ನಮ್ಮ ಬಳಿ ಜಾಹೀರಾತು ನೀಡಲೂ ಹಣವಿಲ್ಲ, ರೈಲು ಟಿಕೆಟ್ ಬುಕ್ ಮಾಡಲೂ ಆಗ್ತಿಲ್ಲ; ರಾಹುಲ್ ಗಾಂಧಿ!
ನವದೆಹಲಿ; ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಫ್ರೀಜ್ ಮಾಡಿರುವುದರಿಂದ ಪೇಪರ್ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣವಿಲ್ಲದಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಹಾಯಕತೆ ತೋಡಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖ್ಯಾತೆಗಳನ್ನು ಫ್ರೀಸ್ ಮಾಡಿದೆ.. ಇದರಿಂದಾಗಿ ನಮ್ಮ ಬ್ಯಾಂಕ್ ಖಾತೆಯಿಂದ ನಮಗೆ ಹಣ ತೆಗಿಯೋಕೆ ಆಗ್ತಿಲ್ಲ. ಎಲೆಕ್ಷನ್ ಬಾಂಡ್‌ಗಳ ಮೂಲಕ ಖಜಾನೆ ತುಂಬಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ಅಕೌಂಟ್‌ನಲ್ಲಿ ಹಣ ಮಾತ್ರ ಬಳಕೆ ಮಾಡೋದಕ್ಕೆ ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಮೇಕೆದಾಟು ಅಣೆಕಟ್ಟು ಮಾಡಲು ಬಿಡಲ್ಲ ಎಂದ ಡಿಎಂಕೆ; ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ಸಮರ!
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲ;
ಕೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರಣದಿಂದ ನಮ್ಮ ಪಕ್ಷದಿಂದ ಹಣ ತೆಗೆಯಲು ಆಗುತ್ತಿಲ್ಲ. ಇದರಿಂದಾಗಿ ನಾವು ಚುನಾವಣೆಗೆ ಜಾಹೀರಾತು ನೀಡೋದಕ್ಕೂ ಆಗುತ್ತಿಲ್ಲ. ಅಕೌಂಟ್‌ಗಳು ಫ್ರೀಜ್ ಆಗಿರುವುದರಿಂದ ನಮಗೆ ತುಂಬಾ ತೊಂದರೆಯಾಗಿದೆ. ಒಂದು ಪೇಪರ್ ನಲ್ಲಿ ಜಾಹೀರಾತು ಕೊಡೋದಕ್ಕೂ ನಮ್ಮ ಬಳಿ ಹಣವಿಲ್ಲ.. ನಮಗೆ ಒಂದು ರೈಲ್ವೆ ಟಿಕೆಟ್ ಬುಕ್ ಮಾಡೋದಕ್ಕೂ ಆಗುತ್ತಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬಂತಿತ್ತು.. ಆದ್ರೆ ಬಿಜೆಪಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ; ಬಿಜೆಪಿ ಪಕ್ಷದ ಶುದ್ಧೀಕರಣವೇ ನನ್ನ ಗುರಿ; ಕಾಂಗ್ರೆಸ್ ಸೇರಲ್ಲ ಎಂದ ಸದಾನಂದಗೌಡ!
ನಮ್ಮ ಖಾತೆಯ ಹಣ ನಾವೇ ತೆಗೆಯದಾದರೆ ಹೇಗೆ..?
ನಮ್ಮ ಪಕ್ಷದ ಬ್ಯಾಂಕ್ ಖಾತೆಗಳನ್ನೆಲ್ಲಾ ಸೀಜ್ ಮಾಡಿದ್ದಾರೆ.. ಹೀಗಾಗಿ ನಾವು ಪ್ರಚಾರ ಮಾಡುವುದು ಹೇಗೆ..? ಚುನಾವಣೆ ಎದುರಿಸುವುದು ಹೇಗೆ ಎಂದೂ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.. ಇದು ನಮ್ಮ ಜನರ ಮೇಲೆ ಮಾಡ್ತಾ ಇರುವಂತಹ ಆಕ್ರಮಣ, ಎಲ್ಲರೂ ನಾಟಕ ನೋಡಿದಂತೆ ನೋಡ್ತಿದ್ದಾರೆ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ಬೆಂಗಳೂರಿನಲ್ಲಿ ಜೀವಜಲಕ್ಕಾಗಿ ಸಂಕಷ್ಟ; ಇಂದಿನಿಂದ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ!
ನ್ಯಾಯಾಂಗ ಸಂಸ್ಥೆಗಳನ್ನೇ ಸರ್ಕಾರ ವಶಕ್ಕೆ ಪಡೆದಿದೆ;
ಇನ್ನು ಈ ಬಗ್ಗೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಭಾರತ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ.. ಚುನಾವಣೆ ನ್ಯಾಯ ಸಮ್ಮತವಾಗಿ ಎದುರಿಸಬೇಕು.. ಎಲ್ಲಾ ಪಕ್ಷಗಳಿಗೂ ಸಮಾನವಾದ ಅವಕಾಶಗಳು ಸಿಗಬೇಕು.. ಆದ್ರೆ ಬಿಜೆಪಿ ಸರ್ಕಾರ ಸಂಪನ್ಮೂಲಗಳು, ಮಾಧ್ಯಮಗಳು, ಸಾಂವಿಧಾನಿಕ ಮತ್ತು ನ್ಯಾಯಾಂಗ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಅಂತ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕಳೆದ 70 ವರ್ಷಗಳಲ್ಲಿ ನ್ಯಾಯಯುತವಾಗಿ ಚುನಾವಣೆಗಳು ನಡೆದಿದ್ದವು. ಆದ್ರೆ ಈಗ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಈಗಿನ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ತನ್ನ ಖಾತೆಗೆ ತುಂಬಿಕೊಂಡಿದೆ ಎಂದು ಖರ್ಗೆ ಗುಡುಗಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ; Fastag ಕೂಡಾ ಬಂದ್ ಆಗುತ್ತೆ; ಬರಲಿದೆ ಜಿಪಿಎಸ್ ತಂತ್ರಜ್ಞಾನ!