Shoebill Bird; ಡೈನೋಸಾರ್ನಂತೆ ಕಾಣುತ್ತೆ; ಮೊಸಳೆಯನ್ನೇ ತಿನ್ನುತ್ತೆ ಪಕ್ಷಿ..!
ಉದ್ದನೆಯ ಮೂತಿ.. ಭಯ ಹುಟ್ಟಿಸೋ ಕಣ್ಣುಗಳು.. ಕತ್ತು ತಿರುಗಿಸೋ ಸ್ಟೈಲು.. ಜೊತೆಗೆ ವಿಚಿತ್ರ ಶಬ್ದ.. ಇದನ್ನು ನೋಡಿದರೆ ಡೈನೋಸಾರ್ ಮರಿಯಂತೆ ಕಾಣುತ್ತೆ.. ಡೈನೋಸಾರ್ಗಗಳು ಮತ್ತೆ ಹುಟ್ಟಿಬಂದವಾ ಅನ್ನೋ ಅನುಮಾನ ಮೂಡುತ್ತೆ.. ಆದರೆ ಇದು ಡೈನೋಸಾರ್ನಂತೆಯೇ ಕಾಣುವ ಹಕ್ಕಿ..! ಇದರ ಹೆಸರು ಶೋಬಿಲ್.. ಪ್ಯೂರ್ ಮಾಂಸಾಹಾರಿ.. ಅದರಲ್ಲೂ ಮೊಸಳೆ ಮಾಂಸ ಸಿಕ್ಕರೆ ಇದಕ್ಕೆ ಹಬ್ಬದೂಟ..! (shoebill bird)
ಇದನ್ನೂ ಓದಿ; Seahorse; ಗಂಡಿಗೆ ಹೆರುವುದೇ ಕೆಲಸ; ಇದು ಪುರುಷ ಕಡಲ್ಗುದುರೆಯ ಪ್ರಸವ ವೇದನೆ ಕತೆ..!
ನೋಡೋಕೆ ಡೈನೋಸಾರ್ನಂತಿರುವ ಹಕ್ಕಿ!
ಸೂಡಾನ್, ರವಾಂಡಾ, ಉಗಾಂಡಾ, ತಾಂಜೇನಿಯಾ ಮುಂತಾದ ಕಡೆ ಈ ಶೋಬಿಲ್ ಹಕ್ಕಿ ಕಾಣಿಸುತ್ತೆ.. ಜಾತಿಯಲ್ಲಿ ಇದು ಪಕ್ಷಿಯೇ ಆದರೂ ವನ್ಯಮೃಗಗಳಿಗೆ ಕಡಿಮೆ ಏನಲ್ಲ. ಒಂಟಿಯಾನೇ ಬೇಟೆಗೆ ಇಳಿಯೋ ಶೋಬಿಲ್, ತನ್ನ ಉದ್ದ, ವಿಶಾಲ ಹಾಗೂ ಗಟ್ಟಿ ಇರುವ ಕೊಕ್ಕಿನಿಂದ ಮೊಸಳೆ ಮರಿಗಳನ್ನೇ ಸಾಯಿಸುತ್ತೆ.
ಮೊಸಳೆ ಮರಿಗಳನ್ನೇ ತಿಂದು ತೇಗುತ್ತೆ ಈ ಹಕ್ಕಿ!
ಚಾನ್ಸ್ ಸಿಕ್ಕರೆ ನಾಲ್ಕಾರು ಮೊಸಳೆ ಮರಿಗಳನ್ನು ತಿಂದು ತೇಗುತ್ತೆ. ಹುಲ್ಲು ಕೂಡಾ ತಿನ್ನುತ್ತೆ ಅಂತ ಕೆಲವರು ಹೇಳ್ತಾರಾದರೂ ನೋಡಿದವರು ಯಾರೂ ಇಲ್ಲ. ಎಲ್ಲರಿಗೂ ಗೊತ್ತಿರುವ ಪ್ರಕಾರ ಶೋಬಿಲ್ ಹಕ್ಕಿಗೆ ಮೊಸಳೆ ಅಂದ್ರೆ ಪಂಚಪ್ರಾಣ. ಅದು ಬಿಟ್ಟರೆ ದೊಡ್ಡ ಹಲ್ಲಿಗಳು, ಕಪ್ಪೆಗಳು, ಲಂಗ್ಫಿಶ್, ಕ್ಯಾಟ್ಫಿಶ್ ಹಾಗೂ ನೀರಾವುಗಳನ್ನು ಬೇಟೆಯಾಡುತ್ತದೆ.
ಇದನ್ನೂ ಓದಿ;Tattoo Aftercare; ಟ್ಯಾಟೂ ಹಾಕಿಸಿಕೊಂಡ ಮೇಲೆ ಈ ಜಾಗ್ರತೆ ಇರಲೇಬೇಕು!
ಒಂಟಿ ಜೀವನ ಅಂದ್ರೇನೆ ಈ ಹಕ್ಕಿಗೆ ಇಷ್ಟ!
ಇದು 1.5 ಮೀಟರ್ನಷ್ಟು ಎತ್ತರ ಬೆಳೆಯುತ್ತೆ. ಇದರ ರೆಕ್ಕೆಗಳ ಅಗಲ 2 ಮೀಟರ್, ಕಾಲುಗಳು ಉದ್ದ ಇರುತ್ತೆ.. ನೋಡೋದಕ್ಕೆ ಡೈನೋಸಾರ್ನಂತೆಯೇ ಕಾಣೋದ್ರಿಂದ ಇದನ್ನು ಡೈನೋಸಾರ್ ಹಕ್ಕಿ ಅಂತಾನೂ ಕೆಲವರು ಕರೆಯುತ್ತಾರೆ. ಆಫ್ರಿಕಾದ ಬೇರೆ ಬೇರೆ ಭಾಗಗಳಲ್ಲಿ ಈ ಹಕ್ಕಿ ಕಂಡು ಬಂದರೂ ಇದರ ಸಂತತಿ ಹೆಚ್ಚೇನೂ ಇಲ್ಲ. 2012ರ ಅಂಕಿ-ಅಂಶಗಳ ಪ್ರಕಾರ ಇವುಗಳ ಸಂಖ್ಯೆ ಕೇವಲ 3300 ರಿಂದ 5300. ಒಂಟಿ ಒಂಟಿಯಾಗೇ ಜೀವಿಸುವುದರಿಂದ ಮನುಷ್ಯ ಸೇರಿ ಹಲವು ಪ್ರಾಣಿಗಳಿಗೆ ಇವು ಆಹುತಿಯಾಗುತ್ತವೆ.
ಇದನ್ನೂ ಓದಿ; Kere Tonnur; ತೊಣ್ಣೂರು ಕೆರೆಯಲ್ಲಿ ಈಜಾಡಿ ಮಜಾಮಾಡಿ, ನಂಬಿನಾರಾಯಣನ ದರ್ಶನ ಮಾಡಿ..
ನೀರಿನ ಬಳಿಯೇ ಇದ್ದು ಬೇಟೆಯಾಡುವ ಹಕ್ಕಿ!
ಶೋಬಿಲ್ ಹಕ್ಕಿಗಳು ಹೆಚ್ಚಾಗಿ ಕಡಿಮೆ ಆಮ್ಲಜನಕವಿರುವ ನೀರಿನ ಹತ್ತಿರವೇ ಹೆಚ್ಚಾಗಿ ಬಿಡಾರ ಹೂಡಿರುತ್ತವೆ. ಯಾಕಂದ್ರೆ, ಆಮ್ಲಜನಕ ಕಡಿಮೆ ಇರುವ ಕಾರಣ ದೊಡ್ಡ ದೊಡ್ಡ ಮೀನುಗಳು ನೀರಿನ ಮೇಲ್ಬಾಗಕ್ಕೆ ಬರುತ್ತವೆ. ಆಗ ಮೀನುಗಳನ್ನು ಬೇಟೆಯಾಡಲು ಸುಲಭವಾಗುತ್ತದೆ. ಇದೇ ಕಾರಣಕ್ಕೆ ಶೋಬಿಲ್ಗಳು ಕಡಿಮೆ ಆಮ್ಲಜನಕವಿರುವ ನೀರಿನ ಬಳಿ ಒಂಟಿಯಾಗಿ ಹೊಂಚುಹಾಕಿ ಕುಳಿತಿರುತ್ತವೆ. ಇನ್ನು ಮರಿ ಶೋಬಿಲ್ಳಿಗೆ ಹಸಿವಾದರೆ ಅವು ಮನುಷ್ಯನ ರೀತಿಯಲ್ಲಿ ಬಿಕ್ಕಳಿಸುತ್ತವೆ. ಅದನ್ನು ಅರ್ಥ ಮಾಡಿಕೊಳ್ಳುವ ತಾಯಿ ಶೋಬಲ್ ಅಹಾರವನ್ನು ಹೊಂಚಿಕೊಂಡು ಹೋಗಿ ಮರಿಗಳಿಗೆ ತಿನ್ನಿಸುತ್ತದೆ.