CrimePolitics

ಸಿಎಂ ಬೆಂಗಾವಲು ವಾಹನದ ಹಿಂದಿನ ಕಾರಿನಲ್ಲಿ 1.25 ಕೋಟಿ ರೂಪಾಯಿ ಪತ್ತೆ!

ಮೇಘಾಲಯ; ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ.. ಇದರ ಜೊತೆಗೆ ಚುನಾವಣಾ ಅಕ್ರಮಗಳೂ ಹೆಚ್ಚಾಗುತ್ತಿವೆ.. ಕೋಟಿ ಕೋಟಿ ಹಣ ಅಕ್ರಮವಾಗಿ ಸಾಗಿಸಲು ಹೋಗಿ ಸಿಕ್ಕಿಬೀಳುತ್ತಿದ್ದಾರೆ.. ಇನ್ನು ಮೇಘಾಲಯದ ಸಿಎಂ ಕಾನ್ರಾಡ್​​ ಸಂಗ್ಮಾ ಅವರ ಬೆಂಗಾವಲು ವಾಹನದ ಹಿಂದಿನ ಕಾರನ್ನು ಪರಿಶೀಲನೆ ಮಾಡಲಾಗಿದೆ.. ಈ ವೇಳೆ ಬರೋಬ್ಬರಿ 1.25 ಕೋಟಿ ರೂಪಾಯಿ ಅದರಲ್ಲಿ ಸಿಕ್ಕಿದೆ.. ಈ ಕಾರು ಮೇಘಾಲಯ ಸಿಎಂ ಬೆಂಗಾವಲು ಪಡೆ ವಾಹನವನ್ನು ಹಿಂಬಾಲಿಸುತ್ತಿತ್ತು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ  ಈ ಹಣ ಸಿಕ್ಕಿಬಿದ್ದಿದೆ.. ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣದಿಂದ ಆ ಹಣವನ್ನು ಜಪ್ತಿ ಮಾಡಲಾಗಿದೆ. ಅರುಣಾಚಲ ಪ್ರದೇಶದ ತನ್ನ ಪಕ್ಷದ ಅಭ್ಯರ್ಥಿಯ ಪರವಾಗಿ ನಡೆದ ರ್ಯಾಲಿಯಲ್ಲಿ ಮೇಘಾಲಯ ಸಿಎಂ ಪಾಲ್ಗೊಳ್ಳಲು ಹೋಗುತ್ತಿದ್ದರು.. ಈ ವೇಳೆ ಅವರ ಬೆಂಗಾವಲು ವಾಹನವನ್ನು ಕಾರೊಂದು ಹಿಂಬಾಲಿಸುತ್ತಿತ್ತು.. ಅದರಲ್ಲಿ ಪರಿಶೀಲನೆ ಮಾಡಿದಾಗ ಹಣ ಸಿಕ್ಕಿದೆ..

ಆ ಕಾರು ಖಾಸಗಿ ನಿರ್ಮಾಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹರ್ಷವರ್ಧನ್​ ಸಿಂಗ್​ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.. ಇದು ಸಿಎಂ ಬೆಂಗಾವಲು ಪಡೆಯ ಭಾಗವಾಗಿರಲಿಲ್ಲ ಎಂದು ಸಿಎಂ ಕಚೇರಿ ತಿಳಿಸಿದೆ. ಆದರೆ ಆ ಕಾರು ಮೆರವಣಿಗೆಯನ್ನು ಅನುಸರಿಸುತ್ತಾ ಸಾಗುತ್ತಿತ್ತು ಎಂದು ಹೇಳಲಾಗಿದೆ..

ಇದನ್ನೂ ಓದಿ; ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

ಹಣವನ್ನು ಕಾರ್ಮಿಕರಿಗೆ ಪಾವತಿಸಲು ಕಾರಿನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ.. ಅಸ್ಸಾಂನ ಸೋನಾರಿ ವೈದ್ಯಕೀಯ ಕಾಲೇಜು, ಅರುಣಾಚಲದ ತಿರಾಪ್​ ಜಿಲ್ಲೆಯ ಖೀನ್ಸದಲ್ಲಿರುವ ಬ್ರಿಗೆಡ್​ ಹೆಡ್​ಕ್ವಾಟರ್ಸ್​​ ಮತ್ತು ಶಿವಸಾಗರ್​ದಲ್ಲಿರುವ ಅಸ್ಸಾಂ ಪೊಲೀಸ್​ ಬೆಟಾಲಿಯನ್​​ ಸ್ಥಳಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.. ಇಲ್ಲಿ ಕಾರ್ಮಿಕರಾಗಿ  ಕೆಲಸ ಮಾಡುತ್ತಿರುವವರಿಗೆ ವೇತನ ಪಾವತಿಸಲು ತೆಗೆದುಕೊಂಡು ಹೋಗಿತ್ತಿದ್ದೆವು ಎಂದು ತಿಳಿಸಿದ್ದಾರೆ ಎನ್ನಲಾಗಿದೆ..

ಇದನ್ನೂ ಓದಿ; ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಜನರ ಮೂಡ್‌ ಹೇಗಿದೆ..? – ಧರ್ಮ ನಡೆಯೋಲ್ಲ ಎಂದ ಜನ!

Share Post