CrimeDistricts

ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!

ಚಿತ್ರದುರ್ಗ; ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ.. ಆತ ಯಾಕೆ ಹೀಗೆ ಓಡಾಡುತ್ತಿದ್ದಾನೆ ಅಂತ ಪೊಲೀಸರಿಗೆ ಅನುಮಾನ ಬಂತು.. ಇನ್ನು ಈಗ ಚುನಾವಣೆ ಸಮಯವಾದ್ದರಿಂದ ಅನುಮಾನ ಬಂದರೆ ಪರೀಕ್ಷೆ ಮಾಡಲಾಗುತ್ತದೆ.. ಹಾಗೆ ತನಿಖೆ ಮಾಡಿದಾಗ ವ್ಯಕ್ತಿಯ ಬಳಿ ಬರೋಬ್ಬರಿ 5.250ಕೆಜಿ ಚಿನ್ನ ಸಿಕ್ಕಿದೆ..

ಇದನ್ನೂ ಓದಿ; ಕೋಲಾರ ವಿಚಾರ; ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡುವುದಿಲ್ಲ; ಡಿ.ಕೆ. ಶಿವಕುಮಾರ್

ವ್ಯಕ್ತಿಯ ಬಳಿ ಇತ್ತು ಐದೂಕಾಲು ಕೆಜಿ ಚಿನ್ನ!;

ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ವಿಜಯಾ ಬ್ಯಾಂಕ್‌ ಮುಂಭಾಗದಲ್ಲಿ ಈ ವ್ಯಕ್ತಿ ಪತ್ತೆಯಾಗಿದ್ದಾರೆ..  ಆತ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಹಿಡಿದು ಪರಿಶೀಲನೆ ಮಾಡಿದ್ದಾರೆ.. ಈ ವೇಳೆ ಆತನ ಬಳಿ ಇದ್ದ ಚಿನ್ನ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.. ಬರೋಬ್ಬರಿ ಐದೂಕಾಲು ಕೆಜಿ ಚಿನ್ನ ಆ ವ್ಯಕ್ತಿ ಬಳಿ ಸಿಕ್ಕಿದೆ.. ಪೊಲೀಸರು ಈ ಚಿನ್ನಕ್ಕೆ ದಾಖಲೆ ಕೇಳಿದಾಗ ಆತ ಕೊಟ್ಟಿಲ್ಲ.. ಹೀಗಾಗಿ ಪೊಲೀಸರು ಚಿನ್ನವನ್ನ ವಶಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ..

ಇದನ್ನೂ ಓದಿ; ಟಿಕೆಟ್‌ ಸಿಗದಿದ್ದಕ್ಕೆ ನಿದ್ದೆ ಮಾತ್ರೆ ಸೇವಿಸಿದ್ದ ಸಂಸದ ಆಸ್ಪತ್ರೆಯಲ್ಲಿ ಸಾವು!

ಮನೋಜ್‌ ಎಂಬಾತನೇ ಬಂಧಿತ ಆರೋಪಿ;

ಬಂದಿತ ವ್ಯಕ್ತಿಯನ್ನು ಮನೋಜ್‌ ಎಂದು ಗುರುತಿಸಲಾಗಿದೆ.. ಆತ ಅಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಎಲ್ಲಿಂದ ತಂದಿದ್ದ ಅನ್ನೋದು ಇನ್ನೂ ಗೊತ್ತಾಗಿಲ್ಲ.. ಅದಕ್ಕೆ ಆತ ದಾಖಲೆಯನ್ನೂ ಕೊಟ್ಟಿಲ್ಲ.. ಎಲ್ಲಿಂದ ತಂದ ಅನ್ನೋದೂ ಗೊತ್ತಾಗಿಲ್ಲ.. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಂದಹಾಗೆ ಬ್ಯಾಗ್‌ನಲ್ಲಿ ಚಿನ್ನ ಇಟ್ಟುಕೊಂಡು ಮನೋಜ್‌ ಸಾಗಣೆ ಮಾಡುತ್ತಿದ್ದ.. ಈ ವೇಳೆ ಪೊಲೀಸರು ಕಾಣಿಸಿದ್ದಾರೆ.. ಪೊಲೀಸರನ್ನು ನೋಡುತ್ತಲೇ ಆತ ಪರಾರಿಯಾಗಲು ಯತ್ನ ಮಾಡಿದ್ದಾನೆ.. ಇದರಿಂದಾಗಿ ಪೊಲೀಸರಿಗೆ ಮತ್ತಷ್ಟು ಅನುಮಾನ ಬಂದಿದೆ.. ಕೂಡಲೇ ಆತನನ್ನು ಹಿಂಬಾಲಿಸಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಆತನ ಬಳಿ ಇದ್ದ ಬ್ಯಾಗ್‌ ತೆಗೆದು ನೋಡಿದಾಗ ಅದರಲ್ಲಿ ಅಪಾರ ಪ್ರಮಾಣದ ಚಿನ್ನ ಇದ್ದದ್ದು ಪತ್ತೆಯಾಗಿದೆ..

ಇದನ್ನೂ ಓದಿ; ಮತ್ತೊಂದು ರೆಸ್ಟೋರೆಂಟ್‌ಗೆ ಬಂತು ಬಾಂಬ್‌ ಬೆದರಿಕೆ; ಕಾರಣ ಕೇಳಿ ಪೊಲೀಸರೇ ಬೇಸ್ತು..!

3.6 ಕೋಟಿ ರೂಪಾಯಿ ಬೆಲೆಯ ಚಿನ್ನ ಅದು;

ಮನೋಜ್‌ ಬಳಿ ಸಿಕ್ಕಿರೋದು ಬರೋಬ್ಬರಿಗೆ ಐದೂಕಾಲು ಕೆಜಿ ಚಿನ್ನ.. ಅದರ ಬೆಲೆ ಬರೋಬ್ಬರಿ ಮೂರೂ ಮುಕ್ಕಾಲು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.. ಇಷ್ಟು ಮೊತ್ತದ ಚಿನ್ನವನ್ನು ಆತನ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದ.. ಅದು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ.. ಜುವೆಲರಿ ಅಂಗಡಿ ಈ ಚಿನ್ನ ತೆಗೆದುಕೊಂಡು ಬಂದಿರಬಹುದು ಎಂದು ಹೇಳಲಾಗುತ್ತಿದೆ.. ಆದ್ರೆ ಯಾರೂ ಕೂಡಾ ಇದುವರೆಗೆ ಈ ಚಿನ್ನಕ್ಕೆ ದಾಖಲೆ ತೋರಿಸಿಲ್ಲ.. ಹೀಗಾಗಿ ಪೊಲೀಸರು ಅದನ್ನು ಜಪ್ತಿ ಮಾಡಿದ್ದಾರೆ..

ಇದನ್ನೂ ಓದಿ; ಹಿಟ್ಟಿಗೆ ಹುಳ ಹಿಡಿಯುತ್ತಿದೆಯೇ..?; ಹಾಗಾದ್ರೆ ಈ ಟ್ರಿಕ್ಸ್‌ ಯೂಸ್‌ ಮಾಡಿ!

ಚುನಾವಣೆಗಾಗಿ ನಡೆಯುತ್ತಿದೆ ಅಕ್ರಮ ಹಣ ಸಾಗಾಟ;

ಲೋಕಸಭಾ ಚುನಾವಣೆ ರಾಜ್ಯದಲ್ಲಿ ಸಾಕಷ್ಟು ಕಾವೇರುತ್ತಿದೆ.. ಜೊತೆಗೆ ಈಗಲೇ ಅಕ್ರಮಗಳೂ ಶುರುವಾಗಿದೆ.. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ತಪಾಸಣೆಗಳು ನಡೆಯುತ್ತಿದೆ.. ಎಲ್ಲೆಡೆ ಚೆಕ್‌ ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದೆ.. ಬಂದು ಹೋಗುವ ವಾಹನಗಳನ್ನು ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.. ಅಲ್ಲಲ್ಲಿ ಕೋಟಿ ಕೋಟಿ ಹಣ ಸಿಕ್ಕಿದ್ದೂ ಇದೆ.. ಹೀಗಾಗಿ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದ್ದು, ಅನುಮಾನ ಬಂದರೆ ತಪಾಸಣೆ ನಡೆಸಲಾಗುತ್ತಿದೆ.. ಈ ವೇಳೆಯೇ ಐದೂ ಕಾಲು ಕೆಜಿ ಚಿನ್ನ ಪತ್ತೆಯಾಗಿದೆ.. ಇದು ದಾವಣಗೆರೆಯ ಜುವೆಲರಿ ಅಂಗಡಿಯೊಂದಕ್ಕೆ ಸೇರಿದ್ದು ಎನ್ನಲಾಗ್ತಿದೆ.. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ..

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

Share Post