ಗಂಡನೂ ಬೇಕು, ಪ್ರಿಯಕರನೂ ಬೇಕು; ವಿದ್ಯುತ್ ಕಂಬ ಏರಿದ ಮಹಿಳೆ!
ಗೋರಖ್ ಪುರ; ಆಕೆ 34 ವರ್ಷ ವಯಸ್ಸಿವಳು.. ಮೂವರು ಮಕ್ಕಳು ಕೂಡಾ ಇದ್ದಾರೆ.. ಆ ಮಹಿಳೆ ಗಂಡನನ್ನು ಯಾಮಾರಿಸಿ ಪ್ರಿಯಕರನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.. ಅದೆಷ್ಟು ದಿನದಿಂದ ನಡೆಯುತ್ತಿತ್ತೋ ಏನೋ ಈ ವ್ಯವಹಾರ.. ಕೊನೆಗೆ ಗಂಡನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.. ಆಗ ಆಕೆ ದೊಡ್ಡದೊಂದು ನಾಟಕ ಶುರು ಮಾಡಿದ್ದಾಳೆ… ಮನೆಯ ಬಳಿಯೇ ಇದ್ದ ವಿದ್ಯುತ್ ಕಂಬ ಏರಿದ ಮಹಿಳೆ, ನನಗೆ ಗಂಡನೂ ಬೇಕು, ಪ್ರಿಯಕರನೂ ಬೇಕು ಎಂದು ಪಟ್ಟು ಹಿಡಿದಿದ್ದಾಳೆ..
ಇದನ್ನೂ ಓದಿ; ಚಿಕ್ಕಬಳ್ಳಾಪುರದಲ್ಲಿ ರೆಡ್ಡಿ, ಮೊಯ್ಲಿ ಮುನಿಸು ಡಾ.ಕೆ.ಸುಧಾಕರ್‌ಗೆ ವರವಾಗುತ್ತಾ..?
ಗೋರಖ್‌ಪುರದಲ್ಲಿ ವಿಚಿತ್ರ ಮಹಿಳೆ;
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಗೋರಖ್‌ಪುರದ ಪಿಪ್ರೈಚ್ ಪ್ರದೇಶದ ಸುಮನ್ ದೇವಿ (34) ಎಂಬ ಮಹಿಳೆಯೇ ಈ ನಾಟಕ ಶುರು ಮಾಡಿದವಳು.. ಈಕೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮಮ ಸಂಬಂಧ ಇಟ್ಟುಕೊಂಡಿದ್ದಳು.. ಅದು ಗಂಡನಿಗೂ ಗೊತ್ತಾಗಿ ಹಲವು ಬಾರಿ ಗಲಾಟೆಗಳು ನಡೆದಿದ್ದವು.. ಕೊನೆಗೆ ಆ ಮಹಿಳೆ ಪ್ರಿಯಕರನ ಜೊತೆ ಇರುವಾಗಲೇ ಗಂಡನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.. ಈ ವೇಳೆ ರಾಜಿ ಪಂಚಾಯ್ತಿ ನಡೆದಿದೆ.. ಆಗ ಮಹಿಳೆ ನಾನು ಗಂಡನ ಜೊತೆಯೂ ಸಂಸಾರ ಮಾಡುತ್ತೇನೆ.. ಪ್ರಿಯಕರನ ಜೊತೆಯೂ ಇರುತ್ತೇನೆ ಎಂದು ಹೇಳಿದ್ದಾಳೆ.. ಕುಟುಂಬಸ್ಥರು ಎಷ್ಟು ಹೇಳಿದರೂ ಆ ಮಹಿಳೆ ಒಪ್ಪಿಲ್ಲ.. ಮನೆ ಮುಂದಿನ ಕರೆಂಟ್ ಕಂಬ ಹತ್ತಿ ಕುಳಿತಿದ್ದಾಳೆ.. ಗಂಡ ಮತ್ತು ಗೆಳೆಯ ಇಬ್ಬರ ಜೊತೆಯಲ್ಲಿ ಇರುತ್ತೇನೆ, ಒಪ್ಪಿದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಪಟ್ಟು ಹಿಡಿದಿದ್ದಾಳೆ. ಇದನ್ನು ಕಂಡ ಸ್ಥಳೀಯರು ಆಕೆಯನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ.. ಏಪ್ರಿಲ್ 3 ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ..
ಇದನ್ನೂ ಓದಿ; ಜರ್ಮನಿಗೆ 20 ಸಾವಿರ ಆನೆಗಳನ್ನು ನುಗ್ಗಿಸುತ್ತಂತೆ ಈ ದೇಶ..!
ಅನ್ಟೋನ್ ಎಂಬಾತನ ಜೊತೆ ಅನೈತಿಕ ಸಂಬಂಧ;
ಉತ್ತರ ಪ್ರದೇಶದ ಗೋರಖ್‌ಪುರದ ಪಿಪ್ರೈಚ್ ಪ್ರದೇಶದ ಸುಮನ್ ದೇವಿ (34) ಎಂಬ ಮಹಿಳೆ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಕಳೆದ ಏಳು ವರ್ಷಗಳಿಂದ ಮಹಿಳೆಯು ಸ್ಥಳೀಯ ಅನ್ಟೋನ್ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಈ ವಿಷಯ ಆಕೆಯ ಪತಿಗೆ ತಿಳಿದಿದೆ.. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.. ಇದರಿಂದಾಗಿ ಗಂಡ ಮನೆಯಿಂದ ಆಕೆಯನ್ನು ಹೊರಹಾಕಿದ್ದಾನೆ..ಈ ವೇಳೆ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ತನ್ನ ಬಾಯ್ ಫ್ರೆಂಡ್ ಕೂಡ ತಮ್ಮ ಜೊತೆ ಇರುತ್ತಾನೆ, ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಆದರೆ ಪತಿ ಇದಕ್ಕೆ ಒಪ್ಪಿಲ್ಲ.. ಇದರಿಂದಾಗಿ ಸುಮನ್ ದೇವಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ತಿಂಗಳ ಹಿಂದೆ ಕಟ್ಟಡದ 5ನೇ ಮಹಡಿಯಿಂದ ಕೆಳಗೆ ಜಿಗಿಯಲು ಯತ್ನಿಸಿದ್ದಳು. ಅದು ವಿಫಲವಾದ ಕಾರಣ, ರೈಲು ಹಳಿಗಳ ಮೇಲೆ ಓಡಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು.
ಇದನ್ನೂ ಓದಿ; ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಹೀಗೆ ಮಾಡಿ…