Politics

ಮೇಕೆದಾಟು ಅಣೆಕಟ್ಟು ಮಾಡಲು ಬಿಡಲ್ಲ ಎಂದ ಡಿಎಂಕೆ; ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ಸಮರ!

ಬೆಂಗಳೂರು; ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಬಳಿ ಕರ್ನಾಟಕದ ಅಣೆಕಟ್ಟೆ ಕಟ್ಟುವುದಕ್ಕೆ ಬಿಡುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.. ಇದಕ್ಕೆ ರಾಜ್ಯ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ರಾಜ್ಯ ಬಿಜೆಪಿ ಅಧಿಕೃತ ಖಾತೆಯಿಂದ ಪೋಸ್ಟ್‌ ಹಾಕಿದ್ದು, ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ..

ಇದನ್ನೂ ಓದಿ; ಬಿಜೆಪಿ ಪಕ್ಷದ ಶುದ್ಧೀಕರಣವೇ ನನ್ನ ಗುರಿ; ಕಾಂಗ್ರೆಸ್‌ ಸೇರಲ್ಲ ಎಂದ ಸದಾನಂದಗೌಡ!

ಸ್ಟ್ರಾಂಗ್‌ ಎಂದು ಬೀಗುವ ವೀಕ್‌ ಸಿಎಂ;

ಸಿದ್ದರಾಮಯ್ಯ ಅವರನ್ನು ಬಿಜೆಪಿ ಸ್ಟ್ರಾಂಗ್‌ ಎಂದು ಬೀಗುವ ವೀಕ್‌ ಸಿಎಂ ಎಂದು ಕರೆದಿದೆ.. ಇತ್ತೀಚೆಗೆ ಶಿವಮೊಗ್ಗಕ್ಕೆ ಬಂದಿದ್ದ ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಶ್ಯಾಡೋ ಸಿಎಂ, ಸೂಪರ್‌ ಸಿಎಂ ಎಲ್ಲಾ ಇದ್ದಾರೆ ಎಂದು ಹೇಳಿದ್ದರು.. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ನಾನು ಸ್ಟ್ರಾಂಗ್‌ ಸಿಎಂ ನಿಮ್ಮಂತೆ ವೀಕ್‌ ಪಿಎಂ ಅಲ್ಲ ಎಂದು ಹೇಳಿದ್ದರು.. ಈ ಹಿನ್ನೆಲೆಯಲ್ಲಿ ಅದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.. ನಿಮ್ಮದೇ ಮೈತ್ರಿಕೂಟದ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಅಆಣೆಕಟ್ಟು ಕಟ್ಟೋದಕ್ಕೆ ಬಿಡೋದಿಲ್ಲ ಎಂದು ಹೇಳಿದೆ.. ನಿಮ್ಮ ತಾಕತ್ತಿದ್ದರೆ, ಆ ಪಕ್ಷವನ್ನು ಮೈತ್ರಿಕೂಟದಿಂದ ಹೊರಗಿಡುವಂತೆ ಮಾಡಿ ಎಂದು ಬಿಜೆಪಿ ಸವಾಲಾಕಿದೆ..

ಇದನ್ನೂ ಓದಿ; ಬೆಂಗಳೂರಿನಲ್ಲಿ ಜೀವಜಲಕ್ಕಾಗಿ ಸಂಕಷ್ಟ; ಇಂದಿನಿಂದ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ!

ಬಿಜೆಪಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಏನಿದೆ..?

ಮೇಕೆದಾಟು ಹೆಸರಿನಲ್ಲಿ ಬೊಂಡಾ-ಬಜ್ಜಿ ತಿನ್ನುತ್ತಾ @siddaramaiah ಅವರೇ, ಡಿಸಿಎಂ @DKShivakumar ಅವರೇ, ತಮಿಳುನಾಡಿನ ನಿಮ್ಮ ಚಿನ್ನ ತಂಬಿ ಎಂ. ಕೆ. ಸ್ಟಾಲಿನ್ ಅವರು ಇಂಡಿ ಮೈತ್ರಿಕೂಟ ಗೆದ್ದರೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂಬುದನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೇ ತಿಳಿಸಿದ್ದಾರೆ.
ಸ್ಟ್ಯಾಂಗ್ ಎಂದು ಬೀಗುವ ವೀಕ್ ಸಿಎಂ ಸಿದ್ದರಾಮಯ್ಯ ಅವರೇ, ಡಿಎಂಕೆ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹವನ್ನು ಖಂಡಿಸಿ ಅವರನ್ನು ಇಂಡಿ ಮೈತ್ರಿಕೂಟದಿಂದ ಉಚ್ಛಾಟಿಸಿ ಎಂದು @RahulGandhi ಅವರಿಗೆ ಯಾವಾಗ ಪತ್ರ ಬರೆಯುತ್ತೀರಿ..? ಡಿಸಿಎಂ ಡಿ. ಕೆ. ಶಿವಕುಮಾ‌ರ್ ಅವರೇ, ಡಿಎಂಕೆಯ ಈ ಪ್ರಣಾಳಿಕೆಯ ವಿರುದ್ಧ ಪಾದಯಾತ್ರೆ ಅಲಿಯಾಸ್ ಮೋಜು-ಮಸ್ತಿಯ ವಾಕಿಂಗ್ ಅನ್ನು ಆರಂಭಿಸುವುದು ಯಾವಾಗ..?

ಇದನ್ನೂ ಓದಿ; Fastag ಕೂಡಾ ಬಂದ್ ಆಗುತ್ತೆ; ಬರಲಿದೆ ಜಿಪಿಎಸ್ ತಂತ್ರಜ್ಞಾನ!

ಹೀಗಂತ ರಾಜ್ಯ ಬಿಜೆಪಿಯ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಬರೆದುಕೊಳ್ಳಲಾಗಿದೆ.. ಈ ಬಗ್ಗೆ ನೀವು ರಾಹುಲ್‌ ಗಾಂಧಿಗೆ ಯಾವಾಗ ಪತ್ರ ಬರೆಯುತ್ತೀರಿ..? ಮೈತ್ರಿಕೂಟದಿಂದ ಡಿಎಂಕೆ ಪಕ್ಷವನ್ನು ಯಾವಾಗ ತೆಗೆಸುತ್ತೀರಿ ಎಂದು ಬಿಜೆಪಿ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಕೇಳಿದೆ.. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡಾ ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ; ರಕ್ತ ಹೆಪ್ಪುಗಟ್ಟುವಿಕೆ, ಹೃದಯಾಘಾತ ತಪ್ಪಿಸಲು ಈ ಆಹಾರಗಳು ಸೇವಿಸಿ

ವಿಜಯೇಂದ್ರ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲೇನಿದೆ..?

DMK Manifesto exposes the @siddaramaiah govt’s clandestine arrangement with @mkstalin that has cost us our lifeline “Cauvery”, the primary source of Drinking Water & Irrigation purposes for our farmers, during the time of a severe drought.
@INCKarnataka govt has sacrificed our farmers and our citizens’ drinking water needs for the Selfish coalition politics of I.N.D.I.Alliance!
This very much explains its lackadaisical attitude in fighting for our rightful share of our Cauvery water with CWMA, that has resulted in Karnataka releasing water in abundance to TN, more than our share.
Its no wonder if DMK would leverage its alliance power to bargain for more Cauvery water & STOP the Mekedatu project, in case the I.N.D.I.Alliance

ಇದನ್ನೂ ಓದಿ; ಪಕ್ಕದ ಮನೆ ದಂಪತಿ ಸರಸ ಸಲ್ಲಾಪ ನೋಡೋಕೆ ಆಗ್ತಿಲ್ಲ; ಬೆಂಗಳೂರು ಮಹಿಳೆಯಿಂದ ವಿಚಿತ್ರ ದೂರು

Share Post