BengaluruCinemaPolitics

ಕಾಂಗ್ರೆಸ್‌ ಸೇರ್ತಾರಾ ಕಿಚ್ಚ ಸುದೀಪ್‌..?; ಸ್ಯಾಂಡಲ್‌ವುಡ್‌ ನಟನ ಮನೆಯಲ್ಲಿ ಡಿಕೆಶಿ

ಬೆಂಗಳೂರು; ಖ್ಯಾತ ನಟ ಕಿಚ್ಚ ಸುದೀಪ್‌ ಅವರು ಕಾಂಗ್ರೆಸ್‌ ಸೇರುತ್ತಾರಾ ಎಂಬ ಬಗ್ಗೆ ಅನುಮಾನ ಉಂಟಾಗಿದೆ. ಇದಕ್ಕೆ ಕಳೆದ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ. ಅದ್ರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸುದೀಪ್‌ ಅವರ ಮನೆಯಲ್ಲಿ ಕಾಣಸಿಕೊಂಡಿದ್ದು, ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಈ ವೇಳೆ ಮಹಮದ್‌ ನಲಪಾಡ್‌ ಕೂಡಾ ಇದ್ದರು. ಅದರ ಫೋಟೋಗಳು ಈಗ ವೈರಲ್‌ ಆಗುತ್ತಿವೆ..

ಇತ್ತೀಚೆಗಷ್ಟೇ ನಟಿ ರಮ್ಯಾ ಅವರು ನಟ ಸುದೀಪ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಅವರು ಸುದೀಪ್‌ ನಿವಾಸಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದ್ರೆ ಈಗಾಗಲೇ ಸುದೀಪ್‌ ಅವರು ನಾನ ರಾಜಕೀಯಕ್ಕೆ ಬರೋದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹೀಗಿದ್ದರೂ, ಈ ಬಗ್ಗೆ ಚರ್ಚೆ ಹುಟ್ಟುಕಾಹುತ್ತಿದೆ.

ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಭೇಟಿಯ ಉದ್ದೇಶದ ಬಗ್ಗೆ ಸುದೀಪ್‌ ಆಪ್ತರು ಬೇರೆಯದನ್ನೇ ಹೇಳುತ್ತಿದ್ದಾರೆ. ಡಿಕೆಶಿ ಒಡೆತನದ ಮಾಲ್ ವೊಂದರಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆ ಇದೆ. ಅದಕ್ಕೆ ಸುದೀಪ್ ಅವರನ್ನು ಆಹ್ವಾನಿಸಲು ಡಿಕೆಶಿ ಹೋಗಿದ್ದರು ಎನ್ನಲಾಗಿದೆ.

Share Post