Politics

ದೇವೇಗೌಡರನ್ನೇ ಸೋಲಿಸಿದ್ದ ತೇಜಸ್ವಿನಿ ಗೌಡ ಮತ್ತೆ ಕಾಂಗ್ರೆಸ್‌ ಸೇರ್ಪಡೆ

ಬೆಂಗಳೂರು; ತೇಜಸ್ವಿನಿ ಗೌಡ.. ಈ ಹೆಸರು ಈಗ ಅಷ್ಟೇ ಪ್ರಚಲಿತದಲ್ಲಿಲ್ಲ.. ಆದ್ರೆ, 2004ರಲ್ಲಿ ಇಡೀ ದೇಶವೇ ಇವರತ್ತ ತಿರುಗಿ ನೋಡಿತ್ತು.. ಆಗಿನ್ನೂ 37 ವರ್ಷದವರಾಗಿದ್ದ ತೇಜಸ್ವಿನಿಗೌಡ ಅವರು ಮಾಜಿ ಪ್ರಧಾನಿ ದೇವೇಗೌಡರನ್ನೇ ಸೋಲಿಸಿದ್ದರು.. ಅದೂ ಕೂಡಾ ದೇವೇಗೌಡರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.. ಪತ್ರಕರ್ತೆಯಾಗಿದ್ದ ತೇಜಸ್ವಿನಿ ಗೌಡ, ಆಗಿನ ಕನಕಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ದೇವೇಗೌಡರನ್ನು ಸೋಲಿಸಿ ಲೋಕಸಭೆ ಪ್ರವೇಶ ಮಾಡಿದ್ದರು.. ಅನಂತರ ಬೆಳವಣಿಗೆಗಳಲ್ಲಿ ಅವರು ಬಿಜೆಪಿ ಸೇರಿದ್ದರು.. ಇದೀಗ ಅವರು ಮತ್ತೆ ಮಾತೃಪಕ್ಷಕ್ಕೆ ವಾಪಸ್‌ ಆಗಿದ್ದಾರೆ..

ಇದನ್ನೂ ಓದಿ; ಶಾರುಖ್‌ ಖಾನ್‌ ಮಗನ ತಿಂಗಳ ಸ್ಕೂಲ್‌ ಫೀಜ್‌ ಬರೋಬ್ಬರಿ 2 ಲಕ್ಷ ರೂಪಾಯಿ!

ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಸೇರ್ಪಡೆ;

ತೇಜಸ್ವಿನಿ ಗೌಡ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದರು.. ಇದ್ದಕ್ಕಿಂತೆ ಅವರು ಭಾವುಕ ಪತ್ರ ಬರೆದು ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.. ಜೊತೆಗೆ ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.. ಮೊನ್ನೆಯಷ್ಟೇ ಅವರು ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.. ಕೊಟ್ಟಿದ್ದರು.. ನಿರೀಕ್ಷೆಯಂತೆ ಅವರು ಈ ಕಾಂಗ್ರೆಸ್‌ ಸೇರಿದ್ದಾರೆ.. ಇದರಿಂದ ಕಾಂಗ್ರೆಸ್‌ಗೆ ಹೆಚ್ಚೇನೂ ಲಾಭ ಆಗದಿದ್ದರೂ, ಕುತೂಹಲ ಅಂತೂ ಉಂಟಾಗಿದೆ..

ಇದನ್ನೂ ಓದಿ; ಹೀಗೆ ಮಾಡಿದರೆ ಜೀವನಪೂರ್ತಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬಹುದು!

ಇನ್ನು ಕಾಂಗ್ರೆಸ್‌ ಪಕ್ಷ ಸೇರಿ ಮಾತನಾಡಿರುವ ತೇಜಸ್ವಿನಿ ಗೌಡ ಅವರು ದೇಶದಲ್ಲಿ ಸುಮ್ಮನೆ ಪ್ರಧಾನಿ ನರೇಂದ್ರ ಮೋದಿ ಹವಾ ಇದೆ ಅಂತಾರೆ.. ಆದ್ರೆ ಅವರ ಹವಾ ಇದ್ದಿದ್ದರೆ, ಕೇಂದ್ರ ಸಚಿವರಿಗೇ ಯಾಕೆ ಟಿಕೆಟ್‌ ನೀಡಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.. ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ 95 ವರ್ಷಗಳ ಹಳೆಯದು. ನಾನು ಕಾಂಗ್ರೆಸ್‌ನಿಂದಲೇ ರಾಜಕೀಯಕ್ಕೆ ಬಂದಿದ್ದು, ಈಗ ನನ್ನ ಮನೆಗೆ ನಾನು ವಾಪಸ್‌ ಬಂದಿದ್ದೇನೆ ಅಂತ ತೇಜಸ್ವಿನಿ ಗೌಡ ಹೇಳಿಕೊಂಡಿದ್ದಾರೆ..

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ಟಿವಿ ನಿರೂಪಕಿ ಸಂಸದೆಯಾಗಿದ್ದು ಹೇಗೆ..?

ತೇಜಸ್ವಿನಿ ಗೌಡ.. ಅಂದು ಅವರನ್ನು ತೇಜಸ್ವಿನಿ ಶ್ರೀರಮೇಶ್‌ ಎಂದು ಕರೆಯುತ್ತಿದ್ದರು.. ಇವರು 2002ರಿಂದ ಉದಯ ಟಿವಿಯಲ್ಲಿ ಮುಖಾಮುಖಿ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.. ಟಿವಿಗಳು ಕಡಿಮೆ ಇದ್ದ ಕಾಲದಲ್ಲಿ ರಾಜಕಾರಣಿಗಳು ಸಂದರ್ಶನಕ್ಕೆ ಕರೆದರೆ ಸಾಕು ಎಂದು ಕೂತಿರುತ್ತಿದ್ದ ಸಮಯವದು.. ಆದ್ರೆ ತೇಜಸ್ವಿನಿ ಶ್ರೀರಮೇಶ್‌ ಅವರ ಕಾರ್ಯಕ್ರಮ ಅಂದ್ರೆ ರಾಜಕಾರಣಿಗಳು ಬೆವರುತ್ತಿದ್ದರು.. ಮುಖಾಮುಖಿ ಕಾರ್ಯಕ್ರಮದಲ್ಲಿ ತೇಜಸ್ವಿನಿ ರಮೇಶ್‌ ಅವರು ರಾಜಕಾರಣಿಗಳಿಗೆ ನೇರಾನೇರ ಪ್ರಶ್ನೆಗಳನ್ನು ಕೇಳಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.. ಈ ಹಿನ್ನೆಲೆಯಲ್ಲಿ ತೇಜಸ್ವಿನಿಯವರು ಮನೆಮಾತಾಗಿದ್ದರು..

ಇನ್ನು ಅದೇ ವೇಳೆ 2004ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು.. ಆಗ ಮಾಜಿ ಪ್ರಧಾನಿ ದೇವೇಗೌಡರು ಹಾಸನ ಹಾಗೂ ಕನಕಪುರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು.. ಕಾಂಗ್ರೆಸ್‌ ಪಕ್ಷ ತೇಜಸ್ವಿನಿ ಶ್ರೀರಮೇಶ್‌ ಅವರನ್ನು ಕರೆತಂದು ಚುನಾವಣಾ ಕಣಕ್ಕೆ ಇಳಿಸಿತು.. ಅವರಿಗೆ ಎಲ್ಲಿಲ್ಲದ ಜನ ಬೆಂಬಲ ದೊರೆಯಿತು.. ತೇಜಸ್ವಿನಿಯವರು ಘಟಾನುಘಟಿಗಳ ನಡುವೆ ಗೆದ್ದುಬೀಗಿದರು.. ಅಷ್ಟೇ ಏಕೆ ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು..

ಇದನ್ನೂ ಓದಿ; ಕುಮಾರಸ್ವಾಮಿಗೆ ಆಪರೇಷನ್‌ ಆಗಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕ

 ಅಂದು ತೇಜಸ್ವಿನಿ ಪಡೆದಿದ್ದ ಮತಗಳೆಷ್ಟು..?

2004ರ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ಇತ್ತು.. ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಸಾತನೂರು, ಉತ್ತರಹಳ್ಳಿ, ಮಳವಳ್ಳಿ ಹಾಗೂ ಆನೇಕಲ್‌ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದ್ದವು.. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ತೇಜಸ್ವಿನಿ ಶ್ರೀರಮೇಶ್‌ 584238 ಮತಗಳನ್ನು ಪಡೆದು ವಿಜಯಶಾಲಿಯಾದರು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ರಾಮಚಂದ್ರಗೌಡರು 467575 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.. ಇನ್ನು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರು 462320 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.. ಅಂದರೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.. ಆದ್ರೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಗೆದ್ದು ಲೋಕಸಭೆ ಪ್ರವೇಶ ಮಾಡಿದರು.. ಆ ಚುನಾವಣೆಯಲ್ಲಿ ದೇವೇಗೌಡರು ಕನಕಪುರ ಹಾಗೂ ಹಾಸನ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು..

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

2008ರಲ್ಲಿ ಕ್ಷೇತ್ರ ಮರುವಿಂಗಡಣೆ;

2008ರಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಾಯಿತು.. ಆ ಕನಕಪುರ ಲೋಕಸಭಾ ಕ್ಷೇತ್ರವನ್ನು ತೆಗೆದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಂದು ಮಾಡಲಾಯಿತು.. ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಆನೇಕಲ್‌ ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬಂದವು.. ಇದರ ಜತೆಗೆ ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರವೂ ಇದಕ್ಕೆ ಸೇರ್ಪಡೆಯಾಯಿತು.. ಆದ್ರೆ ಮಳವಳ್ಳಿ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಹೋದರೆ, ಉತ್ತರಹಳ್ಳಿ ಕ್ಷೇತ್ರ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೇರ್ಪಡೆಯಾಯಿತು.

ಇದನ್ನೂ ಓದಿ;ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!

 

Share Post