Politics

ಯತೀಂದ್ರ ಸಿದ್ದರಾಮಯ್ಯಗೆ ಘೇರಾವ್‌; ಗ್ರಾಮಕ್ಕೆ ಬಿಡದೆ ಎಳೆದಾಡಿದ ಜನ!

ಮೈಸೂರು; ಸಿಎಂ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ವಕ್ಷೇತ್ರದಲ್ಲೇ ಕಹಿ ಅನುಭವವಾಗಿದೆ.. ತಮ್ಮ ಗ್ರಾಮಕ್ಕೆ ಬರಬೇಡಿ ಎಂದು ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮುದ್ದುಬೀರನಹುಂಡಿಯ ಜನ ಘೇರಾವ್‌ ಹಾಕಿದ ಪ್ರಸಂಗ ಕೂಡಾ ಇದೆ.. ಇದರಿಂದಾಗಿ ಸಿಎಂ ಪುತ್ರ ಯತೀಂದ್ರ ಅವರು ತೀವ್ರ ಮುಜುಗರಕ್ಕೊಳಗಾಗಿದ್ದಾರೆ.

ಇದನ್ನೂ ಓದಿ; ಬಿಜೆಪಿ ಪರ ರೀಲ್ಸ್‌ ಮಾಡಿ; ಮೋದಿ ಭೇಟಿಗೆ ಅವಕಾಶ ಪಡೆಯಿರಿ – ಬಿಜೆಪಿಯ ಹೊಸ ಕ್ಯಾಂಪೇನ್‌

ಅಭಿವೃದ್ಧಿ ಕಾರ್ಯ ಕುಂಠಿತವಾಗಿರುವುದಕ್ಕೆ ಆಕ್ರೋಶ;

ಅಭಿವೃದ್ಧಿ ಕಾರ್ಯ ಕುಂಠಿತವಾಗಿರುವುದಕ್ಕೆ ಆಕ್ರೋಶ; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಗ್ರಾಮಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ತಿಳಿದುಕೊಳ್ಳಲು ಸಭೆಗಳನ್ನು ನಡೆಸುತ್ತಿದ್ದಾರೆ.. ಅದೇ ರೀತಿ ಇಂದು ಮುದ್ದುಬೀರನಹುಂಡಿಯಲ್ಲಿ ಕುಂದು-ಕೊರತೆಗಳ ವಿಚಾರವಾಗಿ ಸಭೆ ಆಯೋಜಿಸಲಾಗಿತ್ತು.. ಇದಕ್ಕಾಗಿ ಎಲ್ಲಾ ಸಿದ್ಧತೆಗಳೂ ಆಗಿದ್ದವು. ಆದ್ರೆ ಗ್ರಾಮಸ್ಥರು ಯತೀಂದ್ರ ಸಿದ್ದರಾಮಯ್ಯ ಅವರನ್ನು ತಡೆದಿದ್ದು, ಘೇರಾವ್‌ ಹಾಕಿದ್ದಾರೆ. ತಾವು ಯಾವುದೇ ಕಾರಣಕ್ಕೂ ತಮ್ಮ ಗ್ರಾಮದೊಳಗೆ ಕಾಲಿಡಬಾರದು. ನೀವು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ;Health Benefits; ದಿನಾ ಹೀಗೆ ಮಾಡಿ, ಯಾವ ರೋಗವೂ ನಿಮ್ಮ ಹತ್ತಿರ ಬರೋಲ್ಲ..!

ಯತೀಂದ್ರ ಸಿದ್ದರಾಮಯ್ಯರನ್ನು ಎಳೆದಾಡಿದ ಗ್ರಾಮಸ್ಥರು;

ಯತೀಂದ್ರ ಸಿದ್ದರಾಮಯ್ಯರನ್ನು ಎಳೆದಾಡಿದ ಗ್ರಾಮಸ್ಥರು; ಗ್ರಾಮಸ್ಥರು ತಡೆದಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನ ಹೇಳಿದರೂ ಗ್ರಾಮಸ್ಥರು ಸುಮ್ಮನಾಗಲಿಲ್ಲ.. ಇದರಿಂದಾಗಿ ವಾಗ್ವಾದಗಳು ನಡೆದವು.. ಇದೇ ವೇಳೆ ಗ್ರಾಮಸ್ಥರು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ತಳ್ಳಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ;LPG ಸಿಲಿಂಡರ್‌ 100 ರೂಪಾಯಿ ಕಡಿತ; ರಾಜ್ಯದಲ್ಲಿ 805 ರೂಪಾಯಿಗೆ ಸಿಗಲಿದೆ ಸಿಲಿಂಡರ್‌

ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡಿರುವ ಯತೀಂದ್ರ;

ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡಿರುವ ಯತೀಂದ್ರ; ಸಿದ್ದರಾಮಯ್ಯ ಅವರಿಗಾಗಿ ಮಗ ಯತೀಂದ್ರ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಿದ್ದರು.. ವರುಣಾ ಕ್ಷೇತ್ರದಿಂದ ಕಳೆದ ಬಾರಿ ಶಾಸಕರಾಗಿದ್ದ ಯತೀಂದ್ರ ಅವರು, ಈ ಬಾರಿ ಅಪ್ಪನಿಗೆ ಕ್ಷೇತ್ರ ಬಿಟ್ಟುಕೊಟ್ಟು ಈಗ ಅವರು ವರುಣಾ ಕ್ಷೇತ್ರದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.. ಕೆಲ ತಿಂಗಳ ಹಿಂದೆ ಯತೀಂದ್ರ ಅವರನ್ನೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು.. ಆದ್ರೆ ಇತ್ತೀಚೆಗೆ ಈ ರೇಸ್‌ನಲ್ಲಿ ಅವರ ಹೆಸರೇ ಚಾಲ್ತಿಗೆ ಬರುತ್ತಿಲ್ಲ… ಹೀಗಿರುವಾಗಲೇ ಯತೀಂದ್ರ ಅವರು ವರುಣಾ ಕ್ಷೇತ್ರದಲ್ಲಿ ಕುಂದುಕೊರತೆ ಸಭೆಗಳನ್ನು ಶುರು ಮಾಡಿದ್ದಾರೆ.

ಇದನ್ನೂ ಓದಿ; ಬಳ್ಳಾರಿ ಜೈಲಿನಲ್ಲಿದ್ದು ಸ್ಫೋಟಕ್ಕೆ ಸ್ಕೆಚ್‌?; ಓರ್ವ ಶಂಕಿತನ ವಿಚಾರಣೆ!

Share Post