InternationalLifestyle

ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುತ್ತಂತೆ ಈ ದೇಶ..!

ಭಾರತದಲ್ಲಿ ಆನೆಗಳಿಗೆ ವಿಶೇಷ ಗೌರವವಿದೆ.. ಹೀಗಾಗಿಯೇ ಅವುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತೇವೆ.. ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುತ್ತೇವೆ.. ಉತ್ಸವಗಳಲ್ಲಿ ಮೆರವಣಿಗೆಗೆ ಆನೆಗಳನ್ನು ಬಳಸುತ್ತೇವೆ.. ಕೆಲವೊಂದು ಕಡೆ ಆನೆಗಳು ಕಾಡಿನಿಂದ ನಾಡಿಗೆ ಬಂದು ಜನರಿಗೆ ಅವಾಂತರ ಉಂಟು ಮಾಡಿದರೂ ಭಾರತೀಯರು ಮಾತ್ರ ಆನೆಗ ಬಗ್ಗೆ ವಿಶೇಷ ಪೂಜ್ಯನೀಯ ಭಾವನೆ ಹೊಂದಿದ್ದಾರೆ.. ಆದ್ರೆ ಇಲ್ಲೊಂದು ಪುಟ್ಟ ದೇಶ ಇದೆ.. ಈ ದೇಶದ ಜನ ಆನೆ ಕಂಡರೆ ಸಾಕು ಸಾಯಿಸಲು ಮುಂದಾಗುತ್ತಾರೆ… ಅಷ್ಟೇ ಏಕೆ ಈ ದೇಶದ ಸರ್ಕಾರ 20 ಸಾವಿರ ಆನೆಗಳನ್ನು ಜರ್ಮನಿ ದೇಶಕ್ಕೆ ನುಗ್ಗಿಸುವ ಬೆದರಿಕೆ ಹಾಕುತ್ತಿದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿ…

ಬೋಟ್ಸ್‌ವಾನಾ ಎಂಬ ಪುಟ್ಟ ದೇಶ;

ದಕ್ಷಿಣ ಆಫ್ರಿಕಾದಲ್ಲಿ ಬೋಟ್ಸ್‌ವಾನಾ ಎಂಬ ಒಂದು ಪುಟ್ಟ ದೇಶವೊಂದಿದೆ.. ಈ ದೇಶಕ್ಕೆ ಬರುವ ಪ್ರವಾಸಿಗರು ಇಲ್ಲಿ ಕಾಣಿಸುವ ಆನೆಗಳನ್ನು ನೋಡಿ ಹೆಚ್ಚು ಆನಂದಪಡುತ್ತಾರೆ.. ಆದ್ರೆ ಈ ದೇಶದ ಜನಕ್ಕೆ ಹಾಗೂ ಸರ್ಕಾರಕ್ಕೆ ಆನೆಗಳೆಂದರೆ ದೊಡ್ಡ ತಲೆನೋವು.. ಯಾಕಂದ್ರೆ ಈ ಪುಟ್ಟ ದೇಶದಲ್ಲಿ ಆನೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.. ಸದ್ಯ ಈ ದೇಶದಲ್ಲಿ 1 ಲಕ್ಷದ 30 ಸಾವಿರದಷ್ಟು ಆನೆಗಳಿವೆ.. ಅಂದರೆ ವಿಶ್ವದಲ್ಲಿರುವ ಆನೆಗಳಲ್ಲಿ ಮೂರನೇ ಒಂದರಷ್ಟು ಆನೆಗಳು ಈ ಬೋಟ್ಸ್‌ವಾನಾ ದೇಶದಲ್ಲೇ ಇವೆ.. ಆನೆಗಳು ಯಾವಾಗಲೂ ಮನೆಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ… ಹೀಗಾಗಿ ಇದರಿಂದ ಜನ ರೋಸಿಹೋಗಿದ್ದಾರೆ…

ಇದನ್ನೂ ಓದಿ; ಸೆಲ್ಫಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ!!

ಜರ್ಮನ್‌ ಸರ್ಕಾರದ ನೀತಿಯಿಂದ ಇಲ್ಲಿ ತಲೆನೋವು;

ಜರ್ಮನ್‌ ಸರ್ಕಾರ ನೀತಿಯೊಂದನ್ನು ಮಾಡಿದೆ.. ಕಾಡುಪ್ರಾಣಿಗಳು ಯಾವುದೇ ತೊಂದರೆ ಕೊಡಬಾರದು.. ಮನುಷ್ಯರಂತೆಯೇ ಪ್ರಾಣಿಗಳು ಕೂಡಾ ಇರಬೇಕು.. ಮನುಷ್ಯರು ಹಾಗೂ ಪ್ರಾಣಿಗಳು ಒಟ್ಟಿಗೆ ಬದುಕಬೇಕು ಎಂದು ಕಾನೂನು ಮಾಡಿದೆ.. ಇದರಿಂದಾಗಿ ಬೋಟ್ಸ್‌ವಾನಾದ ಜನರಿಗೆ ತಲೆನೋವು ಶುರುವಾಗಿದೆ.. ಹೀಗಾಗಿ, ಜರ್ಮನ್‌ ಸರ್ಕಾರದ ವಿರುದ್ಧ ಬೋಟ್ಸ್‌ವಾನಾದ ಜನ ಕಿಡಿಕಾರುತ್ತಿದ್ದಾರೆ..

ಇದನ್ನೂ ಓದಿ; ವಾಕಿಂಗ್‌ ಮಾಡುವಾಗ ರಿವರ್ಸ್‌ ನಡೆದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..?

ಆನೆಗಳ ಬೇಟೆ ನಿಷೇಧ ತೆಗೆದ ಬೋಟ್ಸ್‌ವಾನಾ ಸರ್ಕಾರ;

ಇನ್ನು ಬೋಟ್ಸ್‌ ವಾನಾ ಸರ್ಕಾರ 2019ರಲ್ಲಿ ಆನೆಗಳ ಬೇಟೆ ಮೇಲಿನ ನಿಷೇಧ ತೆಗೆದುಹಾಕಿದೆ.. ಪ್ರವಾಸಿಗರು ಕೂಡಾ ಇಲ್ಲಿಗೆ ಬಂದು ಆನೆಗಳನ್ನು ಬೇಟೆಯಾಡಿದರೆ ಯಾರೂ ಏನೂ ಅನ್ನೋದಿಲ್ಲ.. ಆದರೂ ಕೂಡಾ ಇಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ..

ಇದನ್ನೂ ಓದಿ; ಕಾಫಿ ಹೀಗೆ ಕುಡಿದರೆ ದೇಹದಲ್ಲಿನ ಕೊಬ್ಬು ಬೆಣ್ಣೆಯಂತೆ ಕರಗಿಹೋಗುತ್ತೆ..!

ಜರ್ಮನಿಗೆ 20 ಸಾವಿರ ಆನೆ ನುಗ್ಗಿಸ್ತೀವಿ ಎಂದ ಅಧ್ಯಕ್ಷ;

ಬೋಟ್ಸ್‌ವಾನಾ ಎಂಬ ಪುಟ್ಟ ದೇಶದ ಅಧ್ಯಕ್ಷ ಮೊಕ್ಗ್ವೀಟ್ಸಿ ಮಸಿಸಿ, ಜರ್ಮನಿಗೆ  20 ಸಾವಿರ ಆನೆಗಳನ್ನು ನುಗ್ಗಿಸುವ ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಕೂಡಾ ಬೋಟ್ಸ್‌ವಾನಾ ಸರ್ಕಾರ ಹೀಗೆ ಮಾಡಿತ್ತು..  ಅಂಗೋಲಾಕ್ಕೆ 8000 ಆನೆಗಳು, ಮೊಜಾಂಬಿಕ್‌ಗೆ 500 ಆನೆಗಳನ್ನು ಕಳುಹಿಸಲಾಗಿತ್ತು.. ಇನ್ನು ಆನೆಗಳ ಬೇಟೆಗೆ ನಿಷೇಧ ಹೇರಿದ್ದ ಇಂಗ್ಲೆಂಡ್‌ ದೇಶಕ್ಕೂ 10,000 ಆನೆಗಳನ್ನು ಕಳುಹಿಸುವುದಾಗಿ ಈ ಹಿಂದೆ ಬೆದರಿಕೆ ಹಾಕಲಾಗಿತ್ತು.. ಈಗ ಜರ್ಮನಿಗೆ ಬೋಟ್ಸ್‌ವಾನಾ ಬೆದರಿಕೆ ಹಾಕುತ್ತಿದೆ..

ಇದನ್ನೂ ಓದಿ;  ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

Share Post