HealthLifestyle

ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿ…

ಆಯುರ್ವೇದದ ಪ್ರಕಾರ, ದೇಹದಲ್ಲಿ ಮೂರು ವಿಷಯಗಳನ್ನು ಸಮತೋಲನವಾಗಿಡಬೇಕು.. ಇವುಗಳಲ್ಲಿ ಯಾವುದಾದರೂ ಒಂದು ಕೊರತೆಯಾದರೂ ನಮ್ಮ ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.. ಇವುಗಳನ್ನು ಹೋಗಲಾಡಿಸಲು ದೇಹದ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.. ಬೇಸಿಗೆಯಲ್ಲಿ ಕಫ ದೋಷವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ.. ಇದು ದೇಹದಲ್ಲಿ ಹೀಟ್‌ ಹೆಚ್ಚಳ ಮಾಡುತ್ತದೆ.. ಆದ್ರೆ ಬೇಸಿಗೆ ಬಾಡಿ ಹೀಟ್‌ ಕಡಿಮೆ ಮಾಡಲು ಇಲ್ಲಿ ಒಂದಷ್ಟು ಸಲಹೆಗಳನ್ನು ನೀಡಲಾಗಿದೆ..

ಇದನ್ನೂ ಓದಿ; ಸೆಲ್ಫಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ!!

ಹೆಚ್ಚು ನೀರು ಕುಡಿಯಿರಿ;

ಬೇಸಿಗೆಯಲ್ಲಿ ಹೆಚ್ಚು ಬಾಯಾರಿಕೆಯಾಗುತ್ತದೆ.. ದೇಹದಲ್ಲಿನ ನೀರಿನ ಅಂಶ ಬೆವರಿನ ಮೂಲಕ ಹೊರಹೋಗುತ್ತದೆ.. ಹೀಗಾಗಿ, ಬೇಸಿಗೆಯಲ್ಲಿ ಹೆಚ್ಚಿನ ನೀರು ಕುಡಿಯಬೇಕು.. ಕನಿಷ್ಟಕ್ಕೆ ದಿನಕ್ಕೆ ಒಬ್ಬರು ಮೂರು ಲೀಟರ್‌ ನೀರು ಕುಡಿಯಬೇಕು.. ಕೋಲ್ಡ್‌ ನೀರಿಗಿಂತ ನಾರ್ಮಲ್‌ ನೀರು ಕುಡಿಯುವುದು ಹೆಚ್ಚು ಸೂಕ್ತ.. ನೀರು ಬಿಸಿ ಮಾಡಿ ಆರಿಸಿ ಕುಡಿದರಂತೂ ದೇಹದ ಎಲ್ಲಾ ಅಂಗಗಳನ್ನೂ ಚೈತನ್ಯಗೊಳಿಸುತ್ತದೆ. ಜೊತೆಗೆ ಜೀವಕೋಶಗಳನ್ನು ಪುನರ್ಯೌವನಗೊಳಿಸುತ್ತದೆ. ಈ ನೀರಿಗೆ ನಿಂಬೆರಸ, ಪುದೀನಾ ರಸ, ಮಜ್ಜಿಗೆ ಇತ್ಯಾದಿಗಳನ್ನು ಬೆರೆಸಬಹುದು. ಆದರೆ ಬಿಸಿ ಪಾನೀಯಗಳನ್ನು ಕುಡಿಯುವುದನ್ನು ತಪ್ಪಿಸಿ.

ಇದನ್ನೂ ಓದಿ; ವಾಕಿಂಗ್‌ ಮಾಡುವಾಗ ರಿವರ್ಸ್‌ ನಡೆದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ..?

ಬೇಸಿಗೆಯಲ್ಲಿ ಈ ಆಹಾರಗಳನ್ನು ತೆಗೆದುಕೊಳ್ಳಿ;

ಬೇಸಿಗೆಯಲ್ಲಿ ದೇಹದಲ್ಲಿ ಪಿತ್ತ ಹೆಚ್ಚಾಗುತ್ತದೆ.. ದೇಹದಲ್ಲಿ ಹೀಟ್‌ ಜಾಸ್ತಿಯಾಗುತ್ತದೆ.. ಇದನ್ನ ಕಡಿಮೆ ಮಾಡಬೇಕಾಗುತ್ತದೆ.. ಇಲ್ಲದೆ ಹೋದರೆ ಹಲವು ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.. ಹೀಗಾಗಿ ಬೇಸಿಗೆಯಲ್ಲಿ ಹಣ್ಣು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು.. ಅದರಲ್ಲೂ  ಆಯುರ್ವೇದದಲ್ಲಿ ಹೇಳಿದ ಪ್ರಕಾರ, ಪುದೀನಾ, ಕೊತ್ತಂಬರಿ, ಸೌತೆಕಾಯಿ, ಕುಂಬಳಕಾಯಿ, ಎಲೆಕೋಸು, ಮೆಂತ್ಯ, ಸೋಂಪು, ಹಣ್ಣುಗಳು, ಕಲ್ಲಂಗಡಿ ಹಣ್ಣುಗಳನ್ನು ಬೇರೆ ಬೇರೆ ರೂಪದಲ್ಲಿ ದೇಹಕ್ಕೆ ತೆಗೆದುಕೊಂಡರೆ ಒಳ್ಳೆಯದು..

ಇದನ್ನೂ ಓದಿ; ಕಾಫಿ ಹೀಗೆ ಕುಡಿದರೆ ದೇಹದಲ್ಲಿನ ಕೊಬ್ಬು ಬೆಣ್ಣೆಯಂತೆ ಕರಗಿಹೋಗುತ್ತೆ..!

ಬೇಸಿಗೆಯಲ್ಲಿ ಹೆಚ್ಚು ಘನ ಆಹಾರ ಬೇಡ;

ಬೇಸಿಗೆ ನಾವು ತಿಂದ ಘನ ಆಹಾರ ಬೇಗ ಜೀರ್ಣವಾಗುವುದಿಲ್ಲ.. ಹೀಗಾಗಿ ಘನ ಆಹಾರಗಳನ್ನು ಆದಷ್ಟು ಕಡಿಮೆ ತಿನ್ನಿ.. ಹೆಚ್ಚಾಗಿ ಜ್ಯೂಸ್‌, ಸೂಪ್‌ ಮತ್ತಿತರ ರೂಪದಲ್ಲಿ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು.. ಹಾಗೆ ಮಾಡುವುದರಿಂದ ದೇಹದಲ್ಲಿ ನಿರ್ಜಲೀಕರಣ ಕಡಿಮೆಯಾಗುತ್ತದೆ.. ಜೊತೆಗೆ ಬೇಗ ಜೀರ್ಣವೂ ಆಗುತ್ತದೆ.. ಘನ ಆಹಾರಗಳನ್ನು ಆದಷ್ಟು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಿ.. ಸಿಹಿ, ಕಹಿ ಮತ್ತು ಹುಳಿ ಆಹಾರಗಳನ್ನು ಬೇಸಿಗೆಯಲ್ಲಿ ಆದಷ್ಟು ಕಡಿಮೆ ಸೇವನೆ ಮಾಡುವುದು.

ಇದನ್ನೂ ಓದಿ; ಕನಸಿನಲ್ಲಿ ದೀಪ ಕಾಣಿಸಿದರೆ ಇದು ಯಾವುದಕ್ಕೆ ಸಂಕೇತ..?

ಖಾಲಿ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ಇರಬೇಡಿ;

ಬೇಸಿಗೆ ಹಾಗೂ ಬಿಸಿ ಗಾಳಿಯಿಂದಾಗಿ ದೇಹ ಬಹುಬೇಗ ಶಕ್ತಿ ಕಳೆದುಕೊಳ್ಳುತ್ತದೆ.. ಇಂತಹ ಸಮಯದಲ್ಲಿ ಹೆಚ್ಚು ಹೊತ್ತು ಏನೂ ತಿನ್ನದೇ ಇದ್ದರೆ, ತಲೆ ಸುತ್ತಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.. ಹೀಗಾಗಿ, ಆಗಾಗ ಏನಾದರೂ ತಿನ್ನುತ್ತಿರಿ.. ಹೆಚ್ಚು ಜ್ಯೂಸ್‌ಗಳು, ಎಳ ನೀರು ಹಾಗೂ ಹಣ್ಣುಗಳನ್ನು ಸೇವನೆ ಮಾಡಿ. ಒಂದು ವೇಳೆ ಹೆಚ್ಚು ಹೊತ್ತು ಹೊಟ್ಟೆ ಖಾಲಿ ಇಟ್ಟಿದ್ದರೆ ಅಸಿಡಿಟಿ, ಜೀರ್ಣಕ್ರಿಯೆ ಸಮಸ್ಯೆ, ತಲೆನೋವು ಹೆಚ್ಚಾಗುತ್ತದೆ.. ದೇಹದಲ್ಲಿ ಹೀಟ್‌ ಕೂಡಾ ಹೆಚ್ಚಾಗುತ್ತದೆ..

Share Post