Politics

ಸೇವಾದಳದ ಕಾರ್ಯಕರ್ತರು ನಿಜವಾದ ದೇಶಭಕ್ತರು; ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಸೇವಾದಳದ ಕಾರ್ಯಕರ್ತರನ್ನು ಮಾಜಿ ಪ್ರಧಾನಿ ನೆಹರು ಅವರು ತಿರಂಗಾ ಧ್ವಜದ ರಕ್ಷಕರು ಎಂದು ಕರೆದರು. ಸೇವಾದಳದ ಕಾರ್ಯಕರ್ತರು ನಿಜವಾದ ದೇಶಭಕ್ತರು ಮತ್ತು ಸೈನಿಕರು ಎಂದರೆ ತಪ್ಪಾಗಲಾರದು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸೇವಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ; ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್ ಸ್ವಾರ್ಥ ರಾಜಕಾರಣಿ; ಲಕ್ಷ್ಮೀ ಹೆಬ್ಬಾಳ್ಕರ್‌

ಸೇವಾದಳದ ಕಾರ್ಯಕರ್ತರನ್ನು ಮಾಜಿ ಪ್ರಧಾನಿ ನೆಹರು ಅವರು ತಿರಂಗಾ ಧ್ವಜದ ರಕ್ಷಕರು ಎಂದು ಕರೆದರು. ಸೇವಾದಳದ ಕಾರ್ಯಕರ್ತರು ನಿಜವಾದ ದೇಶಭಕ್ತರು ಮತ್ತು ಸೈನಿಕರು ಎಂದರೆ ತಪ್ಪಾಗಲಾರದು. ಸೇವಾದಳ, ಎನ್ ಎಸ್ ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಎಲ್ಲರೂ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಇತರೆ ಪಕ್ಷಗಳಲ್ಲಿ ಸ್ವಾರ್ಥ ಹಾಗೂ ಅಧಿಕಾರಕ್ಕೆ ಮುಂದೆ ನುಗ್ಗುವವರು. ನೀವು ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದೀರಿ. ನಮ್ಮ ನೂತನ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್ ಅವರಿಗೆ ಸೇವಾದಳದ ಉಸ್ತುವಾರಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷದ ಸೈನಿಕರಿಗೆ ತರಬೇತಿ ನೀಡಿ ತಯಾರು ಮಾಡುವ ಕೆಲಸ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು..

ಇದನ್ನೂ ಓದಿ; ದೇವೇಗೌಡರನ್ನೇ ಸೋಲಿಸಿದ್ದ ತೇಜಸ್ವಿನಿ ಗೌಡ ಮತ್ತೆ ಕಾಂಗ್ರೆಸ್‌ ಸೇರ್ಪಡೆ

ನಾವು ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಾರ್ಗದಲ್ಲಿ ಚಿತ್ರದುರ್ಗದಿಂದ ಬಳ್ಳಾರಿ ಮಧ್ಯದಲ್ಲಿ ಕೆಲವು ಜಮೀನನ್ನು ಗುರುತಿಸಿದ್ದು ಅಲ್ಲಿ ಭಾರತ ಜೋಡೋ ತರಬೇತಿ ಕೇಂದ್ರ ಆರಂಭಿಸಲಿದ್ದೇವೆ. ಮೈಸೂರಿನಲ್ಲೂ ನಾವು ತರಬೇತಿ ಕೇಂದ್ರ ಸ್ಥಾಪಿಸಲು ತನ್ವೀರ್ ಸೇಠ್ ಅವರಿಗೆ ತಿಳಿಸಿದ್ದೇವೆ. ಯಾವುದೇ ನಾಯಕನಾಗಬೇಕಾದರೆ ಪೂರ್ವಭಾವಿ ತರಬೇತಿ ಮುಖ್ಯ. ನಾವು ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯಕ್ಕೆ ಬಂದಿದ್ದು, ನಿಮ್ಮಂತೆ ತರಬೇತಿ ಪಡೆಯಲು ಆಗಿಲ್ಲ. ನೀವೆಲ್ಲರೂ ಶಿಸ್ತಿನಿಂದ ತರಬೇತಿ ಪಡೆದು ಪಕ್ಷಕ್ಕೆ ಗೌರವ ತಂದಿದ್ದೀರಿ. ಪಕ್ಷ ನಿಮಗೆ ಏನು ಮಾಡಿದೆ ಎಂದು ಸಹಜವಾಗಿ ಕೇಳುತ್ತಾರೆ. ಎಂದರು.

ಇದನ್ನೂ ಓದಿ; ಶಾರುಖ್‌ ಖಾನ್‌ ಮಗನ ತಿಂಗಳ ಸ್ಕೂಲ್‌ ಫೀಜ್‌ ಬರೋಬ್ಬರಿ 2 ಲಕ್ಷ ರೂಪಾಯಿ!

ನಿಮಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬ್ಲಾಕ್ ಹಾಗೂ ಡಿಸಿಸಿ ಕಾಂಗ್ರೆಸ್ ನವರಿಗೆ ಸೂಚನೆ ನೀಡುತ್ತಲೇ ಬಂದಿದ್ದೇವೆ. ಕೆಲವರು ರಕ್ಷಣೆ ನೀಡುತ್ತಿದ್ದಾರೆ. ಮತ್ತೆ ಕೆಲವರು ರಕ್ಷಣೆ ನೀಡುತ್ತಿಲ್ಲ. ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡಲು ತಾಲೂಕು ಮಟ್ಟದ ಸಮಿತಿಗಳಲ್ಲಿ ಅಧಿಕಾರ ನೀಡಲು ತಿಳಿಸಿದ್ದೇವೆ. ಚುನಾವಣೆ ನಂತರ ಇದನ್ನು ಪರಿಶೀಲನೆ ಮಾಡಲಿದ್ದೇವೆ. ಒಂದು ವೇಳೆ ಸೇವಾದಳದವರಿಗೆ ಸ್ಥಾನಮಾನ ನೀಡಿಲ್ಲವಾದರೆ, ಇರುವವರಲ್ಲೇ ಕೆಲವರನ್ನು ತೆಗೆದು ಸೇವಾದಳದವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

ಇದನ್ನೂ ಓದಿ; ಹೀಗೆ ಮಾಡಿದರೆ ಜೀವನಪೂರ್ತಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬಹುದು!

ಬಿಜೆಪಿಯವರು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಮೂರು ತಿಂಗಳು ಮುಂಚಿತವಾಗಿ ಮಂತ್ರಾಕ್ಷತೆ ಹಂಚಿದ್ದಾರೆ. ಮದುವೆಯಲ್ಲಿ ತಾಳಿ ಕಟ್ಟುವಾಗ ಮಂತ್ರಾಕ್ಷತೆ ಹಾಕುತ್ತಾರೆ. ಮೂರು ತಿಂಗಳ ಮುಂಚೆ ಮಂತ್ರಾಕ್ಷತೆ ಹಾಕುವುದಿಲ್ಲ. ಅವರು ಏನೇ ಮಾಡಲಿ, ನೀವು ಜನರ ಬದುಕಿನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಮಂತ್ರಾಕ್ಷತೆಯನ್ನಾಗಿ ಹಾಕಿ. ಈ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಎಂದು ಪರಿಶೀಲಿಸಿ. ಯಾರಿಗೆ ತಲುಪಿಲ್ಲವೋ ಅವರಿಗೆ ಈ ಗ್ಯಾರಂಟಿ ಮಂತ್ರಾಕ್ಷತೆ ಸಿಗುವಂತೆ ಮಾಡಿ ಅವರ ಬದುಕಿನಲ್ಲಿ ಬದಲಾವಣೆ ತನ್ನಿ ಎಂದು ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ದೇಶದ ಯಾವುದೇ ರಾಜ್ಯಗಳು ನಮ್ಮ ಸರ್ಕಾರದಂತೆ ನುಡಿದಂತೆ ನಡೆದಿಲ್ಲ. ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯನ್ನು ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ಅವರು ಸಹಿ ಹಾಕಿದ ಗ್ಯಾರಂಟಿ ಚೆಕ್ ಬೌನ್ಸ್ ಆಗಿಲ್ಲ. ಫಲಾನುಭವಿಗಳಿಗೆ ನಮ್ಮ ಯೋಜನೆಗಳು ನೇರವಾಗಿ ಮಧ್ಯವರ್ತಿಗಳಿಲ್ಲದೇ ತಲುಪುತ್ತಿವೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಈಗ 1,800 ಕೋಟಿ ಕಟ್ಟಬೇಕು ಎಂದು ನೋಟಿಸ್ ಜಾರಿ ಮಾಡಿದ್ದಾರೆ. ಅವರು ಏನೇ ಮಾಡಲಿ, ಜನರ ಹೋರಾಟದ ಮುಂದೆ ಬೇರೆ ಯಾವುದೂ ನಿಲ್ಲಲ್ಲ. ಮುಂದೆ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ವಿಶ್ವಾಸ ನನಗಿದೆ ಎಂದು ಹೇಳಿದರು.

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ರಾಜ್ಯದ 224 ಕ್ಷೇತ್ರಗಳಿಗೆ ಸೇವಾದಳದವರನ್ನು ಉಸ್ತುವಾರಿಯಾಗಿ ನೇಮಿಸಿ, ಪ್ರತಿ ಕ್ಷೇತ್ರದಲ್ಲಿ ನಮ್ಮ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಮುಖಂಡರು, ಶಾಸಕರು ಏನು ಮಾಡುತ್ತಿದ್ದಾರೆ. ಎಲ್ಲರೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಕೆಲಸ ಮಾಡುತ್ತಿದ್ದಾರಾ ಇಲ್ಲವೇ ಎಂದು ಪರಿಶೀಲಿಸಿ ನನಗೆ ಮಾಹಿತಿ ನೀಡಬೇಕು ಎಂದು ರಾಮಚಂದ್ರಪ್ಪ ಹಾಗೂ ತನ್ವೀರ್ ಸೇಠ್ ಅವರಿಗೆ ತಿಳಿಸುತ್ತಿದ್ದೇನೆ. ಚುನಾವಣೆ ಸಮಯದಲ್ಲಿ ಪಕ್ಷ ದುರ್ಬಲವಾಗಿರುವ ಬೂತ್ ಗಳಲ್ಲಿ ಸೇವಾದಳದವರು ಜವಾಬ್ದಾರಿ ತೆಗೆದುಕೊಳ್ಳಬೇಕು. ನೀವು ಪ್ರತಿ ಕ್ಷೇತ್ರದಲ್ಲಿ ನೂರು ಬೂತ್ ಜವಾಬ್ದಾರಿ ತೆಗೆದುಕೊಳ್ಳದಿದ್ದರೂ ಕನಿಷ್ಠ 10 ಬೂತ್ ಜವಾಬ್ದಾರಿ ತೆಗೆದುಕೊಂಡು ಮನೆ, ಮನೆಗೆ ಹೋಗಿ ನಮ್ಮ ಸರ್ಕಾರದ ಕಾರ್ಯಕ್ರಮ ತಲುಪಿಸಬೇಕು ಎಂದೂ ಡಿ.ಕೆ.ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ; ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!

ನಮ್ಮ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಎಐಸಿಸಿಯವರು ಗ್ಯಾರಂಟಿ ಯೋಜನೆ ನೀಡಿದ್ದಾರೆ. ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ನೀಡಲಾಗುವುದು. ನರೇಗಾ ಮಾದರಿಯಲ್ಲಿ ನಗರ ಪ್ರದೇಶದಲ್ಲೂ ಉದ್ಯೋಗ ಖಾತ್ರಿ ಯೋಜನೆ ಜಾರಿ ತರಲಾಗುವುದು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ಜಾರಿ, ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳ ನೇಮಕಾತಿ ಸೇರಿದಂತೆ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳ ಮಾಹಿತಿ ಇರುವ ಭಿತ್ತಿಪತ್ರಗಳನ್ನು ನೀವು ಮನೆ ಮನೆಗೆ ತಲುಪಿಸಬೇಕು. ನೀವು ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡುತ್ತಿದ್ದು, ಸರ್ಕಾರ ಹಾಗೂ ಪಕ್ಷ ನಿಮ್ಮ ಜತೆ ನಿಲ್ಲಲಿದೆ ಎಂದು ತಿಳಿಸಿದರು.

ಇದನ್ನೂ ಓದಿ; ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!

Share Post