Politics

ಕೋಲಾರ ಟಿಕೆಟ್‌ ವಿವಾದ; ಸಿಎಂ ಸಂಧಾನ ಯಶಸ್ವಿ – ಅಭ್ಯರ್ಥಿ ಯಾರು ಗೊತ್ತಾ..?

ಬೆಂಗಳೂರು; ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಿಚಾರ ದೊಡ್ಡ ಹೈಡ್ರಾಮಾಕ್ಕೆ ಕಾರಣವಾಗಿತ್ತು.. ಒಬ್ಬರು ಸಚಿವರು, ಇಬ್ಬರು ಶಾಸಕರು, ಇಬ್ಬರು ಪರಿಷತ್‌ ಸದಸ್ಯರು ರಾಜೀನಾಮೆಗೆ ಮುಂದಾಗಿದ್ದರು.. ಇದೀಗ ಎಲ್ಲರ ಕೋಪವನ್ನೂ ತಣಿಸಲಾಗಿದೆ.. ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಕೋಪಗೊಂಡಿದ್ದ ಶಾಸಕರನ್ನು ಸಮಾಧಾನಪಡಿಸಲಾಗಿದೆ.. ರಾಜೀನಾಮೆ ನೀಡುತ್ತಿದ್ದವರೆಲ್ಲಾ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.. ಆದ್ರೆ ಸಭೆಯಲ್ಲಿ ಏನು ಚರ್ಚೆಯಾಯಿತು..? ಕೋಲಾರ ಕ್ಷೇತ್ರದ ಅಭ್ಯರ್ಥಿ ಯಾರು..? ಅದೇ ಕುತೂಹಲ..

ಇದನ್ನೂ ಓದಿ; 50ನೇ ವಯಸ್ಸಿನಲ್ಲಿ ತಂದೆಯಾದ ಪಂಜಾಬ್‌ ಸಿಎಂ ಭಗವಂತ್‌ ಮಾನ್‌

ಸಚಿವ ಎಂ.ಸಿ.ಸುಧಾಕರ್‌ ಹೇಳೋದೇನು..?;

ಚಿಂತಾಮಣಿ ಕ್ಷೇತ್ರದ ಶಾಸಕರ ಹಾಗೂ ಸಚಿವ ಎಂ.ಸಿ.ಸುಧಾಕರ್‌ ನಿನ್ನೆ ರಾಜೀನಾಮೆ ನೀಡಲು ಮುಂದಾಗಿದ್ದ ಶಾಸಕರಲ್ಲಿ ಮುಂಚೂಣಿಗರು.. ಕೆ.ಹೆಚ್‌.ಮುನಿಯಪ್ಪ ಅವರಿಗೂ ಡಾ.ಎಂ.ಸಿ.ಸುಧಾಕರ್‌ ಅವರಿಗೂ ದಶಕಕ್ಕೂ ಹೆಚ್ಚು ಕಾಲದಿಂದ ಮನಸ್ತಾಪ ಇದೆ.. ಆದ್ರೆ ಕೋಲಾರ ಕ್ಷೇತ್ರದಲ್ಲಿ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕನ್ಫರ್ಮ್‌ ಆಗಿದೆ ಎಂದು ತಿಳಿದು ನಿನ್ನೆ ಐವರು ಶಾಸಕರು ರಾಜೀನಾಮೆಗೆ ಮುಂದಾಗಿದ್ದರು.. ಆದ್ರೆ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗಿದೆ.. ಸಭೆಯ ನಂತರ ಎಲ್ಲರೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ..

ಇದನ್ನೂ ಓದಿ; 238 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲು; ಛಲ ಬಿಡದೆ ಪದ್ಮರಾಜ್‌ ಮತ್ತೆ ಸ್ಪರ್ಧೆ

ಇದೇ ವೇಳೆ ಮಾತನಾಡಿರುವ ಸಚಿವ ಸುಧಾಕರ್‌, ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿರಬಹುದು.. ಆದ್ರೆ ಎಲ್ಲವನ್ನೂ ಸರಿಪಡಿಸುವುದಾಗಿ ನಮ್ಮ ನಾಯಕರು ತಿಳಿಸಿದ್ದಾರೆ.. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.. ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ ನಾವು ವಿಷಾಧ ವ್ಯಕ್ತಪಡಿಸುತ್ತೇನೆ.. ನಮ್ಮಿಂದ ಪಕ್ಷಕ್ಕೆ ಹಾನಿಯಾಗುವುದಕ್ಕೆ ಬಿಡುವುದಿಲ್ಲ ಎಂದು ಸುಧಾಕರ್‌ ಹೇಳಿದ್ದಾರೆ..

ಇದನ್ನೂ ಓದಿ; ದೆಹಲಿ ಪದಚ್ಯುತಿ ಅರ್ಜಿ; ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್‌ ರಿಲೀಫ್‌

ನಾಯಕರ ಸೂಚನೆಗೆ ನಾವು ಬದ್ಧ ಎಂದ ಸುಧಾಕರ್‌;

ಏನೇ ಆದರೂ ನಾವು ಮುನಿಯಪ್ಪ ಅವರ ಅಳಿಯ ಅಭ್ಯರ್ಥಿಯಾಗಲು ಬಿಡುವುದಿಲ್ಲ ಎಂದು ಹೇಳುತ್ತಿದ್ದವರು ಈಗ ಸುಮ್ಮನಾಗಿದ್ದಾರೆ.. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಹೇಳುತ್ತಿದ್ದಾರೆ.. ಸಂಧಾನದ ಬಳಿಕ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅಭ್ಯರ್ಥಿಯಾಗೋಕೆ ಅತೃಪ್ತರು ಒಪ್ಪಿದಂತೆ ಕಾಣುತ್ತಿದೆ.. ಸಚಿವರ ಹೇಳಿಕೆಗಳು ಹೆಚ್ಚು ಕಡಿಮೆ ಅದೇ ರೀತಿ ಇದೆ.. ಆದರೂ ಕೂಡಾ ಪಟ್ಟಿ ಬಿಡುಗಡೆಯಾಗುವ ತನಕ ಕುತೂಹಲ ಇದ್ದೇ ಇದೆ..

ಇದನ್ನೂ ಓದಿ; ಕುಡಿಯುವ ನೀರಿಗಾಗಿ ಜಗಳ; 21 ವರ್ಷದ ಯುವಕನ ಹತ್ಯೆ!

ಎಡಗೈ, ಬಲಗೈ ಸಂಘರ್ಷ ಇದು ಅಲ್ಲವೇ ಅಲ್ಲ.. ಕೆಲವರು ಸಂಖ್ಯೆ ಜಾಸ್ತಿ ಇದೆ ಎಂಬ ಕಾರಣಕ್ಕೆ ಹೀಗೆ ಮಾತನಾಡಿದ್ದರು.. ಅದೊಂದು ಕೆಟ್ಟ ಘಳಿಗೆ ಅಷ್ಟೇ.. ಅಂತಿಮವಾಗಿ ಪಕ್ಷದ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ಳಬೇಕು.. ಹೀಗಾಗಿ ನಾನು ನಿನ್ನೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ.. ಸಭೆಯಲ್ಲಿ ಯಾವುದೇ ಅಭ್ಯರ್ಥಿ ಬಗ್ಗೆ ಚರ್ಚೆ ನಡೆದಿಲ.. ಆದ್ರೆ ಯಾರಿಗೆ ಟಿಕೆಟ್‌ ಕೊಟ್ಟರೂ ನಾವು ಒಂದಾಗಿ ಕೆಲಸ ಮಾಡುತ್ತೇವೆ. ನಮ್ಮ ಜಗಳದಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲ್ಲೋದಕ್ಕೆ ಅವಕಾಶ ನೀಡೋದಿಲ್ಲ ಎಂದು ಸಚಿವ ಸುಧಾಕರ್‌ ಹೇಳಿದ್ದಾರೆ..

ಹೈಕಮಾಂಡ್‌ ಹೇಳಿದ್ದೇ ಫೈನಲ್‌ ಎಂದ ಉಸ್ತುವಾರಿ ಸಚಿವ;

ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್‌ ಶಾಸಕರು ಕೂಡಾ ಭಾಗವಹಿಸಿದ್ದರು.. ಸಂಧಾನ ಸಭೆ ಯಶಸ್ವಿಯಾಗಿದೆ.. ಹೈಕಮಾಂಡ್‌ ಹೇಳಿದ್ದೇ ಫೈನಲ್‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.. ಹೈಕಮಾಂಡ್‌ ಹೇಳಿದ್ದೇ ಫೈನಲ್‌ ಎಂದು ಶಾಸಕರು ಕೂಡಾ ಹೇಳಿದ್ಧಾರೆ.. ಜೊತೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಂತೆ ಸೂಚನೆ ಕೊಡಲಾಗಿದೆ ಎಂದು ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.

ಇದನ್ನೂ ಓದಿ; ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!

ಮುನಿಯಪ್ಪ ಅಳಿಯನಿಗೇ ಸಿಗುತ್ತಾ ಟಿಕೆಟ್‌..?;

ಮುನಿಯಪ್ಪ ಅಳಿಯನಿಗೆ ಟಿಕೆಟ್‌ ಸಿಗಬಾರದು ಎಂದು ಎಲ್ಲಾ ಶಾಸಕರೂ ರಾಜೀನಾಮೆಗೆ ಮುಂದಾಗಿದ್ದರು.. ಆದ್ರೆ ಈಗ ಎಲ್ರೂ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ.. ಹಾಗಾದ್ರೆ ಸಭೆಯಲ್ಲಿ ಚರ್ಚೆಯಾಗಿದ್ದೇನು ಎಂಬುದೇ ಕುತೂಹಲದ ಪ್ರಶ್ನೆ.. ಹೈಕಮಾಂಡ್‌ ನಿಂದ ಮುನಿಯಪ್ಪ ಅಳಿಯನ ಹೆಸರು ಫೈನಲ್‌ ಆಗಿತ್ತು ಎನ್ನಲಾಗಿದೆ.. ಹಾಗಾದ್ರೆ ಈಗ ಅಭ್ಯರ್ಥಿಯನ್ನು ಬದಲಾಯಿಸಲಾಗಿದೆಯಾ..? ಅಥವಾ ಚಿಕ್ಕಪೆದ್ದಣ್ಣಗೆ ಬೆಂಬಲ ಕೊಡುವಂತೆ ಸೂಚನೆ ಕೊಡಲಾಗಿದೆಯಾ..? ಏನೋ ಗೊತ್ತಿಲ್ಲ.. ಆದ್ರೆ ಸಂಧಾನ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಬಿಡುಗಡೆಯಾಗಲಿರುವ ಪಟ್ಟಿ ಬ್ಗೆ ಕುತೂಹಲ ಹೆಚ್ಚಾಗಿದೆ..

ಇದನ್ನೂ ಓದಿ; ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!

 

Share Post