ಬೆಂಗಳೂರಿನಲ್ಲಿ ಜೀವಜಲಕ್ಕಾಗಿ ಸಂಕಷ್ಟ; ಇಂದಿನಿಂದ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ!
ಬೆಂಗಳೂರು; ಬೆಂಗಳೂರೆಂಬ ಮಹಾನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.. ಸುಮಾರು ಏಳು ಸಾವಿರ ಬೋರ್ವೆಲ್ಗಳು ಬತ್ತಿಹೋಗಿವೆ.. ಬೇಸಿಗೆ ಶುರುವಿನಲ್ಲೇ ಜನರು ನೀರಿಗಾಗಿ ಪರದಾಡುತ್ತಿದ್ದಾರೆ.. ಮುಂದೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಎಲ್ಲಾ ಲಕ್ಷಣಗಳೂ ಇವೆ.. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬಳಕೆ ಮಾಡುವವರ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.. ಇಂದಿನಿಂದ ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಪ್ರದೇಶಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಏರಿಯೇಟರ್ ಅಳವಡಿಕೆ ಕಾರ್ಯ ಶುರು ಮಾಡಿದೆ..
ಇದನ್ನೂ ಓದಿ; Fastag ಕೂಡಾ ಬಂದ್ ಆಗುತ್ತೆ; ಬರಲಿದೆ ಜಿಪಿಎಸ್ ತಂತ್ರಜ್ಞಾನ!
ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಿರುವ ನೀರು ಸರಬರಾಜು ಮಂಡಳಿ;
ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೊರೆಂಟ್ಗಳು, ಐಷಾರಾಮಿ ಹೋಟೆಲ್ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ನೀರು ಪೋಲಾಗುವುದನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬುಧವಾರನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಿದೆ.. ಜೊತೆಗೆ ಮಾರ್ಚ್ 31ಕ್ಕೆ ಗಡುವು ಕೂಡಾ ನೀಡಿದೆ. ಇಂದಿನಿಂದ ಅಳವಡಿಕೆ ಶುರು ಮಾಡಲಾಗಿದ್ದು, ಇದರಿಂದ ಭಾರಿ ಪ್ರಮಾಣದ ನೀರು ವೇಸ್ಟ್ ಆಗುವುದನ್ನು ತಡೆಯಬಹುದು ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ ತಪ್ಪಿಸಲು ಈ ಆಹಾರಗಳು ಸೇವಿಸಿ
ಏನಕ್ಕಾಗಿ ಈ ಏರಿಯೇಟರ್ ಅಳವಡಿಕೆ ಮಾಡಲಾಗುತ್ತದೆ..?
ಏರಿಯೇಟರ್ ಎಂದರೆ ಅದು ನಲ್ಲಿಗಳಿಗೆ ಅಳವಡಿಸುವಂತಹ ಸಾಧನ.. ಇದು ನೀರು ಹೆಚ್ಚಾಗಿ ಹರಿಯುವುದನ್ನು ತಡೆಯುತ್ತದೆ.. ಇದರಿಂದಾಗಿ ನೀರಿನ ಬಳಕೆಯನ್ನು ನಾವು ಕಡಿಮೆ ಮಾಡಬಹುದಾಗಿದೆ.. ಈ ಏರಿಯೇಟರ್ ಅಳವಡಿಕೆಯಿಂದ ಶೇಕಡಾ 65 ರಿಂದ 85ರಷ್ಟು ನೀರನ್ನು ಉಳಿಸಬಹುದಾಗಿದೆ.. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಏರಿಯೇಟರ್ಗಳನ್ನು ಅಳವಡಿಸಿ ನೀರು ಪೋಲಾಗುವುದನ್ನು ತಡೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ; ಸದ್ಗುರು ಜಗ್ಗಿ ವಾಸುದೇವ್ ಮೆದುಳಲ್ಲಿ ರಕ್ತಸ್ರಾವ; ಶಸ್ತ್ರ ಚಿಕಿತ್ಸೆ
ಕಾರುಗಳನ್ನು ತೊಳೆಯಲು ನೀರು ಪೋಲು ಮಾಡುವ ಜನ;
ಪೂಲ್ ಡ್ಯಾನ್ಸ್ ಮತ್ತು ರೈನ್ ಡ್ಯಾನ್ಸ್ ಮತ್ತಿತರ ಚಟುವಟಿಕೆಗಳಿಗೂ ಜನ ನೀರು ಹೆಚ್ಚು ಪೋಲು ಮಾಡುತ್ತಿದ್ದರು.. ಇದಕ್ಕೆ ನಿಷೇಧ ಹೇರಲಾಗಿದೆ.. ಇನ್ನು ಕಾರುಗಳನ್ನು ತೊಳೆಯುವುದು, ನಿರ್ಮಾಣ ಕಾರ್ಯಗಳು, ತೋಟಗಾರಿಕೆ, ಕಾರಂಜಿಗಳು ಮುಂತಾದವುಗಳಿಗೆ ಕೂಡಾ ಕುಡಿಯಲು ಯೋಗ್ಯವಾದ ನೀರನ್ನೇ ಬಳಸಲಾಗುತ್ತಿದೆ.. ಇದರಿಂದಾಗಿಯೂ ಹೆಚ್ಚು ನೀರು ಪೋಲಾಗುತ್ತಿದೆ… ಹೀಗಾಗಿ ಅದನ್ನು ತಪ್ಪಿಸುವಂತಹ ಕಾರ್ಯ ನಡೆಯುತ್ತಿದೆ.. ಕಟ್ಟುನಿಟ್ಟಿನ ನಿಯಮಗಳಳನ್ನು ಜಾರಿಗೆ ತಂದು ನೀರು ಪೋಲಾಗದಂತೆ ನೋಡಿಕೊಳ್ಳಲಾಗುತ್ತಿದೆ.. ಜೊತೆಗೆ ಮಾರ್ಚ್ 21 ರಿಂದ 31 ರವರೆಗೆ ಸ್ವಯಂ ಇಚ್ಛೆಯಿಂದ ಏರಿಯೇಟರ್ ಅಳವಡಿಕೆಗೆ ಅವಕಾಶ ಒದಗಿಸಲಾಗಿದೆ.
ಇದನ್ನೂ ಓದಿ; ಒಂದೇ ಕುಟುಂಬದ ಮೂವರು ನಿಗೂಢ ಸಾವು; ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ..?