LifestylePolitics

50ನೇ ವಯಸ್ಸಿನಲ್ಲಿ ತಂದೆಯಾದ ಪಂಜಾಬ್‌ ಸಿಎಂ ಭಗವಂತ್‌ ಮಾನ್‌

ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ತಂದೆಯಾಗಿದ್ದಾರೆ.. ತಮ್ಮ 50 ನೇ ವಯಸ್ಸಿನಲ್ಲಿ ಭಗವಂತ್‌ ಮಾನ್‌ ತಂದೆಯಾಗಿದ್ದಾರೆ.. ಅವ ಪತ್ನಿ ಡಾ.ಗುರುಪ್ರೀತ್‌ ಕೌರ್‌ ಅವರು ಹೆಣ್ಣುಮಗುವಿಗೆ ಜನ್ಮನೀಡಿದ್ದು, ಭಗವಂತ್‌ ಮಾನ್‌ ಫುಲ್‌ ಖುಷಿಯಾಗಿದ್ದಾರೆ..

ಇದನ್ನೂ ಓದಿ; 238 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋಲು; ಛಲ ಬಿಡದೆ ಪದ್ಮರಾಜ್‌ ಮತ್ತೆ ಸ್ಪರ್ಧೆ

ಭಗವಂತ್‌ ಮಾನ್‌ ಅವರು ಪಂಜಾಬ್‌ ಮುಖ್ಯಮಂತ್ರಿಯಾದ ಮೇಲೆ ಎರಡನೇ ಮದುವೆಯಾಗಿದ್ದರು.. 2022ರಲ್ಲಿ ವೈದ್ಯರಾದ ಡಾ.ಗುರುಪ್ರೀತ್‌ ಕೌರ್‌ ಅವರನ್ನು ಮದುವೆಯಾಗಿದ್ದರು.. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.. ಇದೀಗ ಡಾ.ಗುರುಪ್ರೀತ್‌ ಕೌರ್‌ ಅವರು ಮೊಹಾಲಿಯ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜ್ನಮ ನೀಡಿದ್ದಾರೆ. ಇದರಿಂದ ಭಗಗವಂತ್‌ ಮಾನ್‌  ಖುಷಿಯಾಗಿದ್ದು, ಸಂತೋಷವನ್ನು ಹಂಚಿಕೊಂಡಿದ್ದಾರೆ..

ಪಂಜಾಬ್ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ನಾಯಕರೂ ಆಗಿರುವ ಭಗವಂತ್ ಮಾನ್ 2022ರಲ್ಲಿ ಡಾ.ಗುರುಪ್ರೀರ್‌ ಕೌರ್‌ ಅವರನ್ನು ಮದುವೆಯಾಗಿದ್ದರು. ಮೊಹಾಲಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ; ದೆಹಲಿ ಪದಚ್ಯುತಿ ಅರ್ಜಿ; ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್‌ ರಿಲೀಫ್‌

ಭಗವಂತ್ ಮಾನ್ ಇದಕ್ಕೂ ಮುನ್ನ ಒಂದು ಮದುವೆಯಾಗಿದ್ದರು.. ಆದ್ರೆ 2015 ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಅನಂತರ ಭಗವಂತ್‌ ಮಾನ್‌ ಅವರಿಗೆ ಡಾ.ಗುರುಪ್ರೀತ್ ಕೌರ್ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿತ್ತು.. ಭಗವಂತ್‌ ಮಾನ್‌ ಅವರು ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದ ನಂತರ ಮುಖ್ಯಮಂತ್ರಿ ಸ್ಥಾನ ಒಲಿದುಬಂದಿತ್ತು..

ಪಂಜಾಬ್​ ಸಿಎಂ ಭಗವಂತ್‌ ಮಾನ್‌ ಅವರ ಮೊದಲ ಪತ್ನಿಗೆ ಓರ್ವ ಮಗ ಮತ್ತು ಮಗಳಿದ್ದಾರೆ. ಈಗ ಮತ್ತೊಂದು ಮಗು ಮನೆಗೆ ಬಂದಿದೆ..

ಇದನ್ನೂ ಓದಿ; ಕುಡಿಯುವ ನೀರಿಗಾಗಿ ಜಗಳ; 21 ವರ್ಷದ ಯುವಕನ ಹತ್ಯೆ!

ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಭಗವಂತ್‌ ಮಾನ್‌ ಅದರ ಬ್ಯುಸಿಯಲ್ಲಿದ್ದಾರೆ. ಚುನಾವಣೆ ಪ್ರಚಾರ ಮತ್ತಿತರ ಕಾರ್ಯದಲ್ಲಿ ಪಂಜಾಬ್‌ ಸಿಎಂ ಭಗವಂತ್ ಮಾನ್  ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಪುಟ್ಟ ಕಂದಮ್ಮನನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಅವರು ಕುಟುಂಬಸ್ಥರು ಮಗು ಜನಿಸಿದ ಸಂತಸದಲ್ಲಿದ್ದಾರೆ.

ಇದನ್ನೂ ಓದಿ; ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!

 

Share Post