ದಾವಣಗೆರೆಯಲ್ಲಿ ಬಿಜೆಪಿಗೆ ಬಂಡಾಯದ ಭೀತಿ; ಬಿಎಸ್‌ವೈ ಸಂಧಾನಕ್ಕೂ ಬಗ್ಗದ ನಾಯಕರು!
ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯದ ಬಿಸಿ ಅನುಭವಿಸುತ್ತಲೇ ಇದೆ.. ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.. ಅದರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ಕೂಡಾ ಒಂದು.. ಇಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ ಟಿಕೆಟ್ ನೀಡಲಾಗಿದೆ.. ಇದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ..
ಇದನ್ನೂ ಓದಿ; ಶುರುವಾಯ್ತು ಪ್ರದೀಪ್ ಈಶ್ವರ್-ಸುಧಾಕರ್ ಯುದ್ಧ; ಟ್ರಿಮ್ ಆಗಿ ಅಖಾಡಕ್ಕೆ ರೆಡಿಯಾದ ಮಾಜಿ ಸಚಿವ
ಸಂಧಾನಸಭೆಗೆ ಬಾರದ ರೇಣುಕಾಚಾರ್ಯ, ರವೀಂದ್ರನಾಥ್;
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಸೋಲನುಭವಿಸಿದ್ದರು.. ಹೀಗಾಗಿ ಅವರು ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು.. ಇದರ ಜೊತೆಗೆ ಎಸ್.ಎ.ರವೀಂದ್ರನಾಥ್ ಕೂಡಾ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದರು.. ಆದ್ರೆ ಬಿಜೆಪಿ ಹೈಕಮಾಂಡ್ ಮಾತ್ರ ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ಕೊಟ್ಟಿದೆ.. ಇದರಿಂದ ರೇಣುಕಾಚಾರ್ಯ ಸೇರಿ ಹಲವು ನಾಯಕರು ಮುನಿಸಿಕೊಂಡಿದ್ದಾರೆ..
ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಂಧಾನ ಸಭೆ ಕರೆದಿದ್ದರು.. ಆದ್ರೆ ಈ ಸಭೆಗೆ ಯಡಿಯೂರಪ್ಪ ಅವರ ಪರಮಾಪ್ತರಾಗಿರುವ ರೇಣುಕಾಚಾರ್ಯ ಅವರೇ ಗೈರು ಹಾಜರಾಗಿದ್ದರು.. ಇದರ ಜತೆಗೆ ಎಸ್.ಎ.ರವೀಂದ್ರನಾಥ್ ಕೂಡಾ ಬಂದಿರಲಿಲ್ಲ. ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕರಾದ ಜಗಳೂರು ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ, ಹರಿಹರ ಶಾಸಕ ಬಿಪಿ ಹರೀಶ್ ಮಾತ್ರ ಇದ್ದರು..
ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿನಾ, ನಿಖಿಲ್ ಕುಮಾರಸ್ವಾಮಿನಾ..?; ಸುಮಲತಾ ನಡೆ ಏನು..?
ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದ ಅಸಮಾಧಾನಿತರು;
ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ನೀಡಿರುವುದಕ್ಕೆ ಹಲವು ನಾಯಕರು ಅಸಮಾಧಾನಗೊಂಡಿದಾರೆ.. ಇದರಲ್ಲಿ ಕರುಣಾಕರ ರೆಡ್ಡಿ, ರೇಣುಕಾಚಾರ್ಯ ಹಾಗೂ ರವೀಂದ್ರನಾಥ್ ಪ್ರಮುಖರು.. ಹೀಗಾಗಿಯೇ ಇವರು ಯಡಿಯೂರಪ್ಪ ಕರೆದರೂ ಸಂಧಾನ ಸಭೆಗೆ ಬಂದಿಲ್ಲ.. ಇವರೆಲ್ಲಾ ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದಾರೆ.. ಈ ಸಂಬಂಧ ಯಡಿಯೂರಪ್ಪ ಅವರು ಸ್ಥಳೀಯ ನಾಯಕರ ಜೊತೆ ಮಾತನಾಡಿದ್ದಾರೆ.. ಮನಸ್ತಾಪ ಮರೆತು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಮುಖಂಡರಿಗೆ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.
ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ;
ಅಭ್ಯರ್ಥಿ ಬದಲಾವಣೆಗೆ ಪಟ್ಟು ಹಿಡಿದಿರುವ ನಾಯಕರು, ಬದಲಾವಣೆ ಮಾಡದಿದ್ದರೆ ಬಂಡಾಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.. ಇದಕ್ಕಾಗಿ ಚರ್ಚೆಗಳು ಕೂಡಾ ನಡೆದಿವೆ.. ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ.. ಅವರನ್ನು ಗೆಲ್ಲಿಸಿ ಮೋದಿಯವರಿಗೆ ಒಪ್ಪಿಸುತ್ತೇವೆ ಎಂದು ಹೇಳುತ್ತಿದ್ದಾರೆ.. ಇದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.. ಬಂಡಾಯ ಶಮನಕ್ಕೆ ಸತತ ಪ್ರಯತ್ನಗಳು ನಡೆಯುತ್ತಿವೆ..
ಇದನ್ನೂ ಓದಿ; ವಿನಾಕಾರಣ ತಲೆನೋವು ಬರುತ್ತಿದೆಯೇ..?; ಮೆದುಳಲ್ಲಿ ರಕ್ತಸ್ರಾವಕ್ಕೆ ಕಾರಣಗಳೇನು..?
ನಾಳೆ ಯಡಿಯೂರಪ್ಪ ದಾವಣಗೆರೆಗೆ ಭೇಟಿ ಸಾಧ್ಯತೆ;
ಆಪ್ತರೇ ಆದ ರೇಣುಕಾಚಾರ್ಯ ಕೂಡಾ ಇನ್ನೂ ಮುನಿಸಿಕೊಂಡಿದ್ದಾರೆ.. ಯಡಿಯೂರಪ್ಪ ಕರೆದ ಸಭೆಗೇ ಅವರು ಹಾಜರಾಗಿಲ್ಲ.. ಹೀಗಾಗಿ ಯಡಿಯೂರಪ್ಪಗೆ ಇದು ತಲೆನೋವಾಗಿದೆ.. ಹೀಗಾಗಿ ನಾಳೆ ಅವರು ದಾವಣಗೆರೆಗೆ ಭೇಟಿ ನೀಡುವ ಸಾಧ್ಯತೆ ಇದೆ.. ಅಲ್ಲಿಯೇ ಎಲ್ಲಾ ನಾಯಕರನ್ನೂ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಸಾಧ್ಯತೆ ಇದೆ.. ಇಂದು ಸಭೆ ನಡೆಸಿದ್ದಲ್ಲದೆ ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.. ನಾಳೆಯ ಮಾತುಕತೆಗೂ ಜಗ್ಗಲಿಲ್ಲ ಅಂದ್ರೆ ಬಿಜೆಪಿ ನಾಯಕರಿಗೆ ಸಂಕಷ್ಟ ಎದುರಾಗಲಿದೆ.. ಈಗಾಗಲೇ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಬಂಡಾಯ ಎದ್ದಿದ್ದಾರೆ.. ಇತ್ತ ದಾವಣಗೆರೆಯಲ್ಲೂ ಬಂಡಾಯ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಬಿಜೆಪಿ ಅಭ್ಯರ್ಥಿ ಗೆಲುವು ಕಷ್ಟವಾಗಬಹುದು..
ಇದನ್ನೂ ಓದಿ; ಕಾಂಗ್ರೆಸ್ ಸಚಿವರಿಗೆ ಹೈಕಮಾಂಡ್ ಟಾರ್ಗೆಟ್; ಮಕ್ಕಳು, ಸಂಬಂಧಿಕರು ಸೋತರೆ ಅಷ್ಟೇ ಕತೆ!