ಕರ್ಕಶವಾದ ಲೌಡ್ ಸ್ಪೀಕರ್ ಅವನು..!; ಮೋದಿಯನ್ನು ಏಕವಚನದಲ್ಲಿ ಟೀಕಿಸಿದ ನಟ ಪ್ರಕಾಶ್ ರಾಜ್
ಬೆಂಗಳೂರು; ನಟ ಪ್ರಕಾಶ್ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡಿ ಬಿಜೆಪಿಯ ಕೆಂಗಣ್ಣಿಗೂ ಗುರಿಯಾಗುತ್ತಿರುತ್ತಾರೆ. ಇದೀಗ ಅವರು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯದ್ದು ಕರ್ಕಶ ಧ್ವನಿಯಂತೆ. ಕರ್ಕಶವಾದ ಲೌಡ್ ಸ್ಪೀಕರ್ ಅವನು ಎಂದು ಪ್ರಕಾಶ್ ರಾಜ್ ಮೋದಿಯವರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ; Money Tips; ಕೂಲಿ ಮಾಡಿ ಕೋಟಿ ದುಡಿ; ಈಗ ಕೋಟ್ಯಧೀಶರಾಗೋದು ದೊಡ್ಡ ಮಾತಲ್ಲ!
ಅಂದು ಸ್ವಾತಂತ್ರ್ಯಕ್ಕೆ ಉಪವಾಸ, ಇಂದು ದೇಗುಲಕ್ಕೆ ಉಪವಾಸ;
ಅಂದು ಸ್ವಾತಂತ್ರ್ಯಕ್ಕೆ ಉಪವಾಸ, ಇಂದು ದೇಗುಲಕ್ಕೆ ಉಪವಾಸ; ಮಂಗಳೂರು ಹೊರವಲಯದ ತೊಕ್ಕೋಟ್ಟು ಎಂಬಲ್ಲಿ ನಡೆಯುತ್ತಿರುವ ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನದಲ್ಲಿ ಪ್ರಕಾಶ್ ರಾಜ್ ಮಾಡಿರುವ ಭಾಷಣ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಂದು ಸ್ವಾತಂತ್ರ್ಯಕ್ಕಾಗಿ ಹಲವು ಗಣ್ಯರು ಉಪವಾಸ ಮಾಡಿದ್ದರು, ಆದ್ರೆ ಇಂದು ದೇವಸ್ಥಾನದ ಉದ್ಘಾಟನೆಗಾಗಿ ಉಪವಾಸ ಮಾಡುತ್ತಿದ್ದಾರೆ. ಅಂತಹ ನಾಯಕನನ್ನು ನಾವು ಪಡೆದಿದ್ದೇವೆ ಎಂದೂ ಪ್ರಕಾಶ್ ರಾಜ್ ಮೂದಲಿಸಿದ್ದಾರೆ.
ಇದನ್ನೂ ಓದಿ; ವಿಧಾನಸೌಧದ ಬಳಿ ಪಾಕ್ ಪರ ಘೋಷಣೆ ಕೂಗಿದ್ರಾ..?; ಅಲ್ಲಿ ನಡೆದಿದ್ದಾರೂ ಏನು..?
ದಿನಕ್ಕೆ 5 ಕಾಸ್ಟ್ಯೂಮ್ ಬದಲಿಸ್ತಾರಂತೆ ಮೋದಿ;
ದಿನಕ್ಕೆ 5 ಕಾಸ್ಟ್ಯೂಮ್ ಬದಲಿಸ್ತಾರಂತೆ ಮೋದಿ; ಮೋದಿ ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್ ಮಾಡ್ತಾನೆ. 2019ರಲ್ಲಿ ಗುಹೆ ಸೇರಿದ್ದ ಮೋದಿ, ಈಗ ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆ ವೇಳೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ ಅಂತ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ. ನಮ್ಮ ದೇಶದಲ್ಲಿ ಇಂತಹ ನಾಯಕ ಇದ್ದಾನೆ. ಆತ ದೇಶವನ್ನ ಹೇಗೆ ಮಂಗ ಮಾಡ್ತಾನೆ ನೋಡಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ; Rajyasabha; 25 ಕೋಟಿ ರೂಪಾಯಿ ಪಡೆದು ಮತ ಹಾಕಿದರಾ ಶಾಸಕ ಎಸ್.ಟಿ.ಸೋಮಶೇಖರ್..?
ಸ್ಟೇಷನ್ ಮಾಸ್ಟರ್ ಕೂಡಾ ಇಷ್ಟು ಬಾರಿ ಬಾವುಟ ತೋರಿಸಿರಲ್ಲ;
ಸ್ಟೇಷನ್ ಮಾಸ್ಟರ್ ಕೂಡಾ ಇಷ್ಟು ಬಾರಿ ಬಾವುಟ ತೋರಿಸಿರಲ್ಲ; ಮೋದಿಯವರು ವಂದೇ ಭಾರತ್ ಸೇರಿದಂತೆ ಹಲವು ಹೊಸ ರೈಲುಗಳಿಗೆ ಚಾಲನೆ ನೀಡುತ್ತಿದ್ದಾರೆ. ಇದನ್ನೂ ಕೂಡಾ ನಟ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ. ಈತ ವಂದೇ ಭಾರತ್ ರೈಲುಗಳಿಗೆ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಕೂಡಾ ತೋರಿಸಿರೋದಿಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ನಂತಹ ಕಿಡ್ನಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದೂ ಇಲ್ಲ. ಭಗತ್ ಸಿಂಗ್ರನ್ನು ಕಿಡ್ನಾಪ್ ಮಾಡಿದ್ದಾರೆ ಎಂದೂ ಪ್ರಕಾಶ್ ರಾಜ್ ಆರೋಪ ಮಾಡಿದ್ದಾರೆ.
ಹೀಗೆ ನಟ ಪ್ರಕಾಶ್ ರಾಜ್ ಅವರು ಮೋದಿಯವರನ್ನು ಏಕವಚನದಲ್ಲೇ ಬೈದಿದ್ದಾರೆ. ಇಡೀ ಭಾಷಣದ ತುಂಬಾ ಮೋದಿಯವರ ವಿರುದ್ಧವೇ ಮಾತನಾಡಿದ್ದಾರೆ. ಈ ಮೊದಲು ಟ್ವೀಟ್ ಮೂಲಕ ಮೋದಿ ವಿರುದ್ಧ ಮಾತನಾಡುತ್ತಿದ್ದ ಪ್ರಕಾಶ್ ರಾಜ್ ಅವರು, ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗುತ್ತಿದ್ದರು. ಇದೀಗ ನೇರವಾಗಿ ಅವರು ಮೋದಿ ವಿರುದ್ಧ ಏಕವಚನದಲ್ಲೇ ಮಾತನಾಡಿದ್ದಾರೆ. ಹಲವಾರು ವಿಚಾರಗಳನ್ನು ಮುಂದಿಟ್ಟು ಮೋದಿ ದೇಶಕ್ಕೆ ಏನೂ ಮಾಡಿಲ್ಲ ಎಂದು ಹೇಳಿದ್ದಾರೆ. ಪ್ರಕಾಶ್ ರಾಜ್ ಅವರ ಈ ಹೇಳಿಕೆ ವಿಚಾರ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ಕೇಳಿಬರುತ್ತಿವೆ.
ಇದನ್ನೂ ಓದಿ;ನಿಂಬೆ ರಸ ಸೇವನೆ ಒಳ್ಳೆಯದೇ..?; ಬೇಸಿಗೆಯಲ್ಲಿ ಹೆಚ್ಚು ನಿಂಬೆ ಸೇವಿಸೀರಿ ಹುಷಾರ್!