ರಾಜ್ಯಸಭೆಗೆ ನಾಮ ನಿರ್ದೇಶನಗೊಂಡು ಇನ್ಫೋಸಿಸ್ನ ಸುಧಾಮೂರ್ತಿ
ನವದೆಹಲಿ; ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿಯವರಿಗೆ ಮಹಿಳಾ ದಿನಾಚರಣೆಯ ಗಿಫ್ಟ್ ಸಿಕ್ಕಿದೆ. ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಮಾಡಿದ್ದಾರೆ.. ಟ್ವೀಟ್ ಮಾಡಿರುವ ಮೋದಿಯವರು ಸುಧಾಮೂರ್ತಿಯವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಅವರಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ;Crime Stories; ಬಾಗಲಕೋಟೆಯಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಕುಣಿಗಲ್ನಲ್ಲಿ ಸ್ವಾಮೀಜಿ ಅರೆಸ್ಟ್
ಮೋದಿ ಟ್ವೀಟ್ನಲ್ಲಿ ಏನಿದೆ..?;
ಮೋದಿ ಟ್ವೀಟ್ನಲ್ಲಿ ಏನಿದೆ..?; ಭಾರತದ ರಾಷ್ಟ್ರಪತಿಯವರು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಈ ವಿಷಯ ನನಗೆ ತುಂಬಾ ಸಂತೋಷ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಧಾ ಮೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದ್ದು, ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದಕ್ಕೆ ಸಂಸತ ತಂದಿದೆ. ಅವರಿಗೆ ಶುಭಾಶಯ ಕೋರುತ್ತೇನೆ.
ರಾಜ್ಯಸಭೆಯಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಪ್ರಬಲವಾದ ಸಾಕ್ಷಿಯಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸುಧಾಮೂರ್ತಿಯವರಿಗೆ ಹಾರೈಸಿದ್ದಾರೆ.
ಇದನ್ನೂ ಓದಿ; ಲೋಕಸಭಾ ರೇಸ್ನಿಂದ ಹಿಂದೆ ಸರಿದ್ರಾ ಯತೀಂದ್ರ ಸಿದ್ದರಾಮಯ್ಯ?; ಕಾರಣ ಏನು ಗೊತ್ತಾ..?
ಮೋದಿ ಟ್ವೀಟ್ನ ಯಥಾವತ್ ಸರಾಂಶ;
I am delighted that the President of India has nominated @SmtSudhaMurty Ji to the Rajya Sabha. Sudha Ji’s contributions to diverse fields including social work, philanthropy and education have been immense and inspiring. Her presence in the Rajya Sabha is a powerful testament to our ‘Nari Shakti’, exemplifying the strength and potential of women in shaping our nation’s destiny. Wishing her a fruitful Parliamentary tenure.
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸುಧಾಮೂರ್ತಿ;
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸುಧಾಮೂರ್ತಿ; ಇನ್ಫೋಸಿಸ್ ಫೌಂಡೇಷನ್ ಮೂಲಕ ಸುಧಾಮೂರ್ತಿಯವರು ಅನೇಕ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವಾರು ರೀತಿಯಲ್ಲಿ ಸಮಾಜಕ್ಕೆ ನೆರವಾಗುತ್ತಾ ಬಂದಿದ್ಧಾರೆ. ಸರಳ ಜೀವನ ನಡೆಸುತ್ತಿರುವ ಅವರು ಅನೇಕರಿಗೆ ಮಾದರಿಯೂ ಆಗಿದ್ದಾರೆ. ಹಲವು ಪುಸ್ತಕಗಳನ್ನು ಕೂಡಾ ಸೂಧಾಮೂರ್ತಿಯವರು ಬರೆದಿದ್ದಾರೆ. ಸಜ್ಜನರಾಗಿರುವ ಸುಧಾಮೂರ್ತಿಯವರು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರ ನಡೆ, ನುಡಿ, ಸರಳತೆಯನ್ನು ಮೆಚ್ಚುವವರು ಕೋಟ್ಯಂತರ ಜನ ಇದ್ದಾರೆ. ಇಂತಹವರು ರಾಜ್ಯಸಭೆಗೆ ನಾಮನಿರ್ದೇಶನವಾಗಿರುವುದು ಒಳ್ಳೆಯ ಬೆಳವಣಿಗೆ.
ಇದನ್ನೂ ಓದಿ; ನದಿಯಾಳದಲ್ಲಿ ಓಡಲಿದೆ ಮೆಟ್ರೋ ರೈಲು; ಪ್ರಧಾನಿ ಮೋದಿ ಉದ್ಘಾಟನೆ!
ಮಹಿಳಾ ದಿನದಂದೇ ಸುಧಾ ಮೂರ್ತಿ ಸ್ಥಾನ;
ಮಹಿಳಾ ದಿನದಂದೇ ಸುಧಾ ಮೂರ್ತಿ ಸ್ಥಾನ; ಮಹಿಳಾ ದಿನಾಚರಣೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯದ ಸಾಧನೆಯನ್ನು ಗುರುತಿಸಲು ಮತ್ತು ಸಮಾನತೆಗಳನ್ನು ಪ್ರತಿಪಾದಿಸಲು ಆಚರಿಸಲಾಗುವ ವಿಶೇಷ ದಿನವಾಗಿದೆ. ಈ ದಿನದಂದೇ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.
ಇದನ್ನೂ ಓದಿ; Health tips; ಸ್ವೀಟ್ಸ್ ಅಂದ್ರೆ ನಿಮಗೆ ಇಷ್ಟಾನಾ..?; ಹೀಗೆ ತಿನ್ನಿ ಏನೂ ಆಗಲ್ಲ!