ಗೋವಾ ಚುನಾವಣೆ: ಬಿಜೆಪಿ ಪಟ್ಟಿ ರಿಲೀಸ್, ಪರಿಕ್ಕರ್ ಮಗನಿಗಿಲ್ಲ ಟಿಕೆಟ್!
ಗೋವಾ: ನಲವತ್ತು ಕ್ಷೇತ್ರಗಳ ಗೋವಾ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ನಲವತ್ತು ಕ್ಷೇತ್ರಗಳ ಪೈಕಿ 34 ಕ್ಷೇತ್ರಗಳಿಗೆ ಗೋವಾ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, ಪಟ್ಟಿ ರಿಲೀಸ್ ಮಾಡಿದೆ.
ಈ ಪಟ್ಟಿಯಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಪುತ್ರ ಉತ್ಪಾಲ್ ಪಾರಿಕ್ಕರ್ ಹೆಸರಿಲ್ಲ. ಇನ್ನು ವಿಶ್ವಜಿತ್ ರಾಣೆ ಹಾಗೂ ಅವರ ಪತ್ನಿ ದಿವ್ಯಾ ರಾಣೆ ಇಬ್ಬರಿಗೂ ಟಿಕೆಟ್ ನೀಡಲಾಗಿದೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಸಾಂಕ್ಲಿಯಿಂದ ಟಿಕೆಟ್ ನೀಡಲಾಗಿದೆ. 6 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸಾಮಾನ್ಯ ಸ್ಥಾನಗಳಲ್ಲೂ ಮೂವರು ಎಸ್ಟಿ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. 11 ಒಬಿಸಿ ಮತ್ತು 9 ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಿಗೆ ಟಿಕೆಟ್ ನೀಡಲಾಗಿದೆ.