ಬೆಂಗಳೂರಲ್ಲಿ 2 ಐಶಾರಾಮಿ ಕಾರು, 40 ಬೈಕ್‌ಗಳು, ರೆಡಿಮೇಡ್ ಬಟ್ಟೆಗಳು ಬೆಂಕಿಗಾಹುತಿ!
ಬೆಂಗಳೂರು; ಬೆಂಗಳೂರಿನ ಭಾರೀ ಬೆಂಕಿ ಅನಾಹುತ ಸಂಭವಿಸಿದೆ.. ಘಟನೆಯಲ್ಲಿ ಒಂದು ಬಿಎಂಡಬ್ಲ್ಯೂ ಕಾರು, ಮತ್ತೊಂದು ಕಾರು, 40 ಬೈಕ್‌ಗಳು ಹಾಗೂ ಭಾರೀ ಪ್ರಮಾಣದ ರೆಡಿಮೇಡ್ ಬಟ್ಟೆಗಳು ಬೆಂಕಿಗಾಹುತಿಯಾಗಿವೆ.. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ; ಬೇಸಿಗೆಯಲ್ಲಿ ಶೃಂಗಾರ ಬಯಕೆಗಳು ಹೆಚ್ಚಾಗಲು ಕಾರಣಗಳೇನು..?
ಟಿಂಬರ್ ಯಾರ್ಡ್‌ನಲ್ಲಿ ಬೆಂಕಿ ಅನಾಹುತ;
ಮಧ್ಯರಾತ್ರಿ ಸಿಂಗಸಂದ್ರದ ಮಣಿಪಾಲ್ ಕಂಟ್ರಿ ರೋಡ್‌ನಲ್ಲಿ ಟಿಂಬರ್ ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.. ಅನಂತರ ಅದು ಹಿಂಬದಿಯ lovable Sport ಎಂಬ ಹೆಸರಿನ ಗಾರ್ಮೆಂಟ್ಸ್‌ಗೂ ಬೆಂಕಿ ಆವರಿಸಿದೆ.. ಅಲ್ಲಿ ಅಪಾರ ಪ್ರಮಾಣದ ಬ್ರ್ಯಾಂಡೆಡ್ ರೆಡಿಮೇಡ್ ಬಟ್ಟೆಗಳು ಸುಟ್ಟುಭಸ್ಮವಾಗಿದೆ.. ಇನ್ನು ಪಕ್ಕದಲ್ಲಿದ್ದ ಕಾರ್ ವಾಶ್ ರೂಂಗೂ ಬೆಂಕಿ ತಗುಲಿದ್ದು, ಅಲ್ಲಿ ಎರಡು ಕಾರುಗಳು ಸುಟ್ಟು ಕರಕಲಾಗಿವೆ..
ಇದನ್ನೂ ಓದಿ; ಕಾಂಗ್ರೆಸ್ ಕಾವೇರಿ ಗ್ಯಾರಂಟಿ ಕೊಡಬೇಕು; ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಮರದ ಪೀಸ್‌ಗಳಿಗೆ ಬೆಂಕಿ ಬಿದ್ದು ದುರ್ಘಟನೆ;
ಮಧ್ಯರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಮರದ ಪೀಸ್‌ಗಳನ್ನು ಇಟ್ಟಿದ್ದ ಟಿಂಬರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.. ಅನಂತರ ಪಕ್ಕದ ಕಾರ್ ವಾಶ್ ಸರ್ವೀಸ್ ಸ್ಟೇಷನ್‌ಗೆ ಬೆಂಕಿ ಹರಡಿದೆ.. ಅಲ್ಲದೆ ಪಕ್ಕದ ಗ್ಯಾರೇಜ್‌ಗೂ ಬೆಂಕಿ ಹಬ್ಬಿದೆ.. ವಾಶ್ ಸರ್ವೀಸ್ ಸೆಂಟರ್‌ನಲ್ಲಿದ್ದ 2 ಕಾರುಗಳು, ಗ್ಯಾರೇಜ್‌ನಲ್ಲಿಟ್ಟಿದ್ದ 1 ಟಾಟಾ ಏಸ್, 1 ಬಿಎಂಡಬ್ಲ್ಯೂ ಕಾರು ಹಾಗೂ 40ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಬಿಸಿಲಿಗೆ ಹೋಗುವ ಮುನ್ನ ಎಚ್ಚರ; ಬಿಸಿಲಲ್ಲಿ ಕಾರು ನಿಲ್ಲಿಸಿ ಕೂತರೆ ಡೇಂಜರ್!
ಕಿಡಿಹಾರಿ ಗಾರ್ಮೆಂಟ್ಸ್‌ನಲ್ಲಿ ಬೆಂಕಿ;
ಟಿಂಬರ್‌ನಿಂದ ಕಿಡಿ ಹಾರಿ ಹತ್ತಿರದ ಗಾರ್ಮೆಂಟ್ಸ್ ಫ್ಯಾಕ್ಟರಿಗೂ ಬೆಂಕಿ ಬಿದ್ದಿದೆ.. 100 ಮೀಟರ್‌ನಷ್ಟು ದೂರದಲ್ಲಿ ಹಿಂಬದಿಯಲ್ಲಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಯ ನಾಲ್ಕನೇ ಮಹಡಿಯಲ್ಲಿ ಬೆಂಕಿ ಬಿದ್ದಿತ್ತು.. ಅಲ್ಲಿ ಬಟ್ಟೆ ಸ್ಟೋರ್ ಮಾಡಲಾಗಿತ್ತು.. ಪ್ಯಾಕ್ ಮಾಡಿದ್ದ ಬಟ್ಟೆಗಳಿಗೆ ಬೆಂಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ.. ಬೆಂಕಿಯಿಂದ ಕಿಡಿ ಹಾರಿ ಗಾರ್ಮೆಂಟ್ಸ್ ಗೆ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ.. 5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ..
ಇದನ್ನೂ ಓದಿ; ಮಹಿಳಾ ಸಮ್ಮಾನ್; ಅತಿ ಹೆಚ್ಚು ಬಡ್ಡಿ ಸಿಗುವ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು..?