Politics

Loksabha; ಕಾಂಗ್ರೆಸ್ 2ನೇ ಪಟ್ಟಿ ರಿಲೀಸ್; ಅಚ್ಚರಿ ವ್ಯಕ್ತಿಗಳಿಗೆ ಟಿಕೆಟ್

ನವದೆಹಲಿ; ಕಾಂಗ್ರೆಸ್ ಪಾರ್ಟಿ ಲೋಕಸಭಾ ಚನಾವಣೆಗೆ ತನ್ನ ಎರಡನೇ ಪಟ್ಟಿ ರಿಲೀಸ್ ಮಾಡಿದೆ. ಇದರಲ್ಲಿ 4 ರಾಜ್ಯಗಳ 43 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಹೆಸರಿಲ್ಲ.

 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್  ದೆಹಲಿಯಲ್ಲಿ ಎರಡನೇ ಪಟ್ಟಿ ರಿಲೀಸ್ ಮಾಡಿದ್ದಾರೆ. ಗುಜರಾತ್, ರಾಜಸ್ಥಾನ, ಅಸ್ಸಾಂ ಹಾಗು ಮಧ್ಯಪ್ರದೇಶದ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಮೊದಲ ಪಟ್ಟಿಯಲ್ಲಿ 39 ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗಿತ್ತು. ಎರಡನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ.

ಮಾಜಿ ಸಿಎಂಗಳ ಪುತ್ರರಿಗೆ ಟಿಕೆಟ್ ಘೋಷಣೆ;

 ಈ ಪಟ್ಟಿಯಲ್ಲಿ ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ಮಗ ನಕುಲ್ ಗೆ ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ರಾಜಸ್ಥಾನದ ಜಾಲೋರ್‌ನಿಂದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಮಾರ್ಚ್ 15ಕ್ಕೆ 3ನೇ ಪಟ್ಟಿ ರಿಲೀಸ್;

 ಮಾರ್ಚ್ 8 ರಂದು 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿತ್ತು. ಮಾರ್ಚ್ 15 ರಂದು ಕಾಂಗ್ರೆಸ್‌ ಮೂರನೇ ಸುತ್ತಿನ ಸಭೆ ನಡೆಸಲಿದ್ದು, ಅಂದು ಕರ್ನಾಟಕದ ಉಳಿದ 21 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆಗಲಿದೆ.

Share Post