Ghee Health Benefits; ತುಪ್ಪವನ್ನು ಹೀಗೆ ತಿಂದರೆ ನಿಮ್ಮ ಕಾಯಿಲೆಗಳೆಲ್ಲಾ ಮಾಯ!
ಜನರು ಈಗ ಆರೋಗ್ಯದ (health) ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಕಾರಣ ಕಾಯಿಲೆಗಳು ಹೆಚ್ಚಾಗುತ್ತಿರುವುದು. ಹೀಗಾಗಿ, ಆಹಾರ ಕ್ರಮ ಕೂಡಾ ಜನ ಬದಲಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕೆಲವು ಆಹಾರಗಳ ಬಗ್ಗೆ ಹಲವಾರು ಜನರಿಗೆ ಸರಿಯಾದ ಮಾಹಿತಿಯೇ ಇರುವುದಿಲ್ಲ. ವಿನಾಕರಣ, ದೇಹಕ್ಕೆ ಒಳ್ಳೆಯದು ಮಾಡುವ ಆಹಾರಗಳನ್ನು ಕೂಡಾ ಜನರು ದೂರವಿಡುತ್ತಾರೆ… ಅದ್ರಲ್ಲಿ ತುಪ್ಪ (Ghee) ಕೂಡಾ ಒಂದು.. ತುಪ್ಪು ತಿಂದರೆ ದಪ್ಪ ಆಗಿಬಿಡುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ. ಆದ್ರೆ ತುಪ್ಪದಿಂದ ಸಾಕಷ್ಟು ಉಪಯೋಗಗಳಿವೆ. ತಜ್ಞರು ಹೇಳುವ ಪ್ರಕಾರ ತುಪ್ಪವನ್ನು ಸರಿಯಾದ ರೀತಿಯಲ್ಲಿ ನಿಯಮಿತವಾಗಿ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾನೇ ಉಪಯೋಗವಂತೆ. ಬೆಚ್ಚಗಿನ ನೀರಿಗೆ ಕಾಸ್ಟಾ ತುಪ್ಪವನ್ನು ಬೆರೆಸಿ ಸೇವಿಸಿದರೆ ತುಂಬಾ ಒಳ್ಳೆಯದು. ಇದರಿಂದ ಮಲಬದ್ಧತೆ, ಮೂಳೆ ನೋವು, ಹೊಳೆಯುವ ತ್ವಚೆ, ಕೂದಲಿನ ಸಮಸ್ಯೆಯಂತಹ ಹಲವು ಸಮಸ್ಯೆಗಳು ದೂರವಾಗುತ್ತವೆ. ಹಾಗಾದರೆ ತುಪ್ಪ ಸೇವಿಸುವುದರಿಂದ ಏನೆಲ್ಲಾ ಉಪಯೋಗವಾಗಲಿದೆ ನೋಡೋಣ ಬನ್ನಿ..
ಇದನ್ನೂ ಓದಿ; Dry Fruits; ಖಾಲಿ ಹೊಟ್ಟೆಯಲ್ಲಿ ಈ ಒಣಹಣ್ಣುಗಳನ್ನು ತಿನ್ನಲೇಬಾರದು..!
ತುಪ್ಪ ಸೇವಿಸಿದರೆ ಅಜೀರ್ವ ಸಮಸ್ಯೆ ದೂರ;
ತುಪ್ಪ ಸೇವಿಸಿದರೆ ಅಜೀರ್ವ ಸಮಸ್ಯೆ ದೂರ; ತುಪ್ಪದಲ್ಲಿ ಕೊಬ್ಬಿನಾಮ್ಲಗಳು ಹೆಚ್ಚಿರುತ್ತವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಾಕಷ್ಟು ಸುಧಾರಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಮತ್ತು ಅಜೀರ್ಣ ಸಮಸ್ಯೆ ನಿವಾರಿಸುತ್ತದೆ. ಹೀಗಾಗಿ ನಿಯಮಿತವಾಗಿ ತುಪ್ಪ ಸೇವನೆ ಮಾಡೋದು ಒಳ್ಳೆಯದು.
ಕೀಲು ನೋವಿಗೆ ತುಪ್ಪ ರಾಮಬಾಣ:
ಕೀಲು ನೋವಿಗೆ ತುಪ್ಪ ರಾಮಬಾಣ; ತುಪ್ಪ ತಿನ್ನುವುದರಿಂದ ಕೀಲುಗಳು ಆರೋಗ್ಯಕರವಾಗಿರುತ್ತವೆ. ಕೆಲವರಿಗೆ ಕೈಕಾಲು ಹಾಗೂ ಕೀಲು ನೋವು ಹೆಚ್ಚಾಗಿ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು. ಪರಿಣಾಮವಾಗಿ, ಕೀಲಿನಲ್ಲಿ ಸರಾಗ ಚಲನೆಗೆ ಸಾಕಷ್ಟು ದ್ರವವಿರುವುದಿಲ್ಲ. ಇದರಿಂದ ಕೀಲು ನೋವು ಉಂಟಾಗುತ್ತದೆ. ಆದರೆ, ತುಪ್ಪವನ್ನು ತೆಗೆದುಕೊಳ್ಳುವುದರಿಂದ ಕೀಲುಗಳಲ್ಲಿ ಲೂಬ್ರಿಕೇಶನ್ ಹೆಚ್ಚಾಗುತ್ತದೆ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ.
ತುಪ್ಪ ತಿಂದರೆ ತೂಕ ಹೆಚ್ಚುತ್ತದೆಯೇ..?;
ತುಪ್ಪ ತಿಂದರೆ ತೂಕ ಹೆಚ್ಚುತ್ತದೆಯೇ..?; ತುಪ್ಪದಲ್ಲಿ ಕೊಬ್ಬಿನಂಶ ಹೆಚ್ಚಿರುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುತ್ತದೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದ್ರೆ ಇದು ತಪ್ಪು ಅಭಿಪ್ರಾಯ ತುಪ್ಪ ತಿನ್ನುವುದರಿಂದ ಯಾವುದೇ ಕಾರಣಕ್ಕೂ ತೂಕ ಹೆಚ್ಚಾಗುವುದಿಲ್ಲ. ತೂಕ ಸಮತೋಲನದಲ್ಲಿಡಲು ತುಪ್ಪು ಸಹಾಯಕವಾಗುತ್ತದೆ.
ಮಲಬದ್ಧತೆ ನಿವಾರಣೆ ಮಾಡುವ ತುಪ್ಪ;
ಮಲಬದ್ಧತೆ ನಿವಾರಣೆ ಮಾಡುವ ತುಪ್ಪ; ತುಪ್ಪದಲ್ಲಿರುವ ಉತ್ತಮ ಕೊಬ್ಬು ಜೀರ್ಣವ್ಯವಸ್ಥೆ ಸರಾಗವಾಗಿಸುತ್ತದೆ. ಅನೇಕ ಜನರಿಗೆ ಕರುಳಿನ ಸಮಸ್ಯೆಗಳಿವೆ. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ತುಪ್ಪ ಬೆರೆಸಿ ಸೇವಿಸಿದರೆ ಈ ಸಮಸ್ಯೆ ದೂರವಾಗುತ್ತದೆ.
ಇದನ್ನೂ ಓದಿ; Breathing; ನೀವು ಸರಿಯಾಗಿ ಉಸಿರಾಡುತ್ತಿದ್ದೀರಾ..? ಮೂಗಿನಿಂದಲೇ ಯಾಕೆ ಉಸಿರಾಡಬೇಕು..?
ತೂಕ ಇಳಿಸಲು ಕೂಡಾ ಇದು ಸಹಕಾರಿ;
ತೂಕ ಇಳಿಸಲು ಕೂಡಾ ಇದು ಸಹಕಾರಿ; ಬೆಚ್ಚನೆಯ ನೀರಿಗೆ ತುಪ್ಪ ಬೆರೆಸಿ ಮುಂಜಾನೆ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಈ ಕಾರಣದಿಂದಾಗಿ, ತೂಕವನ್ನು ಕಾಪಾಡಿಕೊಳ್ಳಬಹುದು. ಏಕೆಂದರೆ ತುಪ್ಪ ಹಸಿವನ್ನು ಹೆಚ್ಚಿಸುವುದಿಲ್ಲ. ತುಪ್ಪ ತಿಂದ ಮೇಲೆ ಹಸಿವು ಕಡಿಮೆ ಆಗುತ್ತದೆ. ಇದರಿಂದ ಹೆಚ್ಚು ಆಹಾರ ಸೇವಿಸುವುದನ್ನು ಕಡಿಮೆ ಮಾಡುತ್ತೇವೆ. ಇದರಿಂದ ತೂಕ ಕಡಿಮೆಯಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ;
ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ; ಅದೇ ರೀತಿ ಸಕ್ಕರೆ ಕಾಯಿಲೆ ಇರುವವರಿಗೆ ತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಸಕ್ಕರೆಯ ಮಟ್ಟ ತಿಂದ ತಕ್ಷಣ ಏರುತ್ತದೆ. ಹೀಗಾಗಿ ತುಪ್ಪ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
ಇದನ್ನೂ ಓದಿ; Crying; ಮನುಷ್ಯ ವಾರಕ್ಕೊಮ್ಮೆ ಅಳಬೇಕಂತೆ; ಅಳೋದೂ ಒಂದು ಆರೋಗ್ಯ ಸೂತ್ರ!
ಸೌಂದರ್ಯವೂ ವೃದ್ಧಿಯಾಗುತ್ತದೆ;
ಸೌಂದರ್ಯವೂ ವೃದ್ಧಿಯಾಗುತ್ತದೆ; ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಮ್ಲಗಳಿವೆ. ಇವುಗಳು ನಮ್ಮ ತ್ವಚೆ ಮತ್ತು ಮುಖಕ್ಕೆ ತುಂಬಾ ಒಳ್ಳೆಯದು. ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ತುಪ್ಪವನ್ನು ಬೆರೆಸಿ ಮತ್ತು ಮಿತವಾಗಿ ತೆಗೆದುಕೊಳ್ಳಿ. ಇದರಿಂದ ಹಲವಾರು ಪ್ರಯೋಜನಗಳಿವೆ.