Pakistan Slogan; ಪಾಕಿಸ್ತಾನ ಪರ ಘೋಷಣೆ ವಿವಾದ; ಕಾಂಗ್ರೆಸ್ ನಾಯಕರು ಏನಂತಾರೆ..?
ಬೆಂಗಳೂರು; ಕಳೆದ ರಾತ್ರಿ ವಿಧಾನಸೌಧದ ಆವರಣದಲ್ಲಿ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ತೀವ್ರಗೊಂಡಿದೆ.. ಈ ಬೆನ್ನಲ್ಲೇ ಬಿಜೆಪಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಿದ್ದಾರೆ.. ಇತ್ತ ಕಾಂಗ್ರೆಸ್ ನಾಯಕರು ಕೂಡಾ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಯಾರು ಏನಂದ್ರು..? ನೋಡೋಣ ಬನ್ನಿ..
ಇದನ್ನೂ ಓದಿ; ವಿಪ್ ಉಲ್ಲಂಘನೆ; ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅನರ್ಹರಾಗ್ತಾರಾ..?
ಘೋಷಣೆ ಸಾಬೀತಾದರೆ ಯಾರೇ ಆದರೂ ಕಠಿಣ ಕ್ರಮ;
ಘೋಷಣೆ ಸಾಬೀತಾದರೆ ಯಾರೇ ಆದರೂ ಕಠಿಣ ಕ್ರಮ; ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ. ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿದೆಯೇ ಎಂಬುದರ ಬಗ್ಗೆ ಮೊದಲ ತನಿಖೆ ನಡೆಯಬೇಕಿದೆ. ಈಗಾಗಲೇ ವಿಡಿಯೋ ತುಣುಕುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘೋಷಣೆ ಕೂಗಿರುವುದು ನಿಜವೇ ಆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರು ಯಾರೇ ಆಗಿದ್ದರೂ ಕ್ರಮ ಗ್ಯಾರೆಂಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ; ಕರ್ಕಶವಾದ ಲೌಡ್ ಸ್ಪೀಕರ್ ಅವನು..!; ಮೋದಿಯನ್ನು ಏಕವಚನದಲ್ಲಿ ಟೀಕಿಸಿದ ನಟ ಪ್ರಕಾಶ್ ರಾಜ್
ತೀವ್ರವಾಗಿ ಖಂಡಿಸುತ್ತೇನೆ ಎಂದು ಸ್ಪೀಕರ್;
ತೀವ್ರವಾಗಿ ಖಂಡಿಸುತ್ತೇನೆ ಎಂದು ಸ್ಪೀಕರ್; ಇನ್ನು ಈ ಘಟನೆ ಸಂಬಂಧ ಸ್ಪೀಕರ್ ಯು.ಟಿ.ಖಾದರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ ಅದು ತಪ್ಪಾಗುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ತನಿಖೆಯಾಗುತ್ತಿವೆ. ಘೋಷಣೆ ಕೂಗಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚನೆ ಕೊಡುತ್ತೇನೆ ಎಂದೂ ಯು.ಟಿ.ಖಾದರ್ ತಿಳಿಸಿದ್ದಾರೆ.
ವಿಡಿಯೋ ಕ್ಲಿಪ್ಪಿಂಗ್ ಸೆಕ್ಯೂರ್ ಮಾಡುತ್ತಿದ್ದೇವೆಂದ ಪರಮೇಶ್ವರ್;
ವಿಡಿಯೋ ಕ್ಲಿಪ್ಪಿಂಗ್ ಸೆಕ್ಯೂರ್ ಮಾಡುತ್ತಿದ್ದೇವೆಂದ ಪರಮೇಶ್ವರ್; ಚಾನಲ್‌ಗಳಲ್ಲಿ ಟೆಲಿಕ್ಯಾಸ್ಟ್ ಆಗಿರುವ ವಿಡಿಯೋ ಕ್ಲಿಪ್ಪಿಂಗ್ ಅನ್ನು ಸೆಕ್ಯೂರ್ ಮಾಡುತ್ತಿದ್ದೇವೆ. ಆ ಕ್ಲಿಪ್ಪಿಂಗ್ ಪಡೆದು ತನಿಖೆ ಮಾಡಲಾಗುತ್ತದೆ. ಘಟನೆಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ಈಗಾಗಲೇ ಪೊಲೀಸರು ಈ ಬಗ್ಗೆ ಸುಮೋಟೋ ಕೇಸ್ ದಾಖಲಿಸಿದ್ದಾರೆ. ವಿಧಾನಸೌಧದ ಕ್ಯಾಮರಾಗಳ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಪಡೆದು ಎಫ್‌ಎಸ್‌ಎಲ್ ವರದಿಗೆ ಕಳುಹಿಸಿದ್ದೇವೆ. ಯಾರಾದರೂ ಆ ರೀತಿ ಘೋಷಣೆ ಕೂಗಿರುವುದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ; Money Tips; ಕೂಲಿ ಮಾಡಿ ಕೋಟಿ ದುಡಿ; ಈಗ ಕೋಟ್ಯಧೀಶರಾಗೋದು ದೊಡ್ಡ ಮಾತಲ್ಲ!
ಟೆಲಿಕ್ಯಾಸ್ಟ್ ಆಗಿರುವ ವಿಡಿಯೋವನ್ನು ಎಫ್‌ಎಎಸ್‌ಎಲ್‌ಗೆ ಕಳುಹಿಸಲಾಗ್ತಿದೆ. ಇನ್ನು ಪೊಲೀಸರು ಮಾಡಿರೋ ವಿಡಿಯೋ, ವಿಧಾನಸೌಧ ಸಿಸಿ ಕ್ಯಾಮರಾ ದೃಶ್ಯಗಳು ಎಲ್ಲವನ್ನು ಪಡೆದು ತನಿಖೆ ನಡೆಸುತ್ತಿದ್ದೇವೆ. ಕೆಲವರು ʼನಾಸಿರ್ ಸಾಬ್ʼ ಅಂತಾರೆ, ಕೆಲವರು ʼಪಾಕಿಸ್ತಾನ್ʼ ಅಂತಾರೆ. ಇದರ ಸತ್ಯಾಸತ್ಯತೆ ಏನು ಪರೀಕ್ಷೆ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಎಂದು ಪ್ರಿಯಾಂಕ್ ಖರ್ಗೆ;
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಎಂದು ಪ್ರಿಯಾಂಕ್ ಖರ್ಗೆ; ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಹೇಳೋದೇ ಬೇರೆ.. ಮಾಧ್ಯಮ ಸ್ನೇಹಿತರೇ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿಲ್ಲ ಎಂದು ಬರೆದುಕೊಳ್ತಿದ್ದಾರೆ. ಆ ರೀತಿ ಕೂಗಿದ್ದಾರೆ ಎಂಬುದು ಎಲ್ಲಿದೆ ತೋರಿಸಿ ಎಂದು ಸಚಿವರು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಮಾಡಲು ಏನೂ ಕೆಲಸ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ; ವಿಧಾನಸೌಧದ ಬಳಿ ಪಾಕ್ ಪರ ಘೋಷಣೆ ಕೂಗಿದ್ರಾ..?; ಅಲ್ಲಿ ನಡೆದಿದ್ದಾರೂ ಏನು..?