ಕುಡಿಯುವ ನೀರಿಗಾಗಿ ಜಗಳ; 21 ವರ್ಷದ ಯುವಕನ ಹತ್ಯೆ!
ಬೆಂಗಳೂರು; ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿರುವುದು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ.. ಬೆಂಗಳೂರಿನ ಜನ ಹನಿ ನೀರಿಗೂ ಪರದಾಡುತ್ತಿದ್ದಾರೆ.. 7 ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿಹೋಗಿವೆ.. ಪರಿಸ್ಥಿತಿ ಹೀಗಿದ್ದರೆ, ರಾಜ್ಯದ ಇತರ ಪ್ರದೇಶಗಳಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ.. ಅದ್ರಲ್ಲೂ ಯಾದಗಿರಿಯಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ಜಗಳ ನಡೆಯು ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ..
ಇದನ್ನೂ ಓದಿ; ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!
ನೀರಿನ ಜಗಳ ಕೊಲೆಯಲ್ಲಿ ಅಂತ್ಯ;
ಯಾದಗಿರಿ; ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದೆ.. ಕುಡಿಯುವುದಕ್ಕಾಗಿ ಸಾರ್ವಜನಿಕ ನಲ್ಲಿಯಿಂದ ನೀರು ಹಿಡಿಯುವ ಸಂಬಂಧ ಜಗಳ ನಡೆದಿದೆ.. ಇದು ವಿಕೋಪಕ್ಕೆ ತಿರುಗಿ 21 ವರ್ಷದ ಯವಕನನ್ನು ಬರ್ಬವಾಗಿ ಕೊಲೆ ಮಾಡಲಾಗಿದೆ.. ಇದರಿಂದಾಗಿ ಹುಣಸಗಿ ಪಟ್ಟಣದ ಜನರು ಬೆಚ್ಚಿಬಿದ್ದಿದ್ದಾರೆ..
ಇದನ್ನೂ ಓದಿ; ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!
ಕುಡಿಯುವ ನೀರಿಗೆ ಸಮಸ್ಯೆಯೇ ಘಟನೆಗೆ ಕಾರಣ;
ಹುಣಸಗಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.. ವಾರಕ್ಕೊಮ್ಮೆ, ಎಷ್ಟೋ ದಿನಕ್ಕೊಮ್ಮೆ ಇಲ್ಲಿ ನೀರು ಬಿಡಲಾಗುತ್ತದೆ.. ಇದರಿಂದಾಗಿ ನೀರು ಬಂದಾಗ ಜನ ನಲ್ಲಿ ಬಳಿ ಕ್ಯೂ ನಿಲ್ಲುತ್ತಾರೆ.. ಇದೇ ವೇಳೆ ನೆರೆಯ ಸಂಬಂಧಿಕರು ಹಾಗೂ ಮೃತ ಯುವಕನ ಅಜ್ಜಿ ನಡುವೆ ಗಲಾಟೆ ನಡೆದಿದೆ.. ನಲ್ಲಿ ಬಳಿ ನೀರು ತುಂಬಿಸಿಕೊಳ್ಳಲು ಹೋದಾಗ ನೆರೆಮನೆಯ ಸಂಬಂಧಿಕರು ಯುವಕ ಅಜ್ಜಿಯ ಜೊತೆಗೆ ಜಗಳ ತೆಗೆದಿದ್ದಾರೆ.. ಇದು ವಿಕೋಪಕ್ಕೆ ತಿರುಗಿದೆ..
ಪ್ರಶ್ನಿಸಲು ಹೋದ ಮೊಮ್ಮಗನ ಮೇಲೆ ದಾಳಿ;
ಸಂಬಂಧಿಕರು ಅಜ್ಜಿಯ ಜೊತೆ ನೀರಿಗಾಗಿ ಜಗಳ ಆಡುತ್ತಿದ್ದುದನ್ನು ನೋಡಿ ಮೊಮ್ಮಗ ನಂದಕುಮಾರ್ ಅಲ್ಲಿಗೆ ಹೋಗಿದ್ದಾನೆ.. ಅಜ್ಜಿಯ ಜೊತೆಗೆ ಯಾಕೆ ಜಗಳ ತೆಗೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದಾನೆ.. ಈ ವೇಳೆ ಹನುಮಂತ ಎಂಬಾತ 21 ವರ್ಷದ ನಂದಕುಮಾರ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ.. ಹನುಮಂತನ ತಾಯಿ ಕೂಡಾ ಇದಕ್ಕೆ ಸಾಥ್ ಕೊಟ್ಟಿದ್ದಾಳೆ ಎನ್ನಲಾಗಿದೆ.. ಈಗ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಕೋಲಾರ ವಿಚಾರ; ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡುವುದಿಲ್ಲ; ಡಿ.ಕೆ. ಶಿವಕುಮಾರ್
ಮಂಡ್ಯ ಜಿಲ್ಲೆಯಲ್ಲೂ ನೀರಿನ ಸಮಸ್ಯೆ;
ಇನ್ನು ರಾಜ್ಯ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಾಗಿದೆ.. ಮಂಡ್ಯ ಜಿಲ್ಲೆಯಲ್ಲೂ ನೀರಿನ ಸಮಸ್ಯೆ ಇದೆ.. ಸುಮಾರು ನೂರು ಹಳ್ಳಿಯಲ್ಲಿ ಕುಡಿಯುವುದಕ್ಕೂ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.. ಬೇಸಿಗೆಯ ಧಗೆ ಹೆಚ್ಚಾಗುತ್ತಿದ್ದಂತೆ ಬೋರ್‌ವೆಲ್‌ಗಳು ಬತ್ತಿಹೋಗುತ್ತಿವೆ.. ಇದರಿಂದಾಗಿ ಜನ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ.. ದೂರದ ಪ್ರದೇಶಗಳಿಗೆ ಹೋಗಿ ನೀರು ತರುತ್ತಿದ್ದಾರೆ.. ಇದರಿಂದಾಗಿ ನೀರಿಗಾಗಿ ಜಗಳಗಳೂ ಶುರುವಾಗುತ್ತಿವೆ..
ಇದನ್ನೂ ಓದಿ; ಟಿಕೆಟ್ ಸಿಗದಿದ್ದಕ್ಕೆ ನಿದ್ದೆ ಮಾತ್ರೆ ಸೇವಿಸಿದ್ದ ಸಂಸದ ಆಸ್ಪತ್ರೆಯಲ್ಲಿ ಸಾವು!
ಬೆಂಗಳೂರಿನಿಂದ ವಲಸೆ ಹೋಗುತ್ತಿರುವ ಜನರು;
ಇನ್ನು ಬೆಂಗಳೂರಿನಲ್ಲಿ ನೀರಿಗಾಗಿ ತೀವ್ರ ಪರದಾಟ ಶುರುವಾಗಿದೆ.. ಕಂಪನಿಗಳಲ್ಲಿ ಕೆಲವೆಡೆ ಟಾಯ್ಲೆಟ್‌ಗೂ ನೀರು ಇಲ್ಲದಂತಾಗಿದೆ.. ಇದರಿಂದಾಗಿ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಹಾಕಿಸಿಕೊಂಡು ಸ್ವಂತ ಊರುಗಳಿಗೆ ಹೋಗುತ್ತಿದ್ದಾರೆ.. ಬೆಂಗಳೂರಿನಲ್ಲಿ ಕೂಲಿ ಮತ್ತಿತರ ಕೆಲಸ ಮಾಡುವವರು ಕೂಡಾ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಮನೆಗಳಿಗೆ ವಾಪಸ್ ಹೋಗುತ್ತಿದ್ದಾರೆ.. ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೂ ನೀರಿನ ಸಮಸ್ಯೆ ಮುಂದುವರೆಯುತ್ತಲೇ ಇದೆ.. ಕೆಲವೊಂದು ಕಡೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.. ಇನ್ನು ಬಹುತೇಕ ಕಡೆ ಪ್ರತಿ ಮನೆಗೂ ಬೋರ್‌ವೆಲ್ ಇತ್ತು.. ಕಾರ್ಪೊರೇಷನ್ ನೀರು ಬರದಿದ್ದಾಗ ಬೋರ್‌ವೆಲ್ ನೀರು ಬಳಸುತ್ತಿದ್ದರು.. ಆದ್ರೆ ಬೆಂಗಳೂರಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿಹೋಗಿವೆ.. ಇದರಿಂದಾಗಿ ಜನ ಸಂಕಷ್ಟ ಅನುಭವಿಸುವಂತಾಗಿದೆ..
ಇದನ್ನೂ ಓದಿ; ಮತ್ತೊಂದು ರೆಸ್ಟೋರೆಂಟ್‌ಗೆ ಬಂತು ಬಾಂಬ್ ಬೆದರಿಕೆ; ಕಾರಣ ಕೇಳಿ ಪೊಲೀಸರೇ ಬೇಸ್ತು..!