Mandya; ಮಂಡ್ಯ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಫೈನಲ್; ಸುಮಲತಾ ನಿರ್ಧಾರ ಏನು..?
ಬೆಂಗಳೂರು; ರಾಜ್ಯದಲ್ಲಿ ಈ ಬಾರಿಯೂ ಕುತೂಹಲ ಮೂಡಿಸಿರುವಂತಹ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ.. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಅವರು, ಈ ಬಾರಿ ಬಿಜೆಪಿ ಟಿಕೆಟ್ ಬಯಸಿದ್ದರು.. ಆದ್ರೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರೋದು ಬಹುತೇಕ ಕನ್ಫರ್ಮ್ ಆಗಿದೆ.. ಈ ಬೆನ್ನಲ್ಲೇ ಜೆಡಿಎಸ್ ನಾಯಕರು ಮೈತ್ರಿ ಅಭ್ಯರ್ಥಿಯನ್ನು ಆಯ್ಕೆ ಕೂಡಾ ಮಾಡಿಬಿಟ್ಟಿದ್ದಾರೆ.. ಹೀಗಾಗಿ, ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ;Chikkaballapura; ಶಾಸಕ ಪ್ರದೀಪ್ ಈಶ್ವರ್ ಲೂಸ್ ಟಾಕ್; ಡಾ.ಕೆ.ಸುಧಾಕರ್‌ಗೆ ಇದೇ ಶ್ರೀರಕ್ಷೆ..?
ಮೈತ್ರಿ ಅಭ್ಯರ್ಥಿ ಫೈನಲ್ ಮಾಡಿರುವ ಕುಮಾರಸ್ವಾಮಿ;
ಮೈತ್ರಿ ಅಭ್ಯರ್ಥಿ ಫೈನಲ್ ಮಾಡಿರುವ ಕುಮಾರಸ್ವಾಮಿ; ಮಾಜಿ ಸಿಎಂ ಕುಮಾರಸ್ವಾಮಿಯವರು ಇಂದು ಮಂಡ್ಯದ ಜೆಡಿಎಸ್ ನಾಯಕರನ್ನು ಆಹ್ವಾನಿಸಿದ್ದರು.. ಅವರ ಜೆಪಿ ನಗರದ ಮನೆಯಲ್ಲಿ ಬಿರುಸಿನ ಮಾತುಕತೆ ನಡೆಯಿತು.. ಈ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು.. ಈ ವೇಳೆ ಮಾಜಿ ಸಚಿವ ಪುಟ್ಟರಾಜು ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ಟಿಕೆಟ್ ಬೇಟೆಯಲ್ಲಿ ʻಸಿಂಹʼ ಫೇಲ್; ಹೊರಬಿತ್ತು ಅಸಹನೆಯ ʻಪ್ರತಾಪʼ
ಮಂಡ್ಯ ಅಭ್ಯರ್ಥಿ ವಿಚಾರದಲ್ಲಿ ಗೊಂದಲಕ್ಕೆ ಬ್ರೇಕ್;
ಮಂಡ್ಯ ಅಭ್ಯರ್ಥಿ ವಿಚಾರದಲ್ಲಿ ಗೊಂದಲಕ್ಕೆ ಬ್ರೇಕ್; ಮಂಡ್ಯದಲ್ಲಿ ಪುಟ್ಟರಾಜು ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಾಯಕರು ತೀರ್ಮಾನ ಮಾಡಿದ್ದರು.. ಆದ್ರೆ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಮುಂತಾದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಡಿ.ಸಿ.ತಮ್ಮಣ್ಣ ಕೂಡಾ ಪುಟ್ಟರಾಜುಗೆ ಟಿಕೆಟ್ ಬೇಡ ಎಂದಿದ್ದರು.. ಆದ್ರೆ ಜೆಡಿಎಸ್ ನಾಯಕರು ಎಲ್ಲರ ಮುನಿಸನ್ನೂ ಶಮನ ಮಾಡಿದ್ದಾರೆ. ಪುಟ್ಟರಾಜು ಅವರ ಸ್ಪರ್ಧೆಗೆ ಈಗ ಎಲ್ಲರಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ತಿಳಿದುಬಂದಿದೆ. ಬಿಜೆಪಿ ಎರಡನೇ ಪಟ್ಟಿ ತಯಾರು ಮಾಡುತ್ತಿದ್ದು, ಇದೇ ವೇಳೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನೂ ರಿಲೀಸ್ ಮಾಡುವ ಸಾಧ್ಯತೆ ಇದೆ.
ಕುಮಾರಸ್ವಾಮಿಯೇ ನಿಲ್ಲಬೇಕಾಗಿತ್ತು;
ಕುಮಾರಸ್ವಾಮಿಯೇ ನಿಲ್ಲಬೇಕಾಗಿತ್ತು; ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡುತ್ತಾರೆ.. ಅವರು ಅಲ್ಲಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈಗ ಪುಟ್ಟರಾಜು ಅವರಿಗೆ ಮಣೆ ಹಾಕಲಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪುಟ್ಟರಾಜು ಸ್ಪರ್ಧೆ ಮಾಡೋದು ಬಹುತೇಕ ಪಕ್ಕಾ ಆಗಿದೆ. ಈ ಹಿಂದೆ ನಡೆದ ಉಪಚುನಾವಣೆಯೊಂದರಲ್ಲಿ ಪುಟ್ಟರಾಜು ಸಂಸದರಾಗಿ ಆಯ್ಜೆಯಾಗಿದ್ದರು. ಇದೀಗ ಮತ್ತೆ ಅವರಿಗೆ ಸಂಸದರಾಗುವ ಅವಕಾಶ ಸಿಗುತ್ತಿದೆ.
ಇದನ್ನೂ ಓದಿ; ಬೆಂಗ್ಳೂರಲ್ಲಿ ಪ್ರಭಾಸ್-ಅಲ್ಲು ಅರ್ಜುನ್ ಫ್ಯಾನ್ಸ್ ಕಿತ್ತಾಟ; ಓರ್ವನಿಗೆ ಹಿಗ್ಗಾಮುಗ್ಗಾ ಥಳಿತ!
ಸುಮಲತಾ ಅಂಬರೀಶ್ ಅವರ ನಿಲುವೇನು..?;
ಸುಮಲತಾ ಅಂಬರೀಶ್ ಅವರ ನಿಲುವೇನು..?; ಸದ್ಯಕ್ಕೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಸಿ.ಎಸ್.ಪುಟ್ಟರಾಜು ಅಭ್ಯರ್ಥಿಯಾಗೋದು ಪಕ್ಕಾ ಆಗಿದೆ.. ಹೀಗಾಗಿ ಬಿಜೆಪಿ ಟಿಕೆಟ್ ಬಯಸಿದ್ದ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗೋದು ಪಕ್ಕಾ. ಏನೇ ಆಗಲೀ ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ.. ಮಂಡ್ಯ ಬಿಟ್ಟು ಬೇರೆಲ್ಲೂ ನಾನು ರಾಜಕೀಯ ಮಾಡುವುದಿಲ್ಲ ಎಂದು ಸುಮಲತಾ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಈ ಬಾರಿಯೂ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಅಥವಾ ಮೈತ್ರಿ ಅಭ್ಯರ್ಥಿಗೆ ಸಪೋರ್ಟ್ ಮಾಡುತ್ತಾರಾ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ; ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್!