DistrictsPolitics

ಬಿಜೆಪಿ ವಿಶ್ವಾಸದ್ರೋಹ ಪಾರ್ಟಿ ಅನ್ನೋದು ಸಾಬೀತಾಗಿದೆ; ಡಿ.ಕೆ.ಶಿವಕುಮಾರ್

ಮೈಸೂರು; ಮೀಸಲಾತಿ ಪರಿಷ್ಕರಣೆ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರ ಅಫಿಡವಿಟ್‌ ಸಲ್ಲಿಸಲು ವಿಫಲವಾಗಿದೆ. ಈ ಮೂಲಕ ಬಿಜೆಪಿ ವಿಶ್ವಾಸದ್ರೋಹ ಪಾರ್ಟಿ ಅನ್ನೋದು ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮೈಸೂರಿನಲ್ಲಿ ರಣದೀಪ್‌ ಸುರ್ಜೇವಾಲಾ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್‌, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣಾ ಸಮಯದಲ್ಲಿ ಮೀಸಲಾತಿ ಹಂಚಿಕೆ ಮಾಡಿದಿರಿ. ಅದನ್ನು ಜಾರಿಗೆ ತರಬೇಕು ಅಲ್ಲವೇ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್‌, ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಆರೋಪಿಸಿದರು. ಜಯ ಮೃತ್ಯುಂಜಯ ಸ್ವಾಮೀಜಿ ಹೇಳುತ್ತಿದ್ದರು. ಮೀಸಲಾತಿ ಏನೋ ಕೊಟ್ಟಿದ್ದಾರೆ. ಆದ್ರೆ ಅವರು ತಲೆ ಮೇಲೆ ತುಪ್ಪು ಇಟ್ಟಿದ್ದಾರೆ. ಅತ್ತ ವಾಸನೆಯೂ ಬರಲ್ಲ, ನಾಲಗೆಗೆ ರುಚಿಯೂ ಸಿಗೋದಿಲ್ಲ ಎಂದಿದ್ದರು. ಅದು ಈಗ ನಿಜವಾಗಿದೆ ಎಂದು ಡಿ.ಕೆ.ಶಿವಕುಮಾರ್‌, ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ನಿಮ್ಮ ಮೀಸಲಾತಿ ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ರಿಜೆಕ್ಟ್‌ ಮಾಡಿದೆ. ಇತ್ತ ಅಮಿತ್‌ ಶಾ ಮೀಸಲಾತಿ ವಿಚಾರದಲ್ಲಿ ನಮಗೆ ಪ್ರಶ್ನೆ ಕೇಳುತ್ತಾರೆ. ನಿಮಗೇನಾದರೂ ಬದ್ಧತೆ ಇದೆಯಾ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದರು. ಬರೀ ಸುಳ್ಳಿ ಹೇಳಿಕೊಂಡು, ಮೋಸ ಮಾಡಿಕೊಂಡೇ ಕಾಲ ಕಳೆಯುತ್ತಿದ್ದೀರಿ. ವೀರಶೈರಿಗೆ 2ಡಿ ಮೀಸಲಾತಿ ಎಂದು ಮಾಡಿದಿರಿ. ಒಕ್ಕಲಿಗರಿಗೆ 2 ಪರ್ಸೆಂಟ್‌ ಮೀಸಲಾತಿ ಹೆಚ್ಚಳ ಎಂದು ಹೇಳಿದಿರಿ. ಆದ್ರೆ ಅವರು ಕೇಳಿದ್ದಿದ್ದು, ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಬೇಕು ಅಂತ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಒಕ್ಕಲಿಗರು, ಲಿಂಗಾಯತರು ಭಿಕ್ಷುಕರಾ..?, ಅವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೇಳ್ತಿದ್ದಾರೆ. ಮುಸ್ಲಿಮರ ಮೀಸಲಾತಿ ಕಿತ್ತುಹಾಕಿ ಈ ದೇಶದಿಂದ ಹೊರಗೆ ಕಳುಹಿಸೋಕೆ ಆಗುತ್ತಾ..? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ ಸರ್ವರಿಗೂ ಸಮಬಾಳು, ಸಮಪಾಲು ಉದ್ದೇಶ ಹೊಂದಿದೆ. ಇದಕ್ಕಾಗಿ ಐವತ್ತು ಪರ್ಸೆಂಟ್‌ ಮೀಸಲಾತಿ ಕ್ಯಾಪ್‌ ತೆಗೆಯೋಣ, ತಮಿಳುನಾಡಿನ ರೀತಿ ಮೀಸಲಾತಿಯನ್ನು ಹಂಚೋಣ ಎಂದು ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರ ಕಟ್ಟೋಗಿದೆ. ಒಡೆದುಹೋಗಿದೆ. ಮೀಸಲಾತಿ ವಿಚಾರದಲ್ಲಿ ಹಿಟ್‌ ವಿಕೆಟ್‌ ಮಾಡಿಕೊಂಡಿದೆ ಎಂದು ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದರು.

Share Post