ಜನ ಒಂದು ಸಂದೇಶ ಕೊಟ್ಟಿದ್ದಾರೆ, ಅರ್ಥಮಾಡಿಕೊಂಡು ತಿದ್ದಿಕೊಳ್ತೇವೆ ಎಂದ ಡಿಕೆಶಿ
ಬೆಂಗಳೂರು; ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಫಲಿತಾಂಶದಿಂದ ಜನ ಸಂದೇಶ ನೀಡಿದ್ದಾರೆ. ನಾನು ಅರ್ಥ ಮಾಡಿಕೊಳ್ಳುತ್ತೇನೆ. ನಾವು ಏನನ್ನು ತಿದ್ದಿಕೊಳ್ಳಬೇಕೋ ತಿಳಿದುಕೊಂಡು ಆಗಿರುವ ತಪ್ಪನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನರ ತೀರ್ಪನ್ನು ನಾನು ಸ್ವಾಗತ ಮಾಡುತ್ತೇನೆ. ಅವರ ತೀರ್ಪಿಗೆ ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ..
ಅಧಿಕಾರಕ್ಕಿಂತ ವಿಶ್ವಾಸ ರಾಜಕೀಯ ಮುಖ್ಯ. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್ ಗೆದ್ದಿದ್ದಾರೆ.. ಅವರನ್ನು ನಾನು ಅಭಿನಂದಿಸುತ್ತೇನೆ.. ಅಲ್ಲಿ ಪಕ್ಷ ಗೆದ್ದಿಲ್ಲ.. ವ್ಯಕ್ತಿ ಗೆದ್ದಿದ್ದಾರೆ.. ಆದ್ರೆ ಇಷ್ಟು ಅಂತರದಿಂದ ಸೋಲ್ತೇವೆ ಎಂದು ಅಂದುಕೊಂಡಿರಲಿಲ್ಲ.. ಸುರೇಶ್ ಅವರು ಒಳ್ಳೆಯ ಕೆಲಸ ಮಾಡಿದ್ದರು.. ಅವರ ಕೆಲಸಗಳನ್ನು ನೋಡಿ ಜನ ಮತ ಹಾಕುತ್ತಾರೆ ಎಂದುಕೊಂಡಿದ್ದೆವು.. ಆದ್ರೆ ಭಾರಿ ಅಂತರದಲ್ಲಿ ಸೋತಿದ್ದೇವೆ.. ನಮ್ಮಿಂದ ಏನಾಗಿದೆ ಎಂದು ನೋಡುತ್ತೇವೆ.. ತಪ್ಪಾಗಿರುವುದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ..
ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ನಿರೀಕ್ಷೆಯನ್ನು ಮಾಡಿದ್ದೆವು.. ಆದ್ರೆ ಸಾಧ್ಯವಾಗಿಲ್ಲ.. ಪ್ರಜ್ಞಾವಂತ ಮತದಾರರಿದ್ದಾರೆ. ಅವರ ಪ್ರಜ್ಞಾವಂತಿಕೆ ಪರಿಶೀಲನೆ ಮಾಡಲು ಹೋಗುವುದಿಲ್ಲ.. ಎಲ್ಲೆಲ್ಲಿ ಹೆಚ್ಚು ಕಡಿಮೆಯಾಗಿದೆ ಪರಿಶೀಲನೆ ಮಾಡಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದೂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ..