ಮಂಡ್ಯಕ್ಕೆ ಕುಮಾರಸ್ವಾಮಿನಾ, ನಿಖಿಲ್ ಕುಮಾರಸ್ವಾಮಿನಾ..?; ಸುಮಲತಾ ನಡೆ ಏನು..?
ಬೆಂಗಳೂರು; ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಕುತೂಹಲ ಇನ್ನೂ ಮುಂದವರೆದೇ ಇದೆ.. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ..? ಹಾಲಿ ಸಂಸದೆ ಸುಮಲತಾ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಇನ್ನೂ ಸಸ್ಪೆನ್ಸ್ ಇದ್ದೇ ಇದೆ..
ಇದನ್ನೂ ಓದಿ; ವಿನಾಕಾರಣ ತಲೆನೋವು ಬರುತ್ತಿದೆಯೇ..?; ಮೆದುಳಲ್ಲಿ ರಕ್ತಸ್ರಾವಕ್ಕೆ ಕಾರಣಗಳೇನು..?
ಮಂಡ್ಯಕ್ಕೆ ಅಭ್ಯರ್ಥಿಯಾಗ್ತಾರಾ ಕುಮಾರಸ್ವಾಮಿ.?;
ಮಾಜಿ ಸಿಎಂ ಕುಮಾರಸ್ವಾಮಿಯವರು ಇನ್ನೂ ನಾಲ್ಕು ದಿನಗಳ ಹಿಂದಷ್ಟೇ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.. ಇನ್ನೂ ಅವರು ವಿಶ್ರಾಂತಿ ಪಡೆಯಬೇಕಾದ ಅವಶ್ಯಕತೆ ಇದೆ.. ಇದರ ನಡುವೆಯೇ ಲೋಕಸಭಾ ಚುನಾವಣೆ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.. ಹೀಗಿರುವಾಗಲೇ ಮಂಡ್ಯ ಕ್ಷೇತ್ರದ ಬಹುತೇಕ ಜೆಡಿಎಸ್ ನಾಯಕರು ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.. ಆದ್ರೆ, ಕುಮಾರಸ್ವಾಮಿಯವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.. ಒಂದು ಕಡೆ ಮಂಡ್ಯದವರು ನೀವು ಲೋಕಸಭೆಗೆ ಬನ್ನಿ ಎಂದು ಕರೆಯುತ್ತಿದ್ದರೆ, ಚನ್ನಪಟ್ಟಣದವರು ನೀವು ಕ್ಷೇತ್ರ ಬಿಟ್ಟುಹೋಗಬೇಡಿ ಎಂದು ಪಟ್ಟು ಹಿಡಿದಿದ್ದಾರೆ… ಹೀಗಾಗಿ ಯಾವ ತೀರ್ಮಾನ ಕೈಗೊಳ್ಳೋದು ಅನ್ನೋದು ಕುಮಾರಸ್ವಾಮಿಯವರಿಗೆ ಗೊತ್ತಾಗುತ್ತಿಲ್ಲ..
ಇದನ್ನೂ ಓದಿ; ಕಾಂಗ್ರೆಸ್ ಸಚಿವರಿಗೆ ಹೈಕಮಾಂಡ್ ಟಾರ್ಗೆಟ್; ಮಕ್ಕಳು, ಸಂಬಂಧಿಕರು ಸೋತರೆ ಅಷ್ಟೇ ಕತೆ!
ನಿಖಿಲ್ ಅವರನ್ನು ನಿಲ್ಲಿಸಿದರೆ ಸೋಲುವ ಭಯ;
ಮಂಡ್ಯದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ.. ಸ್ಟಾರ್ ಚಂದ್ರುಗೆ ಹಣ ಬಲ ಇದೆ, ಜೊತೆಗೆ ಜನಬಲವೂ ಇದೆ.. ಸ್ಟಾರ್ ಚಂದ್ರುರನ್ನು ಎದುರಿಸೋದಕ್ಕೆ ಪ್ರಬಲ ಅಭ್ಯರ್ಥಿಯೇ ಬೇಕು.. ಮೊದಲಿಗೆ ಪುಟ್ಟರಾಜು ಅವರನ್ನು ಕಣಕ್ಕಿಳಿಸೋದಕ್ಕೆ ನಿರ್ಧಾರ ಮಾಡಲಾಗಿತ್ತು.. ಅನಂತರ ನಿರ್ಧಾರವನ್ನು ತಡೆಹಿಡಿಯಲಾಗಿದೆ.. ಈಗ ನಿಖಿಲ್ ಕುಮಾರಸ್ವಾಮಿಯವರಾ ಅಥವಾ ಕುಮಾರಸ್ವಾಮಿಯವರಾ ಎಂಬ ಪ್ರಶ್ನೆ ಎದ್ದಿದೆ.. ಕುಮಾರಸ್ವಾಮಿಯವರಿಗೆ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.. ಜೊತೆಗೆ ಚನ್ನಪಟ್ಟಣ ಬಿಟ್ಟುಹೋಗೋದಕ್ಕೂ ಆಗೋದಿಲ್ಲ.. ಹಾಗಂತ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದರೆ ಸೋತುಬಿಟ್ಟಿರೆ ಮತ್ತೆ ಅವಮಾನವಾಗುತ್ತೆ ಎಂಬ ಭಯ.. ಹೀಗಾಗಿ, ಕುಮಾರಸ್ವಾಮಿಯವರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.. ಚನ್ನಪಟ್ಟಣದ ಜನರ ಜೊತೆ ಚರ್ಚೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; ಈಶ್ವರಪ್ಪರನ್ನು ಗೆಲ್ಲಿಸಿಬಿಡ್ತಾರಾ ಶಿವಮೊಗ್ಗದ ಜನ..?
ರಾಮನಗರ ಬಿಟ್ಟು ಹೋಗಲ್ಲ ಎಂದಿದ್ದ ಕುಮಾರಸ್ವಾಮಿ;
ಕುಮಾರಸ್ವಾಮಿಯವರು ಈ ಹಿಂದೆ ಹಲವಾರು ಬಾರಿ ನಾನು ರಾಮನಗರವನ್ನು ಬಿಟ್ಟು ಹೋಗಲ್ಲ ಎಂದು ಹೇಳಿದ್ದರು.. ನನ್ನ ಕರ್ಮಭೂಮಿ ರಾಮನಗರ.. ಇಲ್ಲಿ ಬಿಟ್ಟು ಎಲ್ಲೂ ರಾಜಕೀಯ ಮಾಡೋದಿಲ್ಲ ಎಂದು ಹೇಳಿದ್ದರು.. ಆದ್ರೆ ಈಗ ಮಂಡ್ಯದ ಜನ ಮಂಡ್ಯಕ್ಕೆ ಬರುವಂತೆ ಕೇಳುತ್ತಿದ್ದಾರೆ.. ಚನ್ನಪಟ್ಟಣದ ಜನ ಮಂಡ್ಯಕ್ಕೆ ಹೋಗೋದು ಬೇಡ ಎನ್ನುತ್ತಿದ್ದಾರೆ.. ಹೀಗಾಗಿ ಕುಮಾರಸ್ವಾಮಿಯವರು ಯಾವ ನಿರ್ಧಾರ ತೆಗೆದುಕೊಳ್ಳುವುದೋ ಗೊತ್ತಾಗುತ್ತಿಲ್ಲ.. ಒಂದು ಕಡೆ ನಿಖಿಲ್ ಕುಮಾರಸ್ವಾಮಿ ಕೂಡಾ ಈಗಾಗಲೇ ಹಲವು ಬಾರಿ ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದೇ ಹೇಳುತ್ತಾ ಬಂದಿದ್ದಾರೆ.. ಹೀಗಾಗಿ ಯಾರಿಗೆ ಮಂಡ್ಯ ಟಿಕೆಟ್ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ..
ಇದನ್ನೂ ಓದಿ; ಗಾಲಿ ಜನಾರ್ದನರೆಡ್ಡಿ ಬಿಜೆಪಿ ಸೇರ್ಪಡೆ; ಬಳ್ಳಾರಿ ಪ್ರವೇಶಕ್ಕೆ ಅವಕಾಶ ಸಿಗುತ್ತಾ..?
ನಾಳೆ ನಿರ್ಧಾರ ಪ್ರಕಟ ಮಾಡಲಿರುವ ಕುಮಾರಸ್ವಾಮಿ;
ಚನ್ನಪಟ್ಟಣ ಹಾಗೂ ಮಂಡ್ಯದ ಜನರ ಜೊತೆ ಚರ್ಚೆ ಮಾಡಿದ ನಂತರ ನಾಳೆ ನಿರ್ಧಾರ ಪ್ರಕಟಿಸೋದಕ್ಕೆ ಕುಮಾರಸ್ವಾಮಿ ತೀರ್ಮಾನ ಮಾಡಿದ್ದಾರೆ.. ಇಂದು ಚೆನ್ನಪಟ್ಟಣದ ಮುಖಂಡರ ಜೊತೆ ಅವರು ಚರ್ಚೆ ಮಾಡಲಿದ್ದಾರೆ.. ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಕೂಡಾ ಬೇಡ ಎಂದರೆ ಪುಟ್ಟರಾಜು ಅವರನ್ನೇ ಅಖಾಡಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಕುಮಾರಸ್ವಾಮಿಯವರು ಮಂಡ್ಯಕ್ಕೆ ಹೋದರೆ ಚೆನ್ನಪಟ್ಟಣಕ್ಕೆ ನಡೆಯುವ ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕಿಳಿಸಲಾಗುತ್ತೆ ಅನ್ನೋ ವಿಚಾರವೂ ಮುನ್ನೆಲೆಗೆ ಬರಲಿದೆ..
ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಡಾ.ಕೆ.ಸುಧಾಕರ್ ಪಸ್ಲ್ ಏನು..? ಮೈನಸ್ ಏನು..?
ಸುಮಲತಾ ಅವರ ನಡೆಯೇ ಇನ್ನೂ ನಿಗೂಢ;
ಕೊನೆಯ ತನಕವೂ ಮಂಡ್ಯದಿಂದ ನನಗೇ ಟಿಕೆಟ್ ಸಿಗುತ್ತೆ ಎಂದು ಹೇಳುತ್ತಿದ್ದ ಸಂಸದೆ ಸುಮಲತಾ ಅವರಿಗೆ ನಿರಾಸೆಯಾಗಿದೆ.. ಆದ್ರೆ ಅವರ ಮುಂದಿನ ನಡೆ ಏನು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ.. ಅವರೂ ಕೂಡಾ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಲು ಮುಂದಾಗಿದ್ದಾರೆ.. ಸಭೆಯ ನಂತರ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸುತ್ತಾರಾ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರಾ, ಕಾಂಗ್ರೆಸ್‌ಗೆ ಸಪೋರ್ಟ್ ಮಾಡುತ್ತಾರಾ ಅಥವಾ ತಟಸ್ಥವಾಗಿ ಉಳಿದುಬಿಡುತ್ತಾರಾ ಅನ್ನೋದರ ಬಗ್ಗೆ ಇನ್ನೂ ಕುತೂಹಲ ಇದೆ..