Politics

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಸೌಮ್ಯಾ ರೆಡ್ಡಿ ಕಠಿಣ ಸವಾಲು..!

ಬೆಂಗಳೂರು; ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ.. ಇದು ಬಿಜೆಪಿಯ ಭದ್ರಕೋಟೆ.. ಮೂರೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾ ಬಂದಿದ್ದಾರೆ.. ಈ ಬಾರಿ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೆ ಬಿಜೆಪಿಯಿಂದ ಆಯ್ಕೆ ಬಯಸಿದ್ದಾರೆ.. ಆದ್ರೆ ಈ ಬಾರಿ ತೇಜಸ್ವಿ ಸೂರ್ಯಗೆ ಗೆಲುವು ಅಷ್ಟು ಸುಲಭದ ಮಾತಲ್ಲ.. ಯಾಕಂದ್ರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಠಿಣ ಸವಾಲಾಗಿದ್ದಾರೆ..

ಇದನ್ನೂ ಓದಿ; ಚಿನ್ನ ಅಸಲಿಯೋ ಅಥವಾ ನಕಲಿಯೋ.. ಗುರುತಿಸುವುದು ಹೇಗೆ..?

ಕಾಂಗ್ರೆಸ್‌ನಿಂದ ಈ ಬಾರಿ ಭರ್ಜರಿ ಕ್ಯಾಂಪೇನ್‌;

ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿಯವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಪುತ್ರಿ.. 41 ವರ್ಷದ ಸೌಮ್ಯಾರೆಡ್ಡಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಚೇತ್ರದಿಂದ ಗೆಲುವು ಸಾಧಿಸಿದ್ದರು.. ಆದ್ರೆ 2023ರ ಚುನಾವಣೆಯಲ್ಲಿ ಕೇವಲ 16 ಮತಗಳಿಂದ ಸೋಲನುಭವಿಸಿದ್ದರು.. ಇದೀಗ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದೆ.. ಸಚಿವ ರಾಮಲಿಂಗಾರೆಡ್ಡಿಯವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದಾರೆ.. ಜನ ಸಂಪರ್ಕ ಇದೆ.. ಇದರ ಜೊತೆಗೆ ಒಮ್ಮೆ ಶಾಸಕಿಯಾಗಿದ್ದ ಸೌಮ್ಯಾರೆಡ್ಡಿಯವರಿಗೂ ಸಾಕಷ್ಟು ಜನ ಸಂಪರ್ಕ ಇದೆ.. ಹೀಗಾಗಿ, ಸೌಮ್ಯಾರೆಡ್ಡಿ ಈ ಬಾರಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಟಫ್‌ ಫೈಟ್‌ ನೀಡುತ್ತಿದ್ದಾರೆ.. ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅತ್ಯಂತ ಉತ್ಸಾಹದಿಂದ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್‌ ನಡೆಸುತ್ತಿದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಶೃಂಗಾರ ಬಯಕೆಗಳು ಹೆಚ್ಚಾಗಲು ಕಾರಣಗಳೇನು..?

ಮಹಿಳಾ ಮತದಾರರನ್ನು ಸೆಳೆಯುತ್ತಿರುವ ಸೌಮ್ಯಾರೆಡ್ಡಿ;

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ಹೆಚ್ಚಿದೆ.. ಹೀಗಾಗಿ ಇಲ್ಲಿ ಬ್ರಾಹ್ಮಣ ಸಮುದಾಯದವರನ್ನೇ ಹೆಚ್ಚಾಗಿ ಕಣಕ್ಕಿಳಿಸಲಾಗುತ್ತಿದೆ.. ಬಿಜೆಪಿ ಈ ಬಾರಿಯೂ ಕೂಡಾ ಬ್ರಾಹ್ಮಣ ಸಮುದಾಯದ ತೇಜಸ್ವಿ ಸೂರ್ಯ ಅವರನ್ನೇ ಕಣಕ್ಕಿಳಿಸಿದೆ.. ಇತ್ತ ಒಕ್ಕಲಿಗ ಸಮುದಾಯದ ಸೌಮ್ಯಾ ರೆಡ್ಡಿಯವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.. ಇಲ್ಲಿ ತೆಲುಗು ಭಾಷಿಕರು ಕೂಡಾ ಹೆಚ್ಚಿರುವುದರಿಂದ ಸೌಮ್ಯಾ ರೆಡ್ಡಿಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿದ್ದು, ಇದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ.. ಸೌಮ್ಯಾರೆಡ್ಡಿಯವರು ಕೂಡಾ ಮಹಿಳೆಯಾಗಿರುವುದರಿಂದ ಮಹಿಳಾ ಮತದಾರರನ್ನು ಸೆಳೆಯುತ್ತಿದ್ದಾರೆ.. ಇದು ವರ್ಕೌಟ್‌ ಆದರೆ ತೇಜಸ್ವಿ ಸೂರ್ಯ ಅವರಿಗೆ ಕಷ್ಟವಾಗಬಹುದು ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಇವರೇ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ; 5785 ಕೋಟಿ ಆಸ್ತಿ!

ಗ್ಯಾರೆಂಟಿ ಯೋಜನೆಗಳನ್ನು ಪ್ರಸ್ತಾಪಿಸುತ್ತಿರುವ ಸೌಮ್ಯಾರೆಡ್ಡಿ;

ಸೌಮ್ಯಾರೆಡ್ಡಿಯವರು ಪ್ರಚಾರದ ವೇಳೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುತ್ತಿದ್ದಾರೆ.. ರಾಜ್ಯ ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತವಾಗಿ ಬಸ್‌ನಲ್ಲಿ ಓಡಾಡುವ ವ್ಯವಸ್ಥೆ ಮಾಡಲಾಗಿದೆ.. ಸೌಮ್ಯಾರೆಡ್ಡಿಯವರ ತಂದೆ ರಾಮಲಿಂಗಾರೆಡ್ಡಿಯವರು ಸಾರಿಗೆ ಸಚಿವರಾಗಿದ್ದು, ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ.. ಹೀಗಾಗಿ ಸೌಮ್ಯಾರೆಡ್ಡಿಯವರು ಹೋದಲ್ಲೆಲ್ಲಾ, ಶಕ್ತಿ ಯೋಜನೆ ಉಪಯೋಗಿಸಿಕೊಳ್ಳುತ್ತಿದ್ದೀರಾ ಎಂದು ಮಹಿಳೆಯರನ್ನು ಕೇಳುತ್ತಿದ್ದಾರೆ.. ಎಲ್ಲೆಲ್ಲಿ ಹೋಗಿ ಬಂದಿರಿ ಎಂದು ಕೇಳುವ ಮೂಲಕ, ಯೋಜನೆಯಿಂದ ಎಷ್ಟು ಅನುಕೂಲವಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.. ಇದಲ್ಲದೆ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಂದ ಮಹಿಳೆಯರಿಗೆ ಏನೆಲ್ಲಾ ಅನುಕೂಲವಾಗಿದೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.. ಈ ಮೂಲಕ ಮಹಿಳಾ ಮತದಾರರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ..

ಇದನ್ನೂ ಓದಿ; ಬೆಂಗಳೂರಲ್ಲಿ 2 ಐಶಾರಾಮಿ ಕಾರು, 40 ಬೈಕ್‌ಗಳು, ರೆಡಿಮೇಡ್‌ ಬಟ್ಟೆಗಳು ಬೆಂಕಿಗಾಹುತಿ!

ತೇಜಸ್ವಿ ಸೂರ್ಯಗೆ ಈ ಬಾರಿ ದೊಡ್ಡ ಸವಾಲು;

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 1991ರಿಂದ ಬಿಜೆಪಿ ಅಭ್ಯರ್ಥಿಯೇ ಗೆಲ್ಲುತ್ತಾ ಬಂದಿದ್ದಾರೆ.. ತೇಜಸ್ವಿ ಸೂರ್ಯ ಕೂಡಾ ಕಳೆದ ಬಾರಿ ಸಂಸದರಾಗಿದ್ದರು.. ಈ ಬಾರಿ ಮತ್ತೆ ಅವರಿಗೇ ಟಿಕೆಟ್‌ ಸಿಕ್ಕಿದೆ.. ಆದ್ರೆ ತೇಜಸ್ವಿ ಸೂರ್ಯ ಸರಿಯಾಗಿ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ ಎಂಬ ಅಸಮಾಧಾನ ಇದೆ.. ಬಿಜೆಪಿಯಲ್ಲೇ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.. ಆದರೂ ಕೂಡಾ ಈ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ಬಿಜೆಪಿ ಪರ ನಿಲ್ಲುತ್ತಾರೆ.. ಇದರ ನಡುವೆಯೂ ಸೌಮ್ಯಾ ರೆಡ್ಡಿ ಕೂಡಾ ಸಾಕಷ್ಟು ಪ್ರಾಬಲ್ಯ ಪಡೆದುಕೊಳ್ಳುತ್ತಿದ್ದಾರೆ.. ಕ್ಷೇತ್ರದಲ್ಲಿ ಸೌಮ್ಯಾರೆಡ್ಡಿ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ.. ಹೀಗಾಗಿ ತೇಜಸ್ವಿ ಸೂರ್ಯಗೆ ಸೌಮ್ಯಾರೆಡ್ಡಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ..

ಇದನ್ನೂ ಓದಿ; ಪ್ರತಿ ದಿನ ಮೈದಾ ಸೇವಿಸಿದರೆ ಏನಾಗುತ್ತದೆ..?; ಮೈದಾ ಬಗೆಗಿನ ಅಪವಾದಗಳು ನಿಜವಾ..?

 

Share Post