Politics

ಬಿಜೆಪಿ ಪಕ್ಷದ ಶುದ್ಧೀಕರಣವೇ ನನ್ನ ಗುರಿ; ಕಾಂಗ್ರೆಸ್‌ ಸೇರಲ್ಲ ಎಂದ ಸದಾನಂದಗೌಡ!

ಬೆಂಗಳೂರು; ನಾನು ಬಿಜೆಪಿ ಬಿಡೋದಿಲ್ಲ, ಕಾಂಗ್ರೆಸ್‌ ಸೇರೋದಿಲ್ಲ.. ಬಿಜೆಪಿ ಪಕ್ಷದಲ್ಲೇ ಇದ್ದು, ರಾಜ್ಯ ಬಿಜೆಪಿಯನ್ನು ಶುದ್ಧೀಕರಣ ಮಾಡುತ್ತೇನೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸ್ಪರ್ಧೆ ಮಾಡಿ ಎಂದು ನನ್ನನ್ನು ಆರತಿ ಮಾಡಿ ಕರೆದುಕೊಂಡು ಬಂದರು. ನಂತರ ಅವರೇ ಮಂಗಳಾರತಿ ಮಾಡಿ ಹೊರಗೆ ಕಳುಹಿಸಿದ್ದಾರೆ ಎಂದು ಆರ್‌.ಅಶೋಕ್‌ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ ಜೀವಜಲಕ್ಕಾಗಿ ಸಂಕಷ್ಟ; ಇಂದಿನಿಂದ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ!

ಚುನಾವಣೆ ನಂತರ ಬಿಜೆಪಿ ಶುದ್ಧೀಕರಣ ಮಾಡುತ್ತೇನೆ;

ಸದಾನಂದಗೌಡರು ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.. ಈ ಬಾರಿ ಸ್ಪರ್ಧೆ ಮಾಡೋದಕ್ಕೆ ಅವರು ಹಿಂದೇಟು ಹಾಕಿದ್ದರು.. ಈ ನಡುವೆಯೇ ಯಡಿಯೂರಪ್ಪ ಸೇರಿ ಹಲವು ನಾಯಕರು ಸದಾನಂದಗೌಡರಿಗೆ ಮತ್ತೆ ಟಿಕೆಟ್‌ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದರು.. ಅದೇ ಆಸೆಯಲ್ಲಿದ್ದ ಸದಾನಂದಗೌಡರಿಗೆ ನಿರಾಸೆಯಾಗಿದೆ.. ಹೀಗಾಗಿ, ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.. ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜ. ಆದ್ರೆ ನಾನು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ.. ಬದಲಾಗಿ, ಬಿಜೆಪಿಯಲ್ಲೇ ಇದ್ದು ಪಕ್ಷವನ್ನು ಶುದ್ಧೀಕರಣ ಮಾಡುತ್ತೇನೆ. ನನ್ನ ಎಲ್ಲಾ ಮಾತುಗಳೂ ಕರ್ನಾಟಕ ಬಿಜೆಪಿಗೆ ಸೀಮಿತವಾಗಿದೆ. ನಾನೊಬ್ಬ ಕನ್ನಡಿಗನಾಗಿ ಮಾತಾಡುತ್ತಿದ್ದೇನೆ. ಬಿಜೆಪಿ ಶುದ್ದೀಕರಣ ಮಾಡುವವರೆಗೆ ನಾನು ವಿರಮಿಸುವುದಿಲ್ಲ ಎಂದು ಸದಾನಂದಗೌಡರು ಹೇಳಿದ್ದಾರೆ..

ಇದನ್ನೂ ಓದಿ; Fastag ಕೂಡಾ ಬಂದ್ ಆಗುತ್ತೆ; ಬರಲಿದೆ ಜಿಪಿಎಸ್ ತಂತ್ರಜ್ಞಾನ!

ಮುಂದಿನ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡುತ್ತಾರೆ;

ಅಂದಹಾಗೆ, ಸದಾನಂದಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಮಿಸ್‌ ಆದ ಮೇಲೆ ಕಾಂಗ್ರೆಸ್‌ ನಾಯಕರು ಅವರನ್ನು ಸಂಪರ್ಕ ಮಾಡಿದ್ದರು.. ಮೈಸೂರು ಕ್ಷೇತ್ರದಿಂದ ಟಿಕೆಟ್‌ ಕೊಡುವ ಬಗ್ಗೆ ಚರ್ಚೆಗಳಾಗಿದ್ದವು… ಆದ್ರೆ ನಂತರ ಅದೇನಾಯಿತೋ ಏನೋ ಸದಾನಂದಗೌಡರು ಕೂಡಾ ಕಾಂಗ್ರೆಸ್‌ ಸೇರುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ.. ಅದರ ಬದಲಾಗಿ ಅವರು ಪಕ್ಷದಲ್ಲೇ ಇದ್ದು, ಕರ್ನಾಟಕ ಬಿಜೆಪಿಯನ್ನು ಶುದ್ಧೀಕರಣ ಮಾಡೋದಕ್ಕೆ ಸದಾನಂದಗೌಡರು ಹೊರಟಿದ್ದಾರೆ.. ಪರಿವಾರವಾದ, ಭ್ರಷ್ಟಾಚಾರವಾದ ಬಗ್ಗೆ ನಾನು ಪಲಾಯನವಾದ ಮಾಡಿದೆ ಎಂದಾಗುತ್ತದೆ.. ಹೀಗಾಗಿ ನಾನು ಪಕ್ಷದಲ್ಲೇ ಇರುತ್ತೇನೆ. ಚುನಾವಣೆಯ ನಂತ೬ರ ಪಕ್ಷದ ಶುದ್ಧೀಕರಣದಲ್ಲಿ ತೊಡಗುತ್ತೇನೆ.. ಇದರಿಂದಾಗಿ ಮುಂದಿನ ದಿನಗಳ ಅವರು ಪಶ್ಚಾತ್ತಾಪ ಪಡುವಂತಾಗುತ್ತದೆ ಎಂದು ಸದಾನಂದಗೌಡರು ಹೇಳಿದ್ದಾರೆ..

ಇದನ್ನೂ ಓದಿ; ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ ತಪ್ಪಿಸಲು ಈ ಆಹಾರಗಳು ಸೇವಿಸಿ

ಮೋದಿ ಹೇಳಿದ ಬಿಜೆಪಿ ಕರ್ನಾಟಕದಲ್ಲಿರಬೇಕು;

ರಾಜ್ಯದಲ್ಲಿ ಬಿಜೆಪಿ ಜನರು ಒಪ್ಪಿಕೊಳ್ಳುವಂತಹ ಪಕ್ಷ ಆಗಬೇಕು.. ಯಾಕಂದ್ರೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.. ಮೋದಿ ಹೇಳಿದ ರೀತಿಯಲ್ಲಿ ಬಿಜೆಪಿ ಕರ್ನಾಟಕದಲ್ಲಿರಬೇಕು.. ಮೋದಿ ಹೇಳಿದ ಪರಿವಾರ ರಹಿತ ಹಾಗೂ ಜಾತಿವಾದ ರಹಿತ ಪಕ್ಷ ನಮಗೆ ಬೇಕು… ಆ ನಿಟ್ಟಿನಲ್ಲಿ ಕರ್ನಾಟಕದ ಬಿಜೆಪಿಯಲ್ಲಿರುವ ತಪ್ಪುಗಳನ್ನು ತೆಗೆದು ಅದನ್ನು ಶುದ್ಧಿ ಮಾಡುವ ಕಾರ್ಯದಲ್ಲಿ ನಾನು ತೊಡಗುತ್ತೇನೆ ಎಂದು ಸದಾನಂದಗೌಡರು ಹೇಳಿದ್ದಾರೆ..

ಇದನ್ನೂ ಓದಿ; ಅಂಗನವಾಡಿ ಮೊಟ್ಟೆ ಕದ್ದರು; ಇಲ್ಲಿ ಸಮಾಧಿಗಳನ್ನೇ ಧ್ವಂಸ ಮಾಡಿದರು!

 

Share Post