Politics

ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್‌!

ಬೆಂಗಳೂರು; ಯದುವೀರ್‌ ಕೃಷ್ಣದತ್ತ ಒಡೆಯರ್‌.. ಈಗ ಅತಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರು.. ಯಾಕಂದ್ರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಯದುವೀರ್‌ ಬಿಜೆಪಿ ಅಭ್ಯರ್ಥಿಯಾಗೋದು ಬಹುತೇಕ ಫಿಕ್ಸ್‌.. ರಾಜಕೀಯ ನಮಗೆ ಬೇಡವೇ ಬೇಡ ಎನ್ನುತ್ತಿದ್ದ ಯದುವೀರ್‌, ಪತ್ನಿ ತ್ರಿಷಿಕಾ ಕುಮಾರಿ ತಂದೆ ಹರ್ಷವರ್ದನ್‌ ಕರೆಗೆ ಓಗೊಟ್ಟಿದ್ದಾರೆ ಎನ್ನಲಾಗ್ತಿದೆ.. ಇತ್ತ ಹಾಲಿ ಸಂಸದ ಪ್ರತಾಪ ಸಿಂಹ ಕೂಡಾ ಭಾನುವಾರ ಸಂಜೆಯಿಂದ ಅಪ್‌ಸೆಟ್‌ ಆಗಿರೋದು ಕೂಡಾ ಯದುವೀರ್‌ಗೆ ಟಿಕೆಟ್‌ ಕನ್ಫರ್ಮ್‌ ಆಗಿರಬಹುದು ಎಂಬ ಸಂದೇಹ ಉಂಟುಮಾಡುತ್ತಿದೆ.. ಈ ನಡುವೆ, ಯದುವೀರ್‌ ಟೆಂಪಲ್‌ ರನ್‌ ಶುರು ಮಾಡಿದ್ದಾರೆ.. ಇದೂ ಕೂಡಾ ಎಲ್ಲೋ ಯದುವೀರ್‌ ಚುನಾವಣೆಗೆ ರೆಡಿಯಾಗುತ್ತಿದ್ದಂತೆ ಕಾಣುತ್ತಿದೆ..

ಇದನ್ನೂ ಓದಿ;ಇಂದೇ ಬಿಜೆಪಿ ಎರಡನೇ ಪಟ್ಟಿ ರಿಲೀಸ್‌; ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌!

ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದ ಯದುವೀರ್‌;

ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದ ಯದುವೀರ್‌; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಯದುವೀರ್‌ ಒಪ್ಪಿದ್ದಾರೆ ಎಂಬ ಸುದ್ದಿಗಳು ಹೊರಬರುತ್ತಿವೆ… ಈ ಬೆನ್ನಲ್ಲೇ ಯದುವೀರ್‌ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದಾರೆ… ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಯದುವೀರ್‌ ಅವರು, ಅಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ಇದೇ ವೇಳೆ ಕಿರಿಯ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಬಂದಿದ್ದಾರೆ.. ಯದುವೀರ್‌ ಅವರು ಆಗಾ ಶೃಂಗೇರಿಗೆ ಭೇಟಿ ನೀಡುತ್ತಾರಾದರೂ, ಚುನಾವಣೆ ಸಮಯದಲ್ಲಿ, ಅದರಲ್ಲೂ ಅವರಿಗೆ ಟಿಕೆಟ್‌ ಸಿಗುತ್ತಿದೆ ಎಂಬ ಸುದ್ದಿಗಳು ಬರುತ್ತಿರುವ ಸಂದರ್ಭದಲ್ಲಿ ಶೃಂಗೇರಿಗೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ; ಮೈಸೂರಿಗೆ ʻಯಧುವೀರಾʼಧಿ ವೀರ; ಟಿಕೆಟ್‌ ಬೇಟೆಯ ಹೋಪ್‌ ಕಳೆದುಕೊಳ್ತಾ ʻಸಿಂಹʼ?

ಶೃಂಗೇರಿ ಮಠಕ್ಕೂ, ಮೈಸೂರು ಸಂಸ್ಥಾನಕ್ಕೂ ಸಂಬಂಧ;

ಶೃಂಗೇರಿ ಮಠಕ್ಕೂ, ಮೈಸೂರು ಸಂಸ್ಥಾನಕ್ಕೂ ಸಂಬಂಧ; ಶೃಂಗೇರಿ ಮಠಕ್ಕೂ ಮೈಸೂರು ಸಂಸ್ಥಾನಕ್ಕೂ ಮೊದಲಿನಿಂದಲೂ ಸಂಬಂಧವಿದೆ.. ಶೃಂಗೇರಿ ಮಠಕ್ಕೆ ಮೈಸೂರು ಸಂಸ್ಥಾನದವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ… ಮೈಸೂರು ಸಂಸ್ಥಾನಕ್ಕೆ ಶೃಂಗೇರಿ ಶ್ರೀಮಠಕ್ಕೆ ಮೊದಲಿನಿಂದಲೂ ನಡೆದುಕೊಳ್ಳುತ್ತಾರೆ… ಆಗಾಗ ಮೈಸೂರು ಸಂಸ್ಥಾನದವರು ಮಠಕ್ಕೆ ಬೇಟಿ ನೀಡುತ್ತಿರುತ್ತಾರೆ. ಮಠದ ಕಾರದ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.. ಯದುವೀರ್‌ ಅವರು ಪಟ್ಟ ಅಲಂಕರಿಸಿದ ಮೇಲೂ ಹಲವು ಬಾರಿ ಶೃಂಗೇರಿಗೆ ಭೇಟಿ ನೀಡಿದ್ದಾರೆ.. ಆದರೂ ಕೂಡಾ ಈಗಿನ ದಿಢೀರ್‌ ಭೇಟಿ ಬಗ್ಗೆಯಂತೂ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಯದುವೀರ್‌ ಚುನಾವಣೆಗೆ ರೆಡಿಯಾಗುತ್ತಿದ್ದಾರೆ ಎಂದೇ ಹಲವರು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ;ಪುನೀತ್‌ ರಾಜ್‌ಕುಮಾರ್‌ ನೆನೆದು ಕಣ್ಣೀರು ಹಾಕಿದ ಸದ್ಗುರು ಜಗ್ಗಿ ವಾಸುದೇವ್‌!

ರಾಜಸ್ಥಾನದಿಂದ ಯದುವೀರ್‌ ಮನವೊಲಿಕೆ;

ರಾಜಸ್ಥಾನದಿಂದ ಯದುವೀರ್‌ ಮನವೊಲಿಕೆ; ಯದುವೀರ್‌ ಪತ್ನಿ ತ್ರಿಷಿಕಾ ಕುಮಾರಿ ಅವರು ರಾಜಸ್ಥಾನದ ಡುಂಗರ್‌ಪುರ್‌ ರಾಜ ವಂಶಸ್ಥರು… ತ್ರಿಷಿಕಾ ಕುಮಾರಿ ತಂದೆ ಹರ್ಷವರ್ದನ್‌ ಸಿಂಗ್‌ ಅವರು ಬಿಜೆಪಿ ಬೆಂಬಲದೊಂದಿಗೆ ಈ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು… ರಾಜಕೀಯ ಎಂದರೆ ಬೇಡ ಎನ್ನುತ್ತಿದ್ದ ಯದುವೀರ್‌ ಅವರ ಮನವೊಲಿಸಿದ್ದು ಇದೇ ಹರ್ಷವರ್ದನ್‌ ಸಿಂಗ್‌ ಎಂದು ಹೇಳಲಾಗುತ್ತಿದೆ… ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಏನಾದರೂ ಮಾಡಿ ಬಿಜೆಪಿಯನ್ನು ಬಲಪಡಿಸಬೇಕು.. ಹಳೇ ಮೈಸೂರು ಭಾಗದಲ್ಲಿ ಒಬ್ಬ ಪ್ರಬಲ ನಾಯಕನನ್ನು ಹುಟ್ಟುಹಾಕಬೇಕು ಎಂದು ಬಿಜೆಪಿ ಹೈಕಮಾಂಡ್‌ ತೀರ್ಮಾನಿಸಿಬಿಟ್ಟಂತೆ ಕಾಣುತ್ತಿದೆ.. ಹೀಗಾಗಿ, ಯದುವೀರ್‌ ಅವರನ್ನು ರಾಜಕೀಯಕ್ಕೆ ಕರೆತಂದು ಅವರನ್ನು ಬಳಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸಲು ಹೊರಟಿದೆ.. ಆದ್ರೆ, ಮೊದಲಿಗೆ ಯದಿವೀರ್‌ ರಾಜಕೀಯಕ್ಕೆ ಬರಲು ಒಪ್ಪಿರಲಿಲ್ಲ.. ಆದ್ರೆ ರಾಜಸ್ಥಾನದಿಂದ ತ್ರಿಷಿಕಾ ಕುಮಾರಿಯವರ ತಂದೆ ಮೂಲಕ ಹೇಳಿಸಿದ್ದರಿಂದ ಯದುವೀರ್‌ ರಾಜಕೀಯಕ್ಕೆ ಬರೋದಕ್ಕೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ;ಶಂಕಿತ ಉಗ್ರ ಸಮುದ್ರ ಮಾರ್ಗದ ಮೂಲಕ ಪರಾರಿಗೆ ಸ್ಕೆಚ್‌; ಹೈ ಅಲರ್ಟ್‌

ಪ್ರತಾಪ ಸಿಂಹಗೆ ಬೇರೆ ಕ್ಷೇತ್ರ ಕೊಡುತ್ತಾರಾ..?;

ಪ್ರತಾಪ ಸಿಂಹಗೆ ಬೇರೆ ಕ್ಷೇತ್ರ ಕೊಡುತ್ತಾರಾ..?; ಹಾಲಿ ಸಂಸದ ಪ್ರತಾಪ ಸಿಂಹಗೆ ಇದರಿಂದ ನಿರಾಸೆಯಾಗಿರುವುದಂತೂ ಸತ್ಯ.. ಅವರು ಎರಡು ಬಾರಿ ಸಂಸದರಾಗಿ ಹಲವಾರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.. ಬಿಡುವಿಲ್ಲದೆ ಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದಾರೆ.. ಹೀಗಿದ್ದರೂ ಮೈಸೂರು-ಕೊಡಗು ಕ್ಷೇತ್ರದಿಂದ ಟಿಕೆಟ್‌ ಕೈತಪ್ಪುವ ಎಲ್ಲಾ ಸಾಧ್ಯತೆಯೂ ಕಾಣಿಸುತ್ತಿದೆ.. ಇನ್ನೊಂದೆಡೆ ಉತ್ತಮ ಕೆಲಸ ಮಾಡುವ ಪ್ರತಾಪ ಸಿಂಹಗೆ ಉಡುಪಿ-ಚಿಕ್ಕಮಗಳೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ನೀಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ;ರಾಜಕೀಯ ನಿವೃತ್ತಿ ಮಾತನ್ನಾಡಿದ ಸಿಎಂ ಸಿದ್ದರಾಮಯ್ಯ

 

Share Post