Politics

ವಿಪ್‌ ಉಲ್ಲಂಘನೆ; ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಅನರ್ಹರಾಗ್ತಾರಾ..?

ಬೆಂಗಳೂರು; ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣೆ ಮುಕ್ತಾಯವಾಗಿದೆ. ರಾಜ್ಯದಲ್ಲಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್‌ ಹಾಗೂ ಒಂದು ಸ್ಥಾನದಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ವಿಪ್‌ ಉಲ್ಲಂಘಿಸಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿದ್ದಾರೆ. ಇನ್ನೊಬ್ಬ ಶಾಸಕರ ಶಿವರಾಮ್‌ ಹೆಬ್ಬಾರ್‌ ಮತದಾನಕ್ಕೆ ಹಾಜರಾಗದೆ ವಿಪ್‌ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಇವರಿಬ್ಬರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸುವುದಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹಾಗಾದರೆ ಈ ಇಬ್ಬರು ಶಾಸಕರು ಅನರ್ಹಗೊಳ್ಳುತ್ತಾರಾ..? ಕಾನೂನು ಏನು ಹೇಳುತ್ತದೆ..? ಅನರ್ಹರಾದರೆ ಅವರ ರಾಜಕೀಯ ಭವಿಷ್ಯವೇನು..? ನೋಡೋಣ ಬನ್ನಿ…

ಇದನ್ನೂ ಓದಿ; ಕರ್ಕಶವಾದ ಲೌಡ್‌ ಸ್ಪೀಕರ್‌ ಅವನು..!; ಮೋದಿಯನ್ನು ಏಕವಚನದಲ್ಲಿ ಟೀಕಿಸಿದ ನಟ ಪ್ರಕಾಶ್‌ ರಾಜ್‌

ಪಕ್ಷ ಹೇಳಿದಂತೆ ಕೇಳಬೇಕು.. ಕೇಳದಿದ್ದರೆ ಅನರ್ಹತೆಗೆ ಅವಕಾಶ;

ಪಕ್ಷ ಹೇಳಿದಂತೆ ಕೇಳಬೇಕು.. ಕೇಳದಿದ್ದರೆ ಅನರ್ಹತೆಗೆ ಅವಕಾಶ; ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ವಿಪ್‌ ನೀಡಿದ್ದರೆ, ಆ ಪಕ್ಷ ಶಾಸಕರು ವಿಪ್‌ ನಂತೆ ನಡೆದುಕೊಳ್ಳಬೇಕು.. ಅದನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.. ಅವರ ಶಾಸಕತ್ವ ಅನರ್ಹತೆಗೂ ಅವಕಾಶವಿದೆ.. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಇಂದು ಬಿಜೆಪಿ ನಾಯಕರು ವಿಧಾನಸಭಾ ಸ್ಫೀಕರ್‌ ಅವರನ್ನು ಭೇಟಿಯಾಗಿ, ಇಬ್ಬರೂ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಕೋರ್ಟ್‌ ಮೊರೆಹೋಗಿ ಅಲ್ಲಿಂದಲೂ ಇಬ್ಬರು ಶಾಸಕರ ಅನರ್ಹತೆ ಆದೇಶ ಬರುವಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ. ಈಗಾಗಲೇ ಕಾನೂನು ತಜ್ಞರ ಜೊತೆ ಈ ಬಗ್ಗೆ ಚರ್ಚೆ ಕೂಡಾ ನಡೆದಿದೆ.

ಇದನ್ನೂ ಓದಿ; ವಿಧಾನಸೌಧದ ಬಳಿ ಪಾಕ್‌ ಪರ ಘೋಷಣೆ ಕೂಗಿದ್ರಾ..?; ಅಲ್ಲಿ ನಡೆದಿದ್ದಾರೂ ಏನು..?

ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತಾರಾ ಶಾಸಕರು..?;

ಶಾಸಕತ್ವಕ್ಕೆ ರಾಜೀನಾಮೆ ನೀಡುತ್ತಾರಾ ಶಾಸಕರು..?; ಬಿಜೆಪಿ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುವಂತೆ ನಡೆದುಕೊಂಡಿದ್ದಾರೆ. ಎಸ್‌.ಟಿ.ಸೋಮಶೇಖರ್‌ ನೇರವಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದರೆ, ಶಿವರಾಮ್‌ ಹೆಬ್ಬಾರ್‌ ಅವರು ಮತದಾನಕ್ಕೆ ಹಾಜರಾಗದೇ ಕಾಂಗ್ರೆಸ್‌ಗೆ ಅನುಕೂಲವಾಗುವಂತೆ ನೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇವರಿಬ್ಬರನ್ನು ಅನರ್ಹಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

ಇದನ್ನೂ ಓದಿ; Money Tips; ಕೂಲಿ ಮಾಡಿ ಕೋಟಿ ದುಡಿ; ಈಗ ಕೋಟ್ಯಧೀಶರಾಗೋದು ದೊಡ್ಡ ಮಾತಲ್ಲ!

ಈ ನಡುವೆ ಈ ಇಬ್ಬರೂ ಶಾಸಕರು ಕೆಲ ತಿಂಗಳುಗಳಿಂದ ಕಾಂಗ್ರೆಸ್‌ ನಾಯಕರ ಜೊತೆ ಸಂಪರ್ಕ ಹೊಂದಿದ್ದರು. ಇಬ್ಬರೂ ಕಾಂಗ್ರೆಸ್‌ ಸೇರುತ್ತಾರೆ ಎಂದು ಹೇಳಲಾಗುತ್ತಿತ್ತು.. ಹೀಗಾಗಿ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆಯ ಮುಜುಗರದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಇಬ್ಬರೂ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆ ಇದೆ. ನಂತರ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿ, ಗೆದ್ದು ಬರುವ ಉತ್ಸಾಹದಲ್ಲಿ ಇಬ್ಬರೂ ಶಾಸಕರಿದ್ದಾರೆ. ಇದೇ ಧೈರ್ಯದ ಮೇಲೆ ಇವರು ರಾಜ್ಯಸಭಾ ಚುನಾವಣೆಯಲ್ಲಿ ವಿಪ್‌ ಉಲ್ಲಂಘನೆ ಮಾಡಿದ್ದಾರೆ.

ಇದನ್ನೂ ಓದಿ; Rajyasabha; 25 ಕೋಟಿ ರೂಪಾಯಿ ಪಡೆದು ಮತ ಹಾಕಿದರಾ ಶಾಸಕ ಎಸ್‌.ಟಿ.ಸೋಮಶೇಖರ್‌..?

ಪುತ್ರರನ್ನು ಕಣಕ್ಕಿಳಿಸುತ್ತಾರಾ ಶಾಸಕರು..?;

ಪುತ್ರರನ್ನು ಕಣಕ್ಕಿಳಿಸುತ್ತಾರಾ ಶಾಸಕರು..?; ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಹೆಬ್ಬಾರ್‌ ಅವರು ತಮ್ಮ ಬದಲಾಗಿ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಕರೆತರಲು ಚಿಂತಿಸುತ್ತಿದ್ದಾರೆ ಎನ್ನಲಾಗ್ತಿದೆ. ಅವರ  ಕ್ಷೇತ್ರಗಳಲ್ಲಿ ಮಕ್ಕಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಯೋಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೇ ಬಿಜೆಪಿ ಶಾಸಕರಾಗಿ ಮುಂದುವರೆಯಬೇಕು ಅಂದ್ರೆ ಕಾನೂನು ಹೋರಾಟ ಮುಂದುವರೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

 

Share Post