DistrictsPolitics

ಬಿಜೆಪಿ ಸರ್ಕಾರದಲ್ಲಿ ಲಂಚ, ಬಿ ರಿಪೋರ್ಟ್ ಗಳದ್ದೇ ಸದ್ದು; ಡಿ.ಕೆ.ಶಿವಕುಮಾರ್

ಹೊಸದುರ್ಗ; ಹೊಸದುರ್ಗ ಕ್ಷೇತ್ರದ ಜನ ಕೃಷಿ ಆಧರಿಸಿ ಬದುಕುತ್ತಿದ್ದಾರೆ. ರೈತನಿಗೆ ಲಂಚ, ಪಿಂಚಣಿ, ನಿವೃತ್ತಿ ಯಾವುದೂ ಇಲ್ಲ. ಈ ರೈತರು ಮಳೆ, ಭೂಮಿ ಬೆಳೆ ಮೇಲೆ ಅವಲಂಬಿತವಾಗಿದ್ದಾರೆ. ಇವರ ರಕ್ಷಣೆ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಹೊಸದುರ್ಗದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಭಾಗದಲ್ಲಿ ತೆಂಗು ಹಾಗೂ ಕೊಬ್ಬರಿ ಬೆಳೆಯುತ್ತಿದ್ದಾರೆ. ಹಿಂದೆ 20 ಸಾವಿರ ಇದ್ದ ಕೊಬ್ಬರಿ ಬೆಲೆ, ಈಗ 10,500 ಆಗಿದೆ. ಕೊಬ್ಬರಿ ಬೆಲೆ ಇಳಿದಿರುವಾಗ ರಸಗೊಬ್ಬರದ ಬೆಲೆ ಏನಾದರೂ ಕಡಿಮೆ ಆಗಿದೆಯಾ? ರೈತರು ಕೊಡುವ ಕೂಲಿ ಕಡಿಮೆ ಆಗಿದೆಯಾ? ಇಲ್ಲ. ಕೃಷಿಗೆ ತಗಲುವ ವೆಚ್ಚ ಹೆಚ್ಚಾಗಿದೆಯೇ ಹೊರತು, ಬೆಳೆಗೆ ಸಿಗುವ ಬೆಲೆ ಮಾತ್ರ ಕಡಿಮೆಯಾಗುತ್ತಿದೆ.ಮೋದಿ ಅವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಮಾಡಿದರಾ? ಇಲ್ಲ.

ಬಿಜೆಪಿ ಸರ್ಕಾರದಲ್ಲಿ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ಇಲ್ಲ. ಈ ಸರ್ಕಾರದಲ್ಲಿ ಕೇವಲ ಲಂಚ, ಬಿ ರಿಪೋರ್ಟ್ ಗಳೇ ಸದ್ದು ಮಾಡುತ್ತಿವೆ. ಇವುಗಳಿಗೆ ಕೊನೆ ಹಾಡಲೇಬೇಕು.ಬಿಜೆಪಿ ಸರ್ಕಾರಕ್ಕೆ ಮತದಾರರ ಮೇಲೆ ನಂಬಿಕೆ ಇದ್ದರೆ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡಬೇಕಿತ್ತು. ಅವರಿಗೆ ಸೋಲಿನ ಭಯ ಬಂದಿದೆ.

Share Post