BengaluruPolitics

ವಿಐಪಿಗಳ ಆತಿಥ್ಯಕ್ಕೆ 260 ಕೋಟಿ ರೂ. ಖರ್ಚು; ಬಿಜೆಪಿ ಸರ್ಕಾರದ ವಿರುದ್ಧ ಜೆಡಿಎಸ್‌ ಕಿಡಿ

ಬೆಂಗಳೂರು; ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದ್ದು, ಈ ಮೂರು ವರ್ಷಗಳಲ್ಲಿ ವಿಐಪಿ ಅತಿಥಿಗಳ ಆತಿಥ್ಯಕ್ಕೆ 260 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಜಾತ್ಯತೀತ ಜನತಾದಳ ಆರೋಪ ಮಾಡಿದೆ. ಈ ಬಗ್ಗೆ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ ಮಾಡಲಾಗಿದೆ. ಯೋಜನೆಗಳ ಹಣ ನೀಡೋದಕ್ಕಾಗಿ ಸರ್ಕಾರದ ಬಳಿ ಹಣ ಇಲ್ಲ. ಪಡಿತರ ಅಕ್ಕಿಯನ್ನೂ ಕಡಿತ ಮಾಡಲಾಗಿದೆ. ಆದ್ರೆ, ವಿಐಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಜೆಡಿಎಸ್‌ ಆರೋಪಿಸಿದೆ.
ಟ್ವೀಟ್‌-೧;
@BJP4Karnataka  ಸರ್ಕಾರ 3 ವರ್ಷಗಳ ಅವಧಿಯಲ್ಲಿ VIP ಅತಿಥಿಗಳ ಆತಿಥ್ಯಕ್ಕಾಗಿ 260 ಕೋಟಿ ರೂ. ಖರ್ಚು ಮಾಡಿದೆ. ಹೀಗೆ ಖರ್ಚು ಮಾಡಲಾಗಿರುವ ಈ ದುಡ್ಡು ನಾಡಿನ ಜನರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಣ. ಈ VIP ಅತಿಥಿಗಳಿಂದ ನಾಡಿಗೆ 1 ರುಪಾಯಿಯ ಲಾಭವೂ ಆಗಿಲ್ಲ.  #Lotus_Loot_Us
ಟ್ವೀಟ್‌-೨;
ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಕಬಳಿಸಲು ಅಥವಾ ನಾಡನ್ನು ಒಡೆಯಲು ಇವರ VIP ಗಳು ರಾಜ್ಯಕ್ಕೆ ಬರುತ್ತಾರೆ. ‘ಉಂಡೂ ಹೋದ ಕೊಂಡೂ ಹೋದ’ ಎಂಬ ಪರಿಸ್ಥಿತಿ ನಮ್ಮ ನಾಡಿನದ್ದು. ಚುನಾವಣೆ ವೇಳೆ ಪ್ರತ್ಯಕ್ಷರಾಗುವ ಇಂತಹ VIPಗಳಿಗೆ ಈ ದುಂದುವೆಚ್ಚ ಯಾಕೆ?
ಟ್ವೀಟ್‌-೩;
ಯೋಜನೆಗಳಿಗೆ ನೀಡಲು @BJP4Karnataka ಸರ್ಕಾರದ ಬಳಿ ಹಣವಿಲ್ಲ. ಪಡಿತರ ಯೋಜನೆಯಲ್ಲಿ ನೀಡುತ್ತಿದ್ದ ಅಕ್ಕಿಯನ್ನೂ ಸರ್ಕಾರ ಕಡಿತ ಮಾಡಿದೆ. ಜನರಿಗೆ ತಿನ್ನಲು ಅನ್ನ ನೀಡದ ಸರ್ಕಾರ VIPಗಳ ಮುಡಿಗೆ ಮಲ್ಲಿಗೆ ಹೂವು ಮುಡಿಸಿದೆ.
Share Post