Politics

ಇವರೇ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ; 5785 ಕೋಟಿ ಆಸ್ತಿ!

ಅಮರಾವತಿ; ದೇಶದ ಅತಿ ಶ್ರೀಮಂತ ಅಭ್ಯರ್ಥಿ ಯಾರು‌ ಗೊತ್ತಾ..? ಸದ್ಯದ ದಾಖಲೆಗಳ‌ ಪ್ರಕಾರ ಆಂಧ್ರಪ್ರದೇಶದ ಗುಂಟೂರು ಟಿಡಿಪಿ ಅಭ್ಯರ್ಥಿ ಪೆಮ್ಮಸಾಮಿ ಚಂದ್ರಶೇಖರ್ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.. ಇವರು ಬರೋಬ್ಬರಿ 5,785 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ..

  ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ‌ದಿನವಾಗಿತ್ತು.. ಹೀಗಾಗಿ ಇಂದು ಅವರು ಭಾರಿ ಮೆರವಣಿಗೆ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.. ಆಂಧ್ರ ಪ್ರದೇಶದಲ್ಲಿ ಮೇ 13 ರಂದು ಚುನಾವಣೆ ನಡೆಯಲಿದೆ.. ಅಲ್ಲಿನ ವಿಧಾನಸಭೆ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ..

ವೃತ್ತಿಯಲ್ಲಿ‌ ವೈದ್ಯನಾಗಿರುವ ಅಭ್ಯರ್ಥಿ;

 ಪೆಮ್ಮಸಾಮಿ ಚಂದ್ರಶೇಖರ್ ಅನಿವಾಸಿ ಭಾರತೀಯನಾಗಿದ್ದು, ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.. ಇವರ ಮೂಲ ಗುಂಟೂರು ಜಿಲ್ಲೆಯ ಬುರ್ರಿಪೊಲಂ.. ಈಗ ಅಮೆರಿಕದಲ್ಲಿ‌ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

ಅಮೆರಿಕದಲ್ಲಿ ಹೆಚ್ಚಿನ ಆಸ್ತಿ ಹೊಂದಿರುವ ಅಭ್ಯರ್ಥಿ;

 ಟಿಡಿಪಿ ಅಭ್ಯರ್ಥಿ ಘೋಷಣೆ ಮಾಡಿಕೊಂಡಂತೆ, ಅಮೆರಿಕದಲ್ಲಿ‌‌ ಹೆಚ್ಚಿನ ಆಸ್ತಿ ಹೊಂದಿದ್ದಾರೆ..

 

Share Post