BengaluruCrime

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್‌

ಬೆಂಗಳೂರು; ಮಾರ್ಚ್‌ 1 ರಂದು ನಡೆದಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. ಕೊನೆಗೂ ಶಂಕಿತ ಉಗ್ರ ಸಿಕ್ಕಿಬಿದ್ದಿದ್ದಾನೆ.

ರಾಮೇಶ್ವರಂ ಕೆಫೆ ಬಳಿ ಸ್ಫೋಟ ಮಾಡಿದ ಬಾಂಬ್‌ ತಯಾರಿಸಿದ್ದ ಪ್ರಮುಖ ಆರೋಪಿ ಮುಜಾಮುಲ್​ ಶರೀಫ್ ಎಂಬಾತನೇ ಬಂದಿತ.  ಎನ್​ಐಎ (NIA) ಅಧಿಕಾರಿಗಳು ಇಂದು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಅನಂತರ  ಪ್ರಮುಖ ಸಂಚುಕೋರನನ್ನು ಬಂಧಿಸಿದ್ದಾರೆ. ಈ ಬಗ್ಗೆ ಎನ್​ಐಎ ಅಧಿಕೃತವಾಗಿ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದೆ.

ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ಮಾಡಿ ಪರಿಶೀಲನೆ ಮಾಡಿತ್ತು. ಈ ವೇಳೆ ಬಾಮಬ್‌ ತಯಾರಿಸಿದ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ.. ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳಿಗೆ  ಮುಜಾಮಿಲ್​ ಶರೀಫ್​ ಕೀ ಕಾಂನ್ಸಪರೇಟರ್​​​ ಆಗಿದ್ದ ಎಂದು ಗೊತ್ತಾಗಿದೆ.. ಬಂಧಿತನ ಬಳಿ ಇದ್ದ  ವಿವಿಧ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್​ಐಎ ಮಾಹಿತಿ ನೀಡಿದೆ.

ಕೀ ಕಾಂನ್ಸಪರೇಟರ್​​​ ಆಗಿದ್ದ ಆರೋಪಿ ಮುಜಾಮಿಲ್​ ಶರೀಫ್​, ರಾಮೇಶ್ವರಂ ಕೆಫ್​ ಬ್ಲಾಸ್ಟ್​ ಆದ ಬಾಂಬ್​ ತಯಾರಿಕೆಯ ಪ್ರಮುಖ ಆರೋಪಿ ಎಂಬುದು ಖಚಿತವಾಗಿದೆ. ಅಲ್ಲದೇ ಮುಸಾವೀರ್​ ಹುಸೇನ್​ಗೆ ತುಂಬಾ ಆಪ್ತನಾಗಿದ್ದ ಎಂದು ತಿಳಿದುಬಂದಿದೆ.

 

Share Post