Hijab Row:ತುಮಕೂರಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರ ಹೈಡ್ರಾಮಾ
ತುಮಕೂರು: ಹಿಜಾಬ್ ವಿವಾದ ತಾರಕಕ್ಕೇರಿದೆ. ನ್ಯಾಯಾಲಯ ಆದೇಶ ಇದ್ದರೂ ವಿದ್ಯಾರ್ಥಿನಿಯರು ಪಾಲನೆ ಮಾಡದೆ ಹಿಜಾಬ್ ಧರಿಸಿ ಶಾಲಾ-ಕಾಲೇಜಿಗೆ ಬರುತ್ತಿದ್ದಾರೆ. ಹಲವೆಡೆ ತರಗತಿಗೆ ತೆರಳದೆ ಮನೆಗೆ ವಾಪಸಾಗಿದ್ದಾರೆ. ಇನ್ನೂ ಕೆಲವು ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆ ಬರೆಯದೆ ವಾಪಸಾಗಿದ್ದಾರೆ. ಮಕ್ಕಳಿಗೆ ಪೋಷಕರು ಸಾಥ್ ನೀಡಿದ್ದು ಧರಣಿ ಕೂಡ ನಡೆಸಿದ್ದಾರೆ.
ಈ ನಡುವೆ ತುಮಕೂರಿನಲ್ಲಿ ವಿದ್ಯಾರ್ಥಿನಿಯರಿಂದ ಹೈಡ್ರಾಮಾ ನಡೆದಿದೆ. ನಗರದ ಟೌನ್ಹಾಲ್ ಬಳಿಯಿರುವ ಎಂಪ್ರೆಸ್ ಕಾಲೇಜಿನ ವಿದ್ಯಾರ್ಥಿನಿಯರು ತರಗತಿಗೂ ತೆರಳದೆ ಮನೆಗೂ ವಾಪಸಾಗದೆ ಹೈಡ್ರಾಮಾ ಮಾಡಿದ್ದಾರೆ. ಕಾಲೇಜಿನಿಂದ ಟೌನ್ಹಾಲ್ವರೆಗೂ ಮೆರವಣಿಗೆ ಸಾಗಿದ್ದಾರೆ. ದಾರಿಯುದ್ದಕ್ಕೂ ʻಅಲ್ಲಾಹು ಅಕ್ಬರ್ʼ ಎಂಬ ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿದ್ದಾರೆ. ಪೊಲೀಸರು ವಿದ್ಯಾರ್ಥಿನಿಯರು ಮನವೊಲಿಕೆಗೆ ಪಟ್ಟ ಪ್ರಯತ್ನ ವ್ಯರ್ಥವಾಗಿದೆ. ಪೊಲೀಸರ ಮಾತಿಗೂ ಬೆಲೆ ಕೊಡದೆ ವಿದ್ಯಾರ್ಥಿನಿಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.