ಸಚಿವ ಅಶ್ವತ್ಥನಾರಾಯಣ ವಿರುದ್ಧ ಸದನದಲ್ಲೂ ಬುಗಿಲೆದ್ದ ಆಕ್ರೋಶ
ಬೆಂಗಳೂರು; ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಟಿಪ್ಪು ಹೊಡೆದುಹಾಕಿದಂತೆ ಹೊಡೆದಾಕಬೇಕು ಎಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ರಾಜ್ಯದ್ಯಾಂತ ಆಕ್ರೋಶ ಬುಗಿಲೆದ್ದಿದೆ. ಸದನದಲ್ಲೂ ಕಾಂಗ್ರೆಸ್ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಸಚಿವ ಅಶ್ವತ್ಥ ನಾರಾಯಣ ವಿರುದ್ದ ಕಾಂಗ್ರೇಸ್ ಶಾಸಕರು ಇಂದು ಸದನದಲ್ಲಿ ಬಾವಿಗಿಳಿದು ಆಕ್ರೋಶ ವ್ಯಕ್ತ ಪಡಿಸಿದರು. ಸದನದಲ್ಲಿ ಪ್ರಸ್ತಾಪಿಸಿದ ಮಾಜಿ ಸಚಿವ ಯುಟಿ ಖಾದರ್ ಸಚಿವರ ಹೇಳಿಕೆಯನ್ನ ಖಂಡಿಸಿದರು. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ ನನ್ನ ಹೇಳಿಕೆಯಿಂದ ಸಿದ್ದರಾಮಯ್ಯರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ನನ್ನ ಉದ್ದೇಶ ಕಾಂಗ್ರೇಸ್ ನ್ನ ಚುನಾವಣೆಯಲ್ಲಿ ಸೋಲಿಸಿ ಎಂಬುದಾಗಿತ್ತು ಅಷ್ಟೇ. ನನ್ನ ಹೇಳಿಕೆಯನ್ನ ರಾಜಕೀಯ ಚೌಕಟ್ಟಿನಲ್ಲಿ ನೋಡಬೇಕು ಎಂದರು.
ಸಚಿವ ಅಶ್ವತ್ಥ ನಾರಾಯಣ ಮಾತನಾಡುತ್ತಿದ್ದ ವೇಳೆ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಸೇರಿದಂತೆ ಹಲವರು ಸದನದ ಭಾವಿಗಿಳಿದು ಆಕ್ರೋಶ ವ್ಯಕ್ತ ಪಡಿಸಿದ್ರು. ಕಾಂಗ್ರೇಸ್ ಶಾಸಕರ ಆಕ್ರೋಶದಿಂದ ಕೆರಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಶ್ವರ್ ಖಂಡ್ರೆ ವಿರುದ್ದ ಹರಿಹಾಯ್ದರು. ಸದನದಲ್ಲಿ ಕೋಲಾಹಲ ಬುಗಿಲೆದ್ದ ಹಿನ್ನೆಲೆ ಕಲಾಪವನ್ನ 15 ನಿಮಿಷ ಮುಂದೂಡಲಾಯಿತು.