DistrictsPolitics

ಚಿಕ್ಕಬಳ್ಳಾಪುರದಲ್ಲಿ ರೆಡ್ಡಿ, ಮೊಯ್ಲಿ ಮುನಿಸು ಡಾ.ಕೆ.ಸುಧಾಕರ್‌ಗೆ ವರವಾಗುತ್ತಾ..?

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಮೈತ್ರಿ ಅಭ್ಯರ್ಥಿ ನಡುವೆ ಬಿಗ್‌ ಫೈಟ್‌ ನಡೆದಿದೆ.. ಕಾಂಗ್ರೆಸ್‌ನಿಂದ ಬಲಿಜ ಸಮುದಾಯದ ರಕ್ಷಾ ರಾಮಯ್ಯ ಕಣದಲ್ಲಿದ್ದರೆ, ಜೆಡಿಎಸ್‌ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್‌ ತೊಡೆತಟ್ಟುತ್ತಿದ್ದಾರೆ.. ಇಲ್ಲಿ ಎಂ.ಎಸ್‌.ರಾಮಯ್ಯ ಮೊಮ್ಮಗ ರಕ್ಷಾ ರಾಮಯ್ಯ ಮೊದಲ ಬಾರಿ ಚುನಾವಣಾ ಅಖಾಡದಲ್ಲಿದ್ದಾರೆ.. ಆದ್ರೆ ಇವರಿಗೆ ಟಿಕೆಟ್‌ ವಂಚಿತರ ಬೆಂಬಲ ದೊರೆಯದೇ ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತಿದೆ..

ಇದನ್ನೂ ಓದಿ; ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುತ್ತಂತೆ ಈ ದೇಶ..!

ರೆಡ್ಡಿ, ಮೊಯ್ಲಿ ಪ್ರಚಾರಕ್ಕೆ ಬರದೆ ನಾಪತ್ತೆ;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ಎರಡು ಬಾರಿ ಸಂಸದರಾಗಿದ್ದರು.. ಕಳೆದ ಚುನಾವಣೆ ಸೋಲನುಭವಿಸಿದ್ದರು.. ವೀರಪ್ಪ ಮೊಯ್ಲಿಯವರಿಗೆ ಚಿಕ್ಕಬಳ್ಳಾಪುರ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ.. ಈ ಕ್ಷೇತ್ರದಿಂದ ಅವರು ಮತ್ತೆ ಟಿಕೆಟ್‌ ಬಯಸಿದ್ದರು.. ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಶಾಸಕರು ವೀರಪ್ಪ ಮೊಯ್ಲಿಯವರಿಗೇ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ತಿಳಿಸಿದ್ದರು.. ವೀರಪ್ಪ ಮೊಯ್ಲಿ ಅಲ್ಲದಿದ್ದರೆ ಗೌರಿಬಿದನೂರಿನ ಎನ್‌.ಹೆಚ್‌.ಶಿವಶಂಕರರೆಡ್ಡಿಗೆ ಟಿಕೆಟ್‌ ನೀಡಬೇಕೆಂದು ಕೇಳಿದ್ದರು.. ಆದ್ರೆ ಕಾಂಗ್ರೆಸ್‌ ಹೈಕಮಾಂಡ್‌ ಯುವ ನಾಯಕ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ನೀಡಿದೆ.. ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ನೀಡುತ್ತಿದ್ದಂತೆ ವೀರಪ್ಪ ಮೊಯ್ಲಿ ಹಾಗೂ ಶಿವಶಂಕರರೆಡ್ಡಿಯವರು ಸೈಲೆಂಟ್‌ ಆಗಿದ್ದಾರೆ.. ರಕ್ಷಾ ರಾಮಯ್ಯ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ.. ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.. ಯಾವ ಕಾರ್ಯಕ್ರಮದಲ್ಲೂ ಶಿವಶಂಕರರೆಡ್ಡಿ ಹಾಗೂ ವೀರಪ್ಪ ಮೊಯ್ಲಿ ಇಬ್ಬರೂ ಕಾಣಿಸಿಕೊಂಡಿಲ್ಲ.. ಹೀಗಾಗಿ ಇಬ್ಬರನ್ನೂ ಮನವೊಲಿಸುವ ಕಸರತ್ತು ನಡೆಯುತ್ತಿದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿ…

ಶಿವಶಂಕರರೆಡ್ಡಿ ಮುನಿಸಿಗೆ ಕಾರಣ ಏನು..?;

ಗೌರಿಬಿದನೂರಿನ ಎನ್‌.ಹೆಚ್‌.ಶಿವಶಂಕರರೆಡ್ಡಿ 1999ರಿಂದ ಗೌರಿಬಿದನೂರಿನಲ್ಲಿ ಸತತವಾಗಿ ಶಾಸಕರಾಗಿದ್ದರು.. ಸತತ ಐದು ಬಾರಿ ಶಾಸಕರಾಗಿದ್ದ ಅವರು, ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಪುಟ್ಟಸ್ವಾಮಿಗೌಡರು ಈ ಬಾರಿ ಗೆದ್ದಿದ್ದಾರೆ.. ಜೊತೆಗೆ ಅವರೀಗ ಕಾಂಗ್ರೆಸ್‌ನಲ್ಲೇ ಗುರತಿಸಿಕೊಂಡಿದ್ದಾರೆ.. ಗೌರಿಬಿದನೂರಿನಲ್ಲಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ.. ಇದು ಎನ್‌.ಹೆಚ್‌.ಶಿವಶಂಕರರೆಡ್ಡಿಯವರಿಗೆ ಇರಿಸುಮುರಿಸು ಉಂಟಾಗಿದೆ.. ಇದರ ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿವಶಂಕರರೆಡ್ಡಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಡೌಟು.. ಪುಟ್ಟಸ್ವಾಮಿ ಗೌಡರಿಗೆ ಮಣೆ ಹಾಕುವ ಸಾಧ್ಯತೆಯೇ ಹೆಚ್ಚಿದೆ.. ಹೀಗಾಗಿ, ಇದು ಶಿವಶಂಕರರೆಡ್ಡಿ ರಾಜಕೀಯ ಭವಿಷ್ಯದ ಪ್ರಶ್ನೆ.. ಈ ಹಿನ್ನೆಲೆಯಲ್ಲಿ ಸೂಕ್ತಸ್ಥಾನಮಾನದ ಭರವಸೆ ಸಿಕ್ಕರೆ ಮಾತ್ರ ಶಿವಶಂಕರರೆಡ್ಡಿ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ..

ಇದನ್ನೂ ಓದಿ; ಸೆಲ್ಫಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ!!

ಮೊಯಿಲಿ ಬೆಂಬಲಿತ ಶಾಸಕರು ಮನಸ್ಪೂರ್ತಿ ಕೆಲಸ ಮಾಡುವುದು ಡೌಟು;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಾಂಗ್ರೆಸ್‌ ಶಾಸಕರು ವೀರಪ್ಪ ಮೊಯ್ಲಿ ಪರವಾಗಿ ಒಲವು ತೋರಿದ್ದರು.. ಆದ್ರೆ ಈ ಬಾರಿ ವೀರಪ್ಪ ಮೊಯ್ಲಿಗೆ ಟಿಕೆಟ್‌ ಸಿಕ್ಕಿಲ್ಲ.. ಹೀಗಾಗಿ ಶಾಸಕರು ಸೇರಿ ಹಲವು ನಾಯಕರಿಗೆ ಅಸಮಾಧಾನ ಇದೆ.. ಆದರೂ ರಕ್ಷಾ ರಾಮಯ್ಯ ಪರ  ನಿಂತಿದ್ದಾರೆ.. ಆದ್ರೆ ಅವರೆಲ್ಲಾ ಮನಸ್ಪೂರ್ತಿಯಾಗಿ ಕೆಲಸ ಮಾಡುವುದು ಅನುಮಾನ ಎನ್ನಲಾಗುತ್ತಿದೆ.. ಈ ಹಿನ್ನೆಲೆಯಲ್ಲಿ ರಕ್ಷಾ ರಾಮಯ್ಯ ಅವರಿಗೆ ಪಕ್ಷದಲ್ಲಿನ ಭಿನ್ನಾಭಿಪ್ರಾಯವೇ ತಲೆನೋವಾಗಿದೆ.. ಅವರ ಮನವೊಲಿಸಲು ರಕ್ಷಾ ರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ.. ಇನ್ನು ಸುರ್ಜೇವಾಲಾ ಅವರು ವೀರಪ್ಪ ಮೊಯ್ಲಿ ಅವರ ಜತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನು ಶಿವಶಂಕರರೆಡ್ಡಿಯವರನ್ನೂ ಬೆಂಗಳೂರಿಗೆ ಕರೆಸಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

 

Share Post