ಶುರುವಾಯ್ತು ಪ್ರದೀಪ್ ಈಶ್ವರ್-ಸುಧಾಕರ್ ಯುದ್ಧ; ಟ್ರಿಮ್ ಆಗಿ ಅಖಾಡಕ್ಕೆ ರೆಡಿಯಾದ ಮಾಜಿ ಸಚಿವ
ಬೆಂಗಳೂರು; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ.. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸೋಲನುಭವಿಸಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.. ಸುಧಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಿಡಿದೆದ್ದಿದ್ದಾರೆ.. ಈ ಬಾರಿಯೂ ಸುಧಾಕರ್ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇವೆ ಎಂದು ಹೇಳುತ್ತಿದ್ದಾರೆ..
ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿನಾ, ನಿಖಿಲ್ ಕುಮಾರಸ್ವಾಮಿನಾ..?; ಸುಮಲತಾ ನಡೆ ಏನು..?
ಮೀಸೆ, ಗಡ್ಡ ಬೋಳಿಸಿಕೊಂಡು ಟ್ರಿಮ್ ಆದ ಸುಧಾಕರ್;
ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ವಿಧಾನಸಭಾ ಚುನಾವಣೆ ಸೋತ ಮೇಲೆ ಗಡ್ಡ ಬಿಟ್ಟಿದ್ದರು.. ಸೋತ ನಿರಾಸೆಯಲ್ಲಿದ್ದರು.. ಇದೀಗ ಅವರು ಹಿಂದಿನ ವೈಭಕ್ಕೆ ಮರಳಿದ್ದಾರೆ.. ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮೀಸೆ, ಗಡ್ಡ ಬೋಳಿಸಿಕೊಂಡು ಟ್ರಿಮ್ ಆಗಿದ್ದಾರೆ.. ಚುನಾವಣಾ ಅಖಾಡಕ್ಕೆ ಈಗಾಗಲೇ ತಂತ್ರಗಾರಿಕೆ ಶುರು ಮಾಡಿದ್ದಾರೆ.. ಮಾಜಿ ಸಿಎಂ ಕುಮಾರಸ್ವಾಮಿ, ದೇವೇಗೌಡರು, ಯಡಿಯೂರಪ್ಪ ಮುಂತಾದವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.. ಈ ಬಾರಿಯೂ ಅಬ್ಬರದ ಪ್ರಚಾರ ನಡೆಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ.. ಹೀಗಿರುವಾಗಲೇ ಶಾಸಕ ಪ್ರದೀಪ್ ಈಶ್ವರ್, ಗೆದ್ದು ತೋರಿಸಿ ನೋಡೋಣ ಎಂದು ಸುಧಾಕರ್‌ಗೆ ಸವಾಲು ಹಾಕೋಕೆ ಶುರು ಮಾಡಿದ್ದಾರೆ..
ಇದನ್ನೂ ಓದಿ; ವಿನಾಕಾರಣ ತಲೆನೋವು ಬರುತ್ತಿದೆಯೇ..?; ಮೆದುಳಲ್ಲಿ ರಕ್ತಸ್ರಾವಕ್ಕೆ ಕಾರಣಗಳೇನು..?
ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗ ಮಾಡಿ;
ಬೆಂಗಳೂರಿನಲ್ಲಿ ಮಾತನಾಡಿರುವ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ಅವರಿಗೆ ಸವಾಲು ಎಸೆದಿದ್ದಾರೆ.. ನಾನು ನನ್ನ ಇಡೀ ಕುಟುಂಬದ ಆಸ್ತಿ ವಿವರ, ಬ್ಯಾಂಕ್ ಖಾತೆ ವಿವರ ಸಲ್ಲಿಸುತ್ತೇನೆ.. ನೀವು, ನಿಮ್ಮ ಕುಟುಂಬದ ಬ್ಯಾಂಕ್ ಖ್ಯಾತೆಗಳ ವಿವರ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.. ಕೋವಿಡ್ ಸಂದರ್ಭದಲ್ಲಿ ಆದ ಅಕ್ರಮಗಳ ಬಗ್ಗೆ ತನಿಖೆ ನಡೆಯದಂತೆ ತಡೆಯಲು ಯಾರ ಯಾರ ಕಾಲು ಹಿಡಿದಿದ್ಧಾರೆ ಎಂಬುದು ನಮಗೆ ಗೊತ್ತಿದೆ ಎಂದು ಪ್ರದೀಪ್ ಈಶ್ವರ್ ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ; ಕಾಂಗ್ರೆಸ್ ಸಚಿವರಿಗೆ ಹೈಕಮಾಂಡ್ ಟಾರ್ಗೆಟ್; ಮಕ್ಕಳು, ಸಂಬಂಧಿಕರು ಸೋತರೆ ಅಷ್ಟೇ ಕತೆ!
ಸುಧಾಕರ್‌ಗೂ ನನಗೂ ನಾನ್ ಸ್ಟಾಪ್ ಯುದ್ಧ;
ಸುಧಾಕರ್ ನನಗೆ ಸುಮ್ಮನೆ ಟಾರ್ಚರ್ ಕೊಟ್ಟಿದ್ದಾರೆ.. ನನ್ನ ವಿರುದ್ಧ 22 ಕೇಸ್‌ಗಳನ್ನು ಹಾಕಿಸಿದ್ದರು.. ಜೈಲಿಗೆ ಕಳುಹಿಸಿದ್ದರು.. ಅದೇ ಜಿದ್ದಿನಿಂದ ಅವರ ವಿರುದ್ಧ ನಾನು ಸ್ಪರ್ಧೆ ಮಾಡಿ ಶಾಸಕನಾಗಿದ್ದೇನೆ.. ನಾನು ಸಾಮಾನ್ಯ ಶಾಸಕರಾಗಿ 10 ಆಂಬುಲೆನ್ಸ್‌ಗಳನ್ನು ಕ್ಷೇತ್ರದಲ್ಲಿ ಬಿಟ್ಟಿದ್ದೇನೆ.. ಸ್ವಂತ ಖರ್ಚಿನಲ್ಲಿ ಉಚಿತ ಅಂಬುಲೆನ್ಸ್ ಸೇವೆ ಒದಗಿಸುತ್ತಿದ್ದೇವೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಸುಧಾಕರ್ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ಬಿಜೆಪಿಯಲ್ಲಿನ ಹಲವರ ಹುದ್ದೆಗಳು ಇಲ್ಲದಂತೆ ಮಾಡುತ್ತಾರೆ.. ಹೀಗಾಗಿ ಅವರನ್ನು ಸಂಸತ್ ಮೆಟ್ಟಿಲು ಹತ್ತೋದಕ್ಕೆ ಬಿಡೋದಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; ಈಶ್ವರಪ್ಪರನ್ನು ಗೆಲ್ಲಿಸಿಬಿಡ್ತಾರಾ ಶಿವಮೊಗ್ಗದ ಜನ..?
ಮತ್ತೆ ಶುರುವಾಗುತ್ತಾ ವಾಗ್ಯುದ್ಧ?;
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರಪ್ಪ ಹಾಗೂ ಸುಧಾಕರ್ ನಡುವೆ ವಾಗ್ಯುದ್ಧಗಳೇ ನಡೆದಿದ್ದವು.. ಪ್ರದೀಪ್ ಈಶ್ವರ್ ಹಾಗೂ ಸುಧಾಕರ್ ಒಂದೇ ಗ್ರಾಮದವರು.. ಪೆರೇಸಂದ್ರದವರು.. ಒಟ್ಟೊಟ್ಟಿಗೆ ಬೆಳೆದವರು.. ಜೊತೆಜೊತೆಗೇ ಆಟವಾಡಿದವರು… ಈಗ ಇಬ್ಬರು ವೈರಿಗಳಾಗಿದ್ದಾರೆ… ವಾಕ್ಸಮರಗಳನ್ನು ನಡೆಸುತ್ತಿದ್ದಾರೆ.. ಕಳೆದ ಚುನಾವಣೆಯಲ್ಲಿ ನೇರಾನೇರ ವಾಗ್ಯುದ್ಧಗಳು ನಡೆದಿದ್ದವು.. ಇದೀಗ ಲೋಕಸಭಾ ಚುನಾವಣೆಯಲ್ಲೂ ಇದು ಮುಂದುವರೆಯುವ ಸಾಧ್ಯತೆ ಇದೆ..