ಮುಂಬೈನಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ವರ್ಷಕ್ಕೆ 40 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ.. 37 ವರ್ಷದ ಆ ಮಹಿಳೆ ಈಗ ವರನನ್ನು ಹುಡುಕುತ್ತಿದ್ದಾಳೆ.. ಆಕೆ ಹಲವು ಷರತ್ತುಗಳನ್ನು ವಿಧಿಸಿದ್ದು, ಅದಕ್ಕೆ ಒಪ್ಪುವುದಾದರೆ ಮದುವೆಯಾಗುವುದಾಗಿ ಆಕೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ; ರಾಹುಲ್‌ ಗಾಂಧಿಗೆ ವಯನಾಡು ಗೆಲ್ಲೋದು ಅಷ್ಟು ಸುಲಭವಲ್ಲ..!; ಏನೇಳ್ತಾರೆ ಜನ..?

ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌;

ಮುಂಬೈನಲ್ಲಿ ಆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಹಾಕಿದ್ದಾಳೆ.. ತನಗೆ ಎಂಥಾ ವರ ಬೇಕು ಎಂಬುದನ್ನು ಬರೆದುಕೊಂಡಿದ್ದಾಳೆ.. @Ambar_SIFF_MRA ಎಂಬ ಟ್ವಿಟರ್​ ಖಾತೆಯಲ್ಲಿ ಏಪ್ರಿಲ್​​ 02ರಂದು ಈ ಪೋಸ್ಟ್‌ ಮಾಡಲಾಗಿದೆ.. ಅದರಲ್ಲಿ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು.. ಅದನ್ನು ನೋಡಿದ ಜನ ಹೌಹಾರಿದ್ದಾರೆ…

ಇದನ್ನೂ ಓದಿ; ಬೆಂಗಳೂರಲ್ಲಿ ಇವತ್ತು ಮಳೆ ಬರುತ್ತೆ; ಮುಂದಿನ 5 ತಂಪೆರೆಯುವ ವರುಣ!

ಟ್ವಿಟರ್‌ ಪೋಸ್ಟ್‌ನಲ್ಲಿ ಏನಿದೆ..?

Expectation of groom by a 37 year old female earning 4,00,000 per year, translated from Marathi. This is next level delusion. pic.twitter.com/0ohyDboqpd

— Ambar (@Ambar_SIFF_MRA) April 2, 2024

ಹೀಗಂತ ಮಹಿಳೆ ಬರೆದುಕೊಂಡಿದ್ದಾಋೆ.. ಇದರ ಜೊತೆಗೆ ಹಲವು ಷರತ್ತುಗಳನ್ನು ವಿಧಿಸಿದ್ದಾಳೆ.. ಅವುಗಳ ಬಗ್ಗೆ ಈಗ ತಿಳಿಯೋಣ..

ಇದನ್ನೂ ಓದಿ; ಬಿಎಂಟಿಸಿ ಬಸ್‌ ಚಾಲಕನ ಮೇಲೆ ಚಿರತೆ ಅಟ್ಯಾಕ್‌..!; ಬಸ್‌ಗೆ ನುಗ್ಗಿದ ಕಾಡುಮೃಗ!

ಕನಿಷ್ಠ 1 ಕೋಟಿ ರೂಪಾಯಿ ಸಂಬಳವಿರಬೇಕು;

ನನಗೆ ವರ್ಷಕ್ಕೆ 40 ಲಕ್ಷ ರೂಪಾಯಿ ಸಂಬಳವಿದೆ.. ನನ್ನನ್ನು ಮದುವೆಯಾಗುವ ಗಂಡು ಡಾಕ್ಟರ್‌, ಸಿಎ, ಅಥವಾ ಯಾವುದಾದರೂ ಉನ್ನತ ಹುದ್ದೆಯಲ್ಲಿರಬೇಕು.. ಸಂಬಳ ವರ್ಷಕ್ಕೆ ಕನಿಷ್ಠ 1 ಕೋಟಿ ರೂಪಾಯಿ ಇರಬೇಕು ಎಂದು ಬರೆದುಕೊಂಡಿದ್ದಾಳೆ.. ಜೊತೆಗೆ ಮುಂಬೈನಲ್ಲಿ ಸ್ವಂತ ಮನೆ ಹೊಂದಿರುವವ ವ್ಯಕ್ತಿಗೆ ಆದ್ಯತೆ ಎಂದೂ ಬರೆದುಕೊಂಡಿದ್ದಾಳೆ.. ಈ ಬೇಡಿಕೆಗಳನ್ನೆಲ್ಲಾ ನೋಡಿ ಜನ ಹೌಹಾರಿದ್ದಾರೆ.. ನಿಮಗೆ ವರ ಸಿಗೋದಿಲ್ಲ ಬಿಡಿ ಎಂದು ಕೆಲವರು ರಿಪ್ಲೈ ಮಾಡಿದ್ದಾರೆ..

ಇದನ್ನೂ ಓದಿ; ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಬೆಲೆಯೇ ಇಲ್ಲವೇ..?; ವಿಜಯ್‌ಗೆ ಅವಕಾಶ ಸಿಗದಿದ್ದು ಯಾಕೆ..?

ನಿಮ್ಮ ಕನಸಿನ ರಾಜಕುಮಾರ ಸಿಗಲ್ಲ;

ಈ ಪೋಸ್ಟ್‌ ಹಾಕುತ್ತಿದ್ದಂತೆ ಲಕ್ಷಾಂತರ ಜನ ಇದನ್ನು ವೀಕ್ಷಣೆ ಮಾಡಿದ್ದಾರೆ.. ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸುವವರು ಭಾರತದಲ್ಲಿ ಕಡಿಮೆ ಇದಾರೆ. ಇಂತಹದ್ದರಲ್ಲಿ ನಿಮಗೆ ವರ ಹೇಗೆ ಸಿಗುತ್ತಾನೆ.. ನಿಮ್ಮ ಕನಸಿನ ರಾಜಕುಮಾರ ನಿಮಗೆ ಸಿಗುವುದಿಲ್ಲ ಬಿಡಿ ಎಂದು ಕೆಲವರು ಬರೆದುಕೊಂಡಿದ್ದಾರೆ..

ಇದನ್ನೂ ಓದಿ; ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?

 

Share Post