Politics

238 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲು; ಛಲ ಬಿಡದೆ ಪದ್ಮರಾಜ್‌ ಮತ್ತೆ ಸ್ಪರ್ಧೆ

ಕರ್ನಾಟಕದಲ್ಲಿ ಈ ಹಿಂದೆ ಹೊಟ್ಟೆ ಪಕ್ಷದ ರಂಗಸ್ವಾಮಿ ಎಂಬುವರೊಬ್ಬರಿದ್ದರು.. ಅವರು ಹೊಟ್ಟೆ ಪಕ್ಷ ಎಂಬ ಹೆಸರಿನ ಒಂದು ಪಕ್ಷ ಕಟ್ಟಿಕೊಂಡಿದ್ದರು.. ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಅಲ್ಲಿ ಸ್ಪರ್ಧೆ ಮಾಡುತ್ತಿದ್ದರು.. ಇಂದಿರಾಗಾಂಧಿ ವಿರುದ್ಧವೂ ಅವರು ಅಖಾಡಕ್ಕಿಳಿದಿದ್ದರು.. ಅತಿ ಹೆಚ್ಚು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಗಿನ್ನೆಸ್‌ ರೆಕಾರ್ಡ್‌ ಮಾಡಿದ್ದರು.. ಈಗ ಅವರಿಲ್ಲ.. ಹತ್ತು ವರ್ಷಗಳ ಹಿಂದೆ ಅವರು ತೀರಿಹೋದರು.. ಆದ್ರೆ ಇದೇ ರೀತಿ ನೂರಾರು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಮತ್ತೊಬ್ಬ ವ್ಯಕ್ತಿ ನಮ್ಮ ನಡುವೆ ಇದ್ದಾರೆ.. ಈ ಬಾರಿಯೂ ಅವರು ಲೋಕಸಭಾ ಅಖಾಡಕ್ಕಿಳಿಯುತ್ತಿದ್ದಾರೆ.. ಅವರ ಕುರಿತ ಸ್ಟೋರಿ ಇದು..

ಇದನ್ನೂ ಓದಿ; ದೆಹಲಿ ಪದಚ್ಯುತಿ ಅರ್ಜಿ; ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್‌ ರಿಲೀಫ್‌

238 ಬಾರಿ ಸ್ಪರ್ಧೆ ಮಾಡಿರುವ ಪದ್ಮರಾಜ್‌!

ಸ್ಥಳೀಯ ಸಂಸ್ಥೆಯಾಗಿರಬಹುದು, ವಿಧಾನಸಭೆಯಾಗಿರಬಹುದು, ಲೋಕಸಭೆಯಾಗಿರಬಹುದು.. ಚುನಾವಣೆ ಗೋಷಣೆಯಾಯ್ತು ಅಂದ್ರೆ ಅಲ್ಲಿ ಈ ಅಭ್ಯರ್ಥಿ ಅಖಾಡಕ್ಕೆ ರೆಡಿ ಇರುತ್ತಾರೆ.. ಅವರ ಹೆಸರೇ ಕೆ.ಪದ್ಮರಾಜ್‌.. ಇವರು ತಮಿಳುನಾಡಿನವರು.. ದೇಶದಲ್ಲಿ ಎಲ್ಲೇ ಚುನಾವಣೆ, ಉಪಚುನಾವಣೆ ನಡೆದರೂ ಸ್ಪರ್ಧೆ ಮಾಡುತ್ತಾರೆ.. ಪದ್ಮರಾಜ್‌ ಅವರು ಇದುವೆರಗೂ 238 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.. ಆದ್ರೆ ಎಲ್ಲಾ ಚುನಾವಣೆಗಳಲ್ಲೂ ಸೋತಿದ್ದಾರೆ.. ಆದರೂ ಕೂಡಾ ಚುನಾವಣೆಗೆ ಸ್ಪರ್ಧೆ ಮಾಡೋ ಆಸೆ ಮಾತ್ರ ಅವರು ಬಿಟ್ಟಿಲ್ಲ.. ಈ ಬಾರಿಯೂ ಕೂಡಾ ಲೋಕಸಭಾ ಚುನಾವಣಾ ಅಖಾಡದಲ್ಲಿದ್ದಾರೆ..

ಇದನ್ನೂ ಓದಿ; ನೂರಕ್ಕೆ ನೂರು ಪಾಲು ಡಿ.ಕೆ.ಸುರೇಶ್‌ ಗೆಲ್ತಾರೆ; ಸಿಎಂ ಸಿದ್ದರಾಮಯ್ಯ ವಿಶ್ವಾಸ

ಚುನಾವಣಾ ರಾಜ ಎಂದೇ ಖ್ಯಾತಿ ಹೊಂದಿರುವ ಪದ್ಮರಾಜ್‌;

ಪದ್ಮರಾಜ್‌ ಅವರು ವಿಶ್ವದಲ್ಲೇ ಅತಿಹೆಚ್ಚು ಬಾರಿ ಸೋತ ಅಭ್ಯರ್ಥಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.. ವಿಶ್ವದಲ್ಲಿ ಇಷ್ಟು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದವರು, ಇಷ್ಟು ಬಾರಿ ಸತೋವರು ಯಾರೂ ಇಲ್ಲ ಎಂದು ಹೇಳಲಾಗುತ್ತಿದೆ.. ಅಂದಹಾಗೆ ಇವರು ಅತಿ ಹೆಚ್ಚು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿರುವ ಕಾರಣಕ್ಕೆ ಇವರನ್ನು ತಮಿಳುನಾಡಿನ ಜನ ಚುನಾವಣಾ ರಾಜ ಎಂದೇ ಕರೆಯುತ್ತಾರೆ.. ಮತ ಹಾಕದಿದ್ದರೂ, ಜನ ಇವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ.. ಒಂದು ಚುನಾವಣೆ ಗೆಲ್ಲದಿದ್ದರೂ ಇವರು ಸೆಲೆಬ್ರಿಟಿ..

ಇದನ್ನೂ ಓದಿ; ಅಣ್ಣ- ಅತ್ತಿಗೆ ಕಾಲಿಗೆ ಬಿದ್ದ ಡಿ.ಕೆ.ಸುರೇಶ್‌; ಗ್ರಾಮಾಂತರದಲ್ಲಿ ಗೆಲ್ತಾರಾ..?

65 ವರ್ಷ ವಯಸ್ಸಾದರೂ ಮತ್ತೆ ಲೋಕಸಭೆಗೆ ಸ್ಪರ್ಧೆ;

ಕೆ.ಪದ್ಮರಾಜ್‌ ಅವರಿಗೆ ಈಗ 65 ವಯಸ್ಸು.. ಈ ವಯಸ್ಸಿನಲ್ಲೂ ಉತ್ಸಾಹ ಕಡಿಮೆಯಾಗಿಲ್ಲ.. 1988ರಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಶುರುಮಾಡಿದ ಪದ್ಮರಾಜ್‌ ಅವರು ಈಗಲೂ ಅದನ್ನು ಮುಂದುವರೆಸಿದದ್ದಾರೆ.. ಮೊದಲ ಬಾರಿಗೆ ಪದ್ಮರಾಜ್‌ ಅವರು 1988ರಲ್ಲಿ ತಮಿಳುನಾಡಿನ ಮೆಟ್ಟೂರು ಕ್ಷೇತ್ರದಿಂದ ಕಣಕ್ಕಿಳಿದು ಸೋಲನುಭವಿಸಿದ್ದರು.. ಈ ಬಾರಿ ಅವರು ಧರ್ಮಪುರಿ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ.. ಪ್ರತಿ ಬಾರಿ ಅವರು ಠೇವಣಿಯನ್ನು ಕಳೆದುಕೊಳ್ಳುತ್ತಾ ಬಂದಿದ್ದಾರೆ. ಆದರೂ ಪದ್ಮರಾಜ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡೋದನ್ನು ಬಿಟ್ಟಿಲ್ಲ.

ಇದನ್ನೂ ಓದಿ; ನನ್ನ ಹೆಣ ಬೀಳಿಸಿ ಬಿಜೆಪಿಯವರು ಚುನಾವಣೆ ಗೆಲ್ಲುವ ಪ್ಲ್ಯಾನ್‌; ಪ್ರಿಯಾಂಕ್‌ ಆರೋಪ

ಮೋದಿ, ವಾಜಪೇಯಿ, ರಾಹುಲ್‌ ಗಾಂಧಿ ವಿರುದ್ಧವೂ ಸ್ಪರ್ಧೆ;

ಟೈರ್‌ ರಿಪೇರಿ ಅಂಗಡಿ ಮಾಲೀಕರಾದ ಕೆ.ಪದ್ಮರಾಜ್‌ ಅವರು ಹೋಮಿಯೋಪತಿ ಔಷಧಿಯನ್ನೂ ನೀಡುತ್ತಾರಂತೆ.. ಜೊತೆಗೆ ಸ್ಥಳೀಯ ಮಾಧ್ಯಮವೊಂದಕ್ಕೆ ಸಂಪಾದಕರಾಗಿಯೂ ಕೆಲಸ ಮಾಡುತ್ತಾರಂತೆ.. ಇವರು  ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್​ ಬಿಹಾರಿ ವಾಜಪೇಯಿ, ಮನಮೋಹನ್​ ಸಿಂಗ್​, ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಹಲವಾರು ನಾಯಕರ ವಿರುದ್ಧ ಸ್ಪರ್ಧೆ ಮಾಡಿದ್ದಾರೆ..

ಇದನ್ನೂ ಓದಿ; ಲಂಡನ್‌ನಲ್ಲಿ ವಿರಾಟ್‌ ಕೊಹ್ಲಿ ಸಾಮಾನ್ಯನಂತೆ 2 ತಿಂಗಳು ಓಡಾಡಿದ್ದರಂತೆ!

 

Share Post